ಸುದ್ದಿಮೂಲ ವಾರ್ತೆ ಕವಿತಾಳ, ಡಿ.21:
ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಿಗಳಲ್ಲಿ ತೊಗರಿ ಬೆಳೆಯ ಕಟಾವು ಕೊನೆ ಹಂತದಲ್ಲಿದ್ದು ಸರ್ಕಾರ ತಕ್ಷಣ ತೊಗರಿ ಕೇಂದ್ರ ಪ್ರಾಾರಂಭ ಮಾಡಬೇಕು ಎಂದು ರೈತರು ಒತ್ತಾಾಯಿಸುತ್ತಿಿದ್ದಾರೆ.
ಪ್ರಸ್ತುತ ಮಾರುಕಟ್ಟೆೆಯಲ್ಲಿ ಪ್ರತಿ ಕ್ವಿಿಂಟಲ್ ತೊಗರಿಗೆ 7 ಸಾವಿರ ಇದ್ದು ಕಳೆದ ವರ್ಷ ಇದೇ ವೇಳೆ ಹತ್ತು ಸಾವಿರ ಇತ್ತು. ಬೆಳೆ ಕಟಾವು ಮಾಡಿ 15 ದಿನ ಸಮೀಪಿಸುತ್ತಿಿದೆ ಇಂದು ಅಥವಾ ನಾಳೆ ಬೆಲೆ ಏರಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುವ ರೈತರು ನಷ್ಟ ಸರಿದೂಗಿಸುವ ಬಗ್ಗೆೆ ಆಲೋಚಿಸುತ್ತಿಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಬೆಳೆದ ಬೆಳೆಗೆ ಹತ್ತು ಸಾವಿರ ರೂಪಾಯಿ ಸೂಕ್ತ ಬೆಲೆ ನಿಗದಿಪಡಿಸಿ ವಾರದೊಳಗೆ ತೊಗರಿ ಕೇಂದ್ರ ಪ್ರಾಾರಂಭ ಮಾಡಬೇಕು ಎಂದು ರೈತರಾದ ಮೌನೇಶ ಹಿರೇಕುರಬರು, ಮುಕ್ತರ್ ಪಾಶ ಆಗ್ರಹಿಸಿದರು.
ಎಕರೆಗೆ ಹತ್ತು ಸಾವಿರ ಲೀಜಿಗೆ ಮಾಡಿದ್ದೇವೆ ಗೊಬ್ಬರ ಕ್ರಿಿಮಿನಾಶಕ ಸೇರಿದಂತೆ ಪ್ರತಿ ಎಕರೆಗೆ ಹದಿನಾಲ್ಕು ಸಾವಿರ ಖರ್ಚು ಮಾಡಲಾಗಿದೆ. ಈ ವರ್ಷ ಮಳೆ ಹೆಚ್ಚು ಸುರಿದಿರುವದರಿಂದ ತೊಗರಿ ಬೆಳೆ ಇಳುವರಿ ಕಡಿಮೆಯಾಗಿ ಎಕರೆಗೆ ಎರಡರಿಂದ ಎರಡುವರೆ ಕ್ವಿಿಂಟಲ್ ಬಂದಿದೆ. ಸಾಲ ಮಾಡಿ ಹೊಲಕ್ಕೆೆ ಖರ್ಚು ಮಾಡಿ ಅಷ್ಟೊೊ ಇಷ್ಟೋೋ ಬೆಳೆ ತೆಗೆದುಕೊಂಡಿದ್ದೇವೆ. ಕೂಡಲೇ ತೊಗರಿ ಕೇಂದ್ರ ಪ್ರಾಾರಂಭ ಮಾಡದಿದ್ದರೆ ಮಾಡಿರುವ ಸಾಲಕ್ಕೆೆ ಬಡ್ಡಿಿಗೂ ಆಗದೆ ಸಾಲದ ಸುಳಿಯಲ್ಲಿ ಸಿಲುಕುವ ಪರಿಸ್ಥಿಿತಿ ಉಂಟಾಗಬಹುದು ಎನ್ನುವ ಆತಂಕ ಕಾಡುತ್ತಿಿದೆ ಎಂದು ರೈತರಾದ ನಾಗರಾಜ ಯಾದವ, ಆದಪ್ಪ ಹೀರಾ, ಇಸ್ಮಾಾಯಿಲ್, ಅಮರೇಶ ಕಟ್ಟಿಿಮನಿ, ಮೌನೇಶ, ತಿಮ್ಮಣ್ಣ ಯಾದವ, ಬಾಬಪ್ಪ ಯಾದವ ಅವರು ತಮ್ಮ ಅಳಲು ತೋಡಿಕೊಂಡರು.
ಕವಿತಾಳ ಹೋಬಳಿ ವ್ಯಾಾಪ್ತಿಿಯಲ್ಲಿ 6 ಸಾವಿರದ 800 ಹೆಕ್ಟರ್ ತೊಗರಿ ಬಿತ್ತನೆ ಆಗಿದೆ. ತೊಗರಿ ಬೆಳೆ 95 ರಷ್ಟು ಕಟಾವು ಆಗಿದೆ, ಹೆಕ್ಟರ್ ಗೆ 10 ಕ್ವಿಿಂಟಲ್ ಬರುವ ನಿರೀಕ್ಷೆ ಇದೆ ಇಳುವರಿ ಕಡಿಮೆ ಬರಲು ಕಾರಣ ಪ್ರತಿ ವರ್ಷ ಒಂದೆ ತರಹದ ಬೆಳೆ ಬಿತ್ತನೆ ಮಾಡುವುದರಿಂದ ಭೂಮಿಯಲ್ಲಿ ಶಕ್ತಿಿ ಕಡಿಮೆಯಾಗಿ ಇಳುವರಿ ಕಡಿಮೆ ಬರಲು ಕಾರಣವಾಗುತ್ತದೆ ಎಂದು ಕವಿತಾಳ ಕೃಷಿ ಅಧಿಕಾರಿ ಶಿವಶರಣ ಬೋವಿ ಕವಿತಾಳ ತಿಳಿಸಿದರು.
ಕವಿತಾಳ : ತೊಗರಿ ಕೇಂದ್ರ ಆರಂಭಕ್ಕೆ ಆಗ್ರಹ

