ಸುದ್ದಿಮೂಲ ವಾರ್ತೆ ಸಿಂಧನೂರು , ಜ.06:
ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ 125 ಬೋರ್ಗಳನ್ನು ಬಿಡುಗಡೆ ಮಾಡಿಸಿದ್ದು, ಅವುಗಳ ರದ್ದಿಗೆ ಶಾಸಕ ಹಂಪನಗೌಡ ಬಾದರ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವದು ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗದ ವಿರೋಧಿ ಧೋರಣೆ ತೋರಿಸುತ್ತದೆ ಎಂದು ಕೆಪಿಸಿಸಿ ಎಸ್ಟಿ ವಿಭಾಗದ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ ಆರೋಪಿಸಿದರು.
ಮಂಗಳವಾರ ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾಾತರು ಮೊದಲಿನಿಂದಲೂ ಕಾಂಗ್ರೆೆಸ್ ಬೆಂಬಲಿಸಿತ್ತಾಾ ಬಂದಿದ್ದಾಾರೆ. ರಾಜ್ಯದಲ್ಲಿ ಕಾಂಗ್ರೆೆಸ್ ಅಧಿಕಾರಕ್ಕೆೆ ಬಂದ ನಂತರ ಐದು ಗ್ಯಾಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜೀವನ ಸುಧಾರಣೆ ಮಾಡಿದೆ. ಎಂಎಲ್ಸಿ ಬಸನಗೌಡ ಬಾದರ್ಲಿ ಸಾರಥಿ ಯೋಜನೆಯಡಿ ಅನೇಕ ಕಾರುಗಳನ್ನು ಕೊಡಿಸುವ ಮೂಲಕ ಬದುಕು ಕಟ್ಟಿಿಕೊಟ್ಟಿಿದ್ದಾಾರೆ. 125 ರೈತರಿಗೆ ಗಂಗಾ ಕಲ್ಯಾಾಣ ಯೋಜನೆಯಡಿ 125 ಬೋರ್ವೆಲ್ ತಂದು, ಕಾರ್ಯಕರ್ತರಿಗೆ ಬೆನ್ನೆೆಲುಬಾಗಿ ನಿಂತಿದ್ದಾಾರೆ ಎಂದರು.
ಶಾಸಕ ಹಂಪನಗೌಡ ಬಾದರ್ಲಿ ಅವರು ಈ ಬೋರ್ವೆಲ್ಗಳ ಲಾನುಭವಿಗಳ ಪಟ್ಟಿಿ ರದ್ದುಪಡಿಸುವಂತೆ ಪತ್ರ ಬರೆದಿರುವದು ಸಂಗತಿ. ಶಾಸಕ ಹಂಪನಗೌಡ ಬಾದರ್ಲಿ ಪರಿಶಿಷ್ಟರ, ಹಿಂದುಳಿದ ವರ್ಗ, ಅಲ್ಪಸಂಖ್ಯಾಾತರ ಮತಗಳನ್ನು ಪಡೆದು ಗೆದ್ದಿದ್ದಾಾರೆ. ಶಾಸಕರಾಗಿ ದುಪ್ಪಟ್ಟು ರೀತಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಯೋಜನೆಗಳು ಲಾನುಭವಿಗಳಿಗೆ ತಲುಪದಂತೆ ಮಾಡಿದ್ದಾಾರೆ. ಇದೇ ಧೋರಣೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಎಸ್ಸಿಿ ಘಟಕದ ಅಧ್ಯಕ್ಷ ಅಮರೇಶ ಗಿರಿಜಾಲಿ, ಮುಖಂಡರಾದ ಈರಣ್ಣ ನಾಯಕ, ಪ್ರಕಾಶ ಸೋಮಲಾಪುರ, ಯುವ ಕಾಂಗ್ರೆೆಸ್ ಅಧ್ಯಕ್ಷ ಹನುಮಂತ ಕರ್ನಿ, ಜೈ ಭೀಮ ಘರ್ಜನೆಯ ಅಧ್ಯಕ್ಷ ನಿರುಪಾದಿ ಸಾಸಲಮರಿ, ತಿಮ್ಮಣ್ಣ ನಾಯಕ, ಸಿದ್ದಪ್ಪ ಸೋಮಲಾಪುರ, ವಿರುಪಣ್ಣ ಚನ್ನಳ್ಳಿಿ, ವೆಂಕಟೇಶ ನಾಯಕ ಪುಲದಿನ್ನಿಿ, ಅಶೋಕ ಗೊರೇಬಾಳ ಹಾಗೂ ಇತರರು ಇದ್ದರು.
ಶಾಸಕರಿಂದ ಪರಿಶಿಷ್ಟ, ಹಿಂದುಳಿದ ವಿರೋಧಿ ಧೋರಣೆ ಕೆಪಿಸಿಸಿ ಎಸ್ಟಿ ಘಟಕದ ಕಾರ್ಯದರ್ಶಿ ವೆಂಕಟೇಶ ನಾಯಕ ಆರೋಪ

