ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.01:
ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಪರಿಶ್ರಮದಿಂದ ಅಭ್ಯಾಾಸ ಮಾಡಿದರೆ ಸ್ವಾಾವಲಂಬಿಯಾಗಿ ಬದುಕು ಕಟ್ಟಿಿಕೊಳ್ಳಬಹುದಾಗಿದೆ ಎಂದು ಸಿಂಧನೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಾಸಕ ಶರಣಪ್ಪ ಹೊಸಳ್ಳಿಿ ಹೇಳಿದರು.
ತಾಲೂಕಿನ ಅಲಬನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಯುವಜನಾಂಗದ ಚಿತ್ತ ಸ್ವಾಾವಲಂಬನೆಯತ್ತ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಾಸ ನೀಡಿದರು. ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಿಯೂ ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಭಿನ್ನ ಚಿಂತನೆ ಮಾಡಬೇಕು. ಸ್ಪರ್ಧಾತ್ಮಕ ದಿನಗಳಲ್ಲಿ ಯಾವುದೇ ಹುದ್ದೆೆಗಳನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಯಾವ ವಿಷಯದಲ್ಲಿ ಆಸಕ್ತಿಿ ಇರುತ್ತದೆ ಆ ವಿಷಯದಲ್ಲಿ ಅತ್ಯಂತ ಪರಿಶ್ರಮದಿಂದ ಪ್ರಯತ್ನ ಮಾಡಿದಾಗ ಮಾತ್ರ ಕನಸುಗಳು ಈಡೇರಲು ಸಾಧ್ಯ ಎಂದರು.
ಕನ್ನಡ ಉಪನ್ಯಾಾಸಕ ಕೆ.ಮಹಿಬೂಬ್ ಕಾರ್ಯಕ್ರಮದ ಅಧ್ತಕ್ಷತೆ ವಹಿಸಿದ್ದರು. ಶ್ರೀ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌೌಢಶಾಲೆಯ ಮುಖ್ಯೋೋಪಾಧ್ಯಾಾಯ ಹಂಪನಗೌಡ ಬೂತಲದಿನ್ನಿಿ, ಉಪನ್ಯಾಾಸಕ ವಿರೇಶ ಕನ್ನಾಾರಿ, ಕೆ.ಯಾಕೂಬ್ ರೌಡಕುಂದಾ, ಮೌನೇಶ ಬಳಗನೂರು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಬಿ.ರವಿಕುಮಾರ ಸಾಸಲಮರಿ, ಸಹ ಕಾರ್ಯಾಕ್ರಮಾಧಿಕಾರಿ ಶಿವರಾಜ ಅಡಗಲ್ ಭಾಗವಹಿಸಿದ್ದರು. ಸಂಜೀವಿನಿ ಮಾಡಶಿರವಾರ ನಿರೂಪಿಸದರೆ, ಚಾಮುಂಡಿ ಗೋಮರ್ಸಿ ಸ್ವಾಾಗತಿಸಿದರು ಹಾಗೂ ನಿರುಪಾದಿ ಬೆಳಗುರ್ಕಿ ವಂದಿಸಿದರು.
ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು : ಶರಣಪ್ಪ ಹೊಸಳ್ಳಿ

