ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.22:
ಮೆಟ್ರೋೋ ಹಂತ-3ರ ಕಾಮಗಾರಿ ಟೆಂಡರ್ ಡಿಸೆಂಬರ್ ಅತ್ಯಂತದಲ್ಲಿ ಕರೆಯಲು ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಂಡಿದೆ ಎಂದು ಬೆಂಗಳೂರು ನಗರಾಭಿವೃದ್ಧಿಿ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಮೆಟ್ರೋೋ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೆಟ್ರೋೋ ರೈಲು ನಿಗಮವು ಡಿಸೆಂಬರ್ ತಿಂಗಳೊಳಗೆ ಹಂತ-3ರ ಅಡಿ 100 ಕಿ.ಮೀ. ಮೆಟ್ರೋೋ ಮಾರ್ಗಗಳಿಗೆ 25,000 ಕೋಟಿ ರೂ.ಗಳ ಟೆಂಡರ್ ಕರೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರಲ್ಲಿ ಮೆಟ್ರೋೋ ಮತ್ತು ರಸ್ತೆೆ ಕಾರಿಡಾರ್ಗಳನ್ನು ಹೊಂದಿರುವ 42 ಕಿ.ಮೀ. ಡಬಲ್ ಡೆಕ್ಕರ್ ಕಾರಿಡಾರ್ಗಳು ಸೇರಿವೆ. ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಉದ್ದದ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಿಸಲಾಗುತ್ತಿಿದೆ ಎಂದು ತಿಳಿಸಿದರು.
ಮೆಟ್ರೋೋ ಮೂರನೇ ಹಂತದಲ್ಲಿ ಕೆಂಪು ಹಾಗೂ ಬೂದು ಮಾರ್ಗಗಳು ನಿರ್ಮಾಣಗೊಳ್ಳಲಿವೆ. ಕೆಂಪು ಮಾರ್ಗ ಹೆಬ್ಬಾಾಳದಿಂದ ಸರ್ಜಾಪುರದವರೆಗೆ ಹಾದು ಹೋಗಲಿದೆ. ಇನ್ನು ಬೂದು ಮಾರ್ಗ ವಿಜಯನಗರದ ಹೊಸಹಳ್ಳಿಿ-ಕಡಬಗೆರೆ (12.15 ಕಿ.ಮೀ) ಮಾರ್ಗಕ್ಕೆೆ ಟೆಂಡರ್ ಕರೆಯಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿದೆ. ಜೆ.ಪಿ. ನಗರದಿಂದ ಕೆಂಪಾಪುರವರೆಗೆ 28.4 ಕಿ.ಮೀ ಡಬಲ್ ಡೆಕ್ಕರ್ ಮಾರ್ಗಕ್ಕೂ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ 2027ರ ಡಿಸೆಂಬರ್ ವೇಳೆಗೆ 175 ಕಿ.ಮೀ. ಮೆಟ್ರೋೋ ಜಾಲ ವಿಸ್ತರಣೆಯಾಗಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಐಟಿ ನಗರ ಬೆಂಗಳೂರು ಪ್ರಸ್ತುತ 96 ಕಿ.ಮೀ ಮೆಟ್ರೋೋ ಜಾಲ ಹೊಂದಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 80 ಕಿ.ಮೀ ಅನ್ನು ಇದಕ್ಕೆೆ ಸೇರಿಸಲಾಗುವುದು. ಡಿಸೆಂಬರ್ 26ರ ವೇಳೆಗೆ 41 ಕಿ.ಮೀ ಜಾಲ ಮೆಟ್ರೋೋಗೆ ಸೇರ್ಪಡೆಯಾಗಲಿದೆ ಮತ್ತು 2027ರ ಡಿಸೆಂಬರ್ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣವನ್ನು ಸಂಪರ್ಕಿಸುವ ಮೆಟ್ರೋೋ ಮಾರ್ಗವೂ ಸೇರಿದಂತೆ 38 ಕಿ.ಮೀ ಮಾರ್ಗಗಳು ಸೇರ್ಪಡೆಯಾಗಲಿವೆ ಎಂದರು.
ಬೆಂಗಳೂರು ನಗರಾಭಿವೃದ್ಧಿಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ, 24 ಕಿ.ಮೀ ಉದ್ದದ ಹಳದಿ ಮೆಟ್ರೋೋ ಮಾರ್ಗವನ್ನು ಕಾರ್ಯಾರಂಭಿಸಲಾಗಿದೆ. ಈ ಮಾರ್ಗದಲ್ಲಿ ಸುಮಾರು ಒಂದು ಲಕ್ಷ ಜನರು ಪ್ರಯಾಣಿಸುತ್ತಿಿದ್ದಾರೆ. ಇದರಿಂದಾಗಿ ಎಲೆಕ್ಟ್ರಾಾನಿಕ್ ಸಿಟಿಯ ಸುತ್ತಮುತ್ತಲಿನ ರಸ್ತೆೆಗಳಲ್ಲಿ ಸಂಚಾರ ದಟ್ಟಣೆ ಶೇ.30 ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದರು.
ನಗರದ ಹೊರ ವಲಯಗಳಿಗೂ ಮೆಟ್ರೋೋ: ನಗರದ ಹೊರ ವಲಯಗಳಾದ, ಮಾಗಡಿ, ತಾವರಕೆರೆ, ಹೊಸಕೋಟೆ ಮತ್ತು ಬಿಡದಿಯನ್ನು ಮೆಟ್ರೋೋ ಮಾರ್ಗಗಳೊಂದಿಗೆ ಸಂಪರ್ಕಿಸಲು ಯೋಜಿಸಲಾಗುತ್ತಿಿದೆ. ಮೆಟ್ರೋೋ ನಿಲ್ದಾಾಣಗಳ ಸುತ್ತಮುತ್ತಲು ಭೂಮಿ ಬಳಕೆ ಮಾಡಿಕೊಳ್ಳಲು ಮತ್ತು ವಾಣಿಜ್ಯ ಚಟುವಟಿಕೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಿಪಡಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.
ಮೆಟ್ರೋೋ ಬಳಕೆ ಹೆಚ್ಚುತ್ತಿಿರುವುದರ ಮೆಟ್ರೋೋ ನಿಲ್ದಾಾಣಗಳಲ್ಲಿ ದ್ವಿಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಬಹು ಹಂತದ ಪಾರ್ಕಿಂಗ್ ಸೌಲಭ್ಯಗಳ ಅಗತ್ಯತೆ ಇದೆ. ನ್ಯಾಾಯಾಲಯದ ಪ್ರಕರಣಗಳು ಮತ್ತು ಭಾರಿ ಸಂಚಾರ ದಟ್ಟಣೆಯಿಂದಾಗಿ ಕೆಲವು ಸ್ಥಳಗಳಲ್ಲಿ ಭೂಸ್ವಾಾಧೀನಕ್ಕೆೆ ತೊಂದರೆಗಳಿವೆ ಎಂದು ಹೇಳಿದರು.
ಸರ್ಕಾರವು ಒಪ್ಪಿಿತ ವೆಚ್ಚ ಹಂಚಿಕೆ ಮಾದರಿಗೆ ಬದ್ಧವಾಗಿರುತ್ತದೆ. ನಾವು ನಿಗದಿಯಾಗಿರುವ ಶೇಕಡಾವಾರು ಪ್ರಮಾಣವನ್ನು ಮೀರಿ ಖರ್ಚು ಮಾಡಲು ಹೋಗುವುದಿಲ್ಲ. ಗುತ್ತಿಿಗೆದಾರರು ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಡಿ ಹೂಡಿಕೆ ಮಾಡಬೇಕಾಗುತ್ತದೆ. ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಬೈ ಸೇರಿದಂತೆ ಇತರ ನಗರಗಳಿಗೆ ಹೋಲಿಸಿದರೆ ಮೆಟ್ರೋೋ ಯೋಜನಾ ವೆಚ್ಚ ಎಷ್ಟಾಾಗುತ್ತದೆ ಪರಿಶೀಲಿಸುವುದಾಗಿ ತಿಳಿಸಿದರು.
ಮೆಟ್ರೋೋ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದ ಸಚಿವರು ಮೆಟ್ರೋೋ 3 ನೇ ಹಂತದ ಕಾಮಗಾರಿಗೆ ಶೀಘ್ರದಲ್ಲೇ ಟೆಂಡರ್ :ಡಿಸಿಎಂ ಡಿಕೆಶಿ

