ಸುದ್ದಿಮೂಲವಾರ್ತೆ
ಕೊಪ್ಪಳ,ಆ.10: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಲ್ಯಾಣ ಮಂಟಪದ ಕಾಮಗಾರಿಗೆ ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರಡ್ಡಿ ಅಂಗನಕಟ್ಟಿಯವರು ಒಂದು ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ.
ರೆಡ್ಡಿ ಸಮಾಜದ ಹಿರಿಯರ ಸಮ್ಮುಖದಲ್ಲಿ ರೂ. 100000 ಗಳನ್ನು ದೇಣಿಗೆ ನೀಡಿದರು, ಸಮಾಜ ಸೇವೆ ಯಲ್ಲಿ ಗುರುತಿಸುಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಂಗನಕಟ್ಟಿ ಕುಟುಂಬದವರಿಗೆ ರೆಡ್ಡಿ ಸಮಾಜದ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಎಸ್. ಬಿ. ನಾಗರಳ್ಳಿ, ವೆಂಕಾರಡ್ಡಿ ವಕೀಲರು, ಕಾಶಿನಾಥರಡ್ಡಿ ಅವಾಜಿ, ಗುತ್ತಿಗೆದಾರರಾದ ಮಹಾಲಿಂಗಪ್ಪ ಮೊದಲಾದವರು ಇದ್ದರು.