ಸುದ್ದಿಮೂಲ ವಾರ್ತೆ ಬೀದರ್, ಜ.08:
ಕಲ್ಯಾಾಣ ಕರ್ನಾಟಕ ಭಾಗದ ಅಭಿವೃದ್ಧಿಿಗೆ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಗಡಿ ಜಿಲ್ಲೆಗೆ ವರ್ಷಕ್ಕೆೆ ಹತ್ತಿಿರ ಹತ್ತಿಿರ 500 ಕೋಟಿ ರೂ ಅನುದಾನ ನೀಡುತ್ತಿಿದೆ. ಆದರೆ, ಅಧಿಕಾರಿಗಳ ಆಟಾಟೋಪದಿಂದಾಗಿ ಸರ್ಕಾರದ ಹಣ ಭ್ರಷ್ಟಾಾಚಾರಕ್ಕೆೆ ಎಡೆಮಾಡಿಕೊಡುತ್ತಿಿದೆ.
ಹೌದು, 2023-24 ಸಾಲಿನ ಆಯವ್ಯಯ ಘೋಷಣೆಯನ್ವಯ ಕಲ್ಯಾಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯಲ್ಲಿ 60 ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ಮಂಜೂರಾತಿ ಮಾಡಲಾಗಿತ್ತು. ಸದರಿ ಕಾಮಗಾರಿ ಗುತ್ತಿಿಗೆಯನ್ನು ಕೆಆರ್ಐಡಿಎಲ್ಗೆ ವಹಿಸಲಾಗಿತ್ತು.
ಆದರೆ, ಕೆಆರ್ಡಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಕಾರದ ಮಹತ್ವಕಾಂಕ್ಷೆ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರದಿಂದ ಬಹುತೇಕ ಅನುದಾನ ಮಂಜೂರಾಗಿದ್ದರೂ ಕೂಡ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೂ ಶೌಚಾಲಯಗಳು ಬಳಕೆಗೆ ಸಿಗುತ್ತಿಿಲ್ಲ ಎಂದು ರಾಹುಲ್ ಗಾಂಧಿ ವಿಚಾರ ಮಂಚ್ ವೇದಿಕೆ ಜಿಲ್ಲಾಧ್ಯಕ್ಷ ಪ್ರೇಮನಾಥ್ ಆರ್. ಗಾಂವಕರ್ ಆರೋಪಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನ ಕೆಆರ್ಐಡಿಎಲ್ ವ್ಯವಸ್ಥಾಾಪಕ ನಿರ್ದೇಶಕರಿಗೆ ಪತ್ರ ಬರೆದು ಕ್ರಮಕ್ಕೆೆ ಒತ್ತಾಾಯಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 60 ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ಮಂಜೂರಾತಿಯಾಗಿದೆ. ದಿನಾಂಕ 28.03.2024 ರಂದು ಅನುದಾನ ಬಿಡುಗಡೆಯಾಗಿದ್ದು, 20 ತಿಂಗಳ ಕಳೆದರೂ ಇಲ್ಲಿವರೆಗೂ ಕಾಮಗಾರಿ ಪೂರ್ಣಗೊಳಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲು ಬಹಿರ್ದೆಸೆ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸುವ ಮೂಲಕ ಗ್ರಾಾಮೀಣ ಜನರ ಆರೋಗ್ಯವನ್ನು ಕಾಪಾಡುವುದು ಸ್ವಚ್ಛ ಭಾರತ ಮಿಷನ್ (ಗ್ರಾಾಮೀಣ) ಯೋಜನೆ ಮುಖ್ಯ ಉದ್ದೇಶವಾಗಿದೆ.
ಸಾರ್ವಜನಿಕರ ತೆರಿಗೆ ಹಣ ಮನಬಂದಂತೆ ದುರುಪಯೋಗ ಮಾಡಿಕೊಂಡು ಭ್ರಷ್ಟಾಾಚಾರ ಎಸಗಲಾಗಿದೆ. ಬೀದರ್ ತಾಲೂಕಿನ ಶ್ರೀಮಂಡಲ್ ಮತ್ತು ಖಾಜಾಪುರ್ ಗ್ರಾಾಮದಲ್ಲಿ ಕಾಮಗಾರಿ ಪೂರ್ಣಗೊಂಡಿರುತ್ತದೆ ಎಂದು ಕೆಆರ್ಐಡಿಎಲ್ ಅಧಿಕಾರಿಗಳು ದೂರುದಾರರಿಗೂ ಹಾಗೂ ಮೇಲಾಧಿಕಾರಿಗಳಿಗೂ ಸುಳ್ಳು ಪ್ರಗತಿ ವರದಿ ಮಾಹಿತಿ ಸಲ್ಲಿಸಿರುತ್ತಾಾರೆ ಎಂದು ಆರೋಪಿಸಿದ್ದಾರೆ.
ಕರ್ತವ್ಯದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾಾರಿ ಮಾಡಿ ವಿಳಂಬ ಮತ್ತು ಅಪೂರ್ಣ ಕಾಮಗಾರಿ ನಡೆಸಿರುವ ಕೆಆರ್ಐಡಿಎಲ್ ಕಾರ್ಯನಿರ್ವಾಹಕ ಅಭಿಯಂತರ ಅಭಿಷೇಕ್ ಪೋಲಾ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಮುದಾಯ ನೈರ್ಮಲ್ಯ ಘಟಕ ಕಡತಕ್ಕೆ… ಅಪೂರ್ಣ ಕಾಮಗಾರಿಗೆ ಪೂರ್ತಿ ಬಿಲ್ ಪಡೆದ ಕೆಆರ್ಐಡಿಎಲ್ !

