ಸುದ್ದಿಮೂಲ ವಾರ್ತೆ ಹೊಸಪೇಟೆ, ಜ.06:
ತಾಲೂಕಿನ ಕಮಲಾಪುರ ಸಮೀಪದ ವೆಂಕ ಟಾಪುರಕ್ಯಾಾಂಪಿನಲ್ಲಿ ನಡೆದ ವಿವಾಹಿತೆ ಮಹಿಳೆಯ ಕೊಲೆ ಪ್ರಕರಣ ಮಾಸುವ ಮುನ್ನವೇ ನಗರದ ಚಾಪಲಗಡ್ಡ ಪ್ರದೇಶದಲ್ಲಿ ಮತ್ತೊೊಬ್ಬ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
ನಗರದ ರೈಲ್ವೆೆ ಸ್ಟೇಶನ್ ರಸ್ತೆೆಯಲ್ಲಿರುವ ಚಾಲಗಡ್ಡೆೆ ಪ್ರದೇಶದ ನಿವಾಸಿ ಉಮಾ (3 5) ಕೊಲೆಯಾದ ಮಹಿಳೆ. ಆಂಧ್ರ ಪ್ರದೇಶದ ಮೂಲದ ರಘು ಅಲಿಯಾಸ್ ರಾಮಾಂಜನಿ ಎಂಬ ವ್ಯಕ್ತಿಿಯೊಂದಿಗೆ ಕಳೆದ 13 ವರ್ಷಗಳ ಹಿಂದೆ ಉಮಾಳ ವಿವಾಹವಾಗಿ, ದಂಪತಿಗೆ ಮೂರು ಮಕ್ಕಳು ಇದ್ದರು.
ಕಳೆದ 6 ವರ್ಷಗಳಿಂದ ಪತಿ ಯಿಂದ ಉಮಾ ದೂರವಾಗಿ ಚಾಪಲಗಡ್ಡೆೆಯಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದಳು.
ಕಳೆದ ನಾಲ್ಕು ತಿಂಗಳ ಹಿಂದೆ ಖಾಜಾ ಹುಸೇನ್ ಎಂಬ ವ್ಯಕ್ತಿಿಯೊಂದಿಗೆ ವಿವಾಹವಾದ್ದಳು ಎನ್ನಲಾಗಿದೆ.
ಈ ಪ್ರಕರಣ ಕುರಿತಂತೆ ಖಾಜಾ ಹುಸೇನ್ ಎಂಬ ವ್ಯಕ್ತಿಿಯನ್ನು ಚಿತ್ತವಾಡ್ಗಿಿ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಜಾಹ್ನವಿ ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಾ ಧಿಕಾರಿ ಮಂಜುನಾಥ್ ಹಾಗೂ ಡಿವೈಎಸ್ಪಿಿ ಡಾ. ಮಂಜುನಾಥ್ ತಳವಾರ ಸ್ಥಳಕ್ಕೆೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸಪೇಟೆ : ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ

