ಸುದ್ದಿಮೂಲ ವಾರ್ತೆ ರಾಯಚೂರು, ಜ.25:
ಜಿಲ್ಲೆೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಾಮದ ಕುಡಿಯುವ ನೀರಿಗಾಗಿ ಕೋಟಿ ಹಣ ಮಂಜೂರಾದರೂ ಈಗಲೂ ಪಟ್ಟಭದ್ರ ಹಿತಾಸಕ್ತಿಿಗಳ ಷಡ್ಯಂತ್ರದಿಂದ ಯೋಜನೆ ಅಪೂರ್ಣವಾಗಿ ಉಳಿದಿದೆ ಎಂದು ಅತ್ತನೂರು ಕುಡಿಯುವ ನೀರು ಹೋರಾಟ ಸಮಿತಿಯ ಅಧ್ಯಕ್ಷ ಭೀಮರಾಯಸ್ವಾಾಮಿ ಆಪಾದಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, 2009-10ರಲ್ಲಿ ರಾಜೀವಗಾಂಧಿ ಮಿಷನ್ ಅಡಿ 11 ತಿಂಗಳಲ್ಲಿ ಗ್ರಾಾಮದ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸುವ ಷರತ್ತಿಿನೊಂದಿಗೆ ಅಂದು 9 ಕೋಟಿ 53 ಲಕ್ಷ ಮಂಜೂರಾಗಿತ್ತುಘಿ.ಆದರೂ ಕಾಮಗಾರಿ ಅಪೂರ್ಣವಾಗಿ ಉಳಿಯಿತು. ಯೋಜನೆ ಮಂಜೂರಾಗಿ 8ವರ್ಷದ ಬಳಿಕ 2018ರಲ್ಲಿ ನೀರಿನ ಕೆರೆಯ ಸ್ಥಳ ನೋಂದಣಿಯಾಗಿ ತಜ್ಞರ ಸಮಿತಿ ಭೇಟಿ ನೀಡಿದಾಗ ಸ್ಥಳ ಬದಲಾವಣೆಗೆ ಶಿಾರಸ್ಸು ಮಾಡಿದ್ದರಿಂದ 2020ರಲ್ಲಿ ಆ ಯೋಜನೆ ಸ್ಥಗಿತವಾಯಿತು ಎಂದು ವಿವರಿಸಿದರು.
ಜನಪ್ರತಿನಿಧಿಗಳ ನಿರಾಸಕ್ತಿಿ, ಅಧಿಕಾರಿಗಳ ನಿರ್ಲಕ್ಷದಿಂದಾಗಿ ಮರು ಟೆಂಡರ್ ಕರೆಯದ ಕಾರಣ ಕಾಮಗಾರಿ ಮೊಟಕುಗೊಂಡಿತು.ಈಗ ಜಲ ಜೀವನ ಮಿಷನ್ ಯೋಜನೆಯಡಿ ಮತ್ತೆೆ 1 ಕೋಟಿ 30ಲಕ್ಷ ರೂ ಮಂಜೂರಿಯಾದರೂ ಗ್ರಾಾಮಸ್ಥರಿಗೆ ಕುಡಿಯುವ ನೀರೇ ಇಲ್ಲದಂತಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.ಆದರೆ, ಷಡ್ಯಂತರ ಮಾಡಿದವರು ಯಾರೆಂಬ ಗುಟ್ಟು ಬಿಟ್ಟುಕೊಡಲಿಲ್ಲಘಿ.
ಕುಡಿಯುವ ನೀರಿನ ಕೆರೆಗೆ 17 ಎಕರೆ 17 ಗುಂಟೆ ಕೆರೆ ಜಾಗವಿದ್ದು ಕಾಮಗಾರಿ ನಡೆಯದೇ ಇರುವುದರಿಂದ ಅಲ್ಲಿ ಅಕ್ರಮ ಮರಂ ದಂಧೆ ಆರಂಭವಾಗಿದೆ. ತಡೆಯಬೇಕಾದ ಅಧಿಕಾರಿಗಳು ಮುಂದಾಗುತ್ತಿಿಲ್ಲಘಿ. ಇದೇ ಮಾರ್ಗದಲ್ಲಿ ಸಚಿವ, ಶಾಸಕರು ಸಂಚರಿಸುತ್ತಿಿದ್ದಾಾರೆ ಗ್ರಾಾಮಸ್ಥರು ರಸ್ತೆೆ ಮೇಲೇಯೆ ನೀರು ಹೊತ್ತು ಸಾಗಿದರೂ ಕಾಳಜಿಯೇ ಇಲ್ಲಘಿ. ನಮ್ಮ ದುಸ್ಥಿಿತಿ ಕಂಡು ಯಾರೊಬ್ಬರ ಕರುಳು ಕರಗುತ್ತಿಿಲ್ಲಘಿ. ನೀರಿನ ಬವಣೆ ತಪ್ಪುುತ್ತಿಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಅಕ್ರಮದ ಬಗ್ಗೆೆ ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿಯವರು ಸದನದಲ್ಲಿ ಧ್ವನಿ ಎತ್ತಿಿದ್ದು ಗ್ರಾಾಮೀಣಾಭಿವೃದ್ದಿ ಸಚಿವರು ಜೆಜೆಎಂ ಅಡಿ ಕಳೆದ ತಿಂಗಳು ಪೂರ್ಣಗೊಳಿಸುವುದಾಗಿ ನೀಡಿದ ಭರವಸೆ ಈಗಲೂ ಈಡೇರಿಲ್ಲ ಸುಳ್ಳು ಹೇಳಿ ದಾರಿ ತಪ್ಪಿಿಸಿದ್ದಾಾರೆ. ಸಚಿವರಿಗೆ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾಾರೆ. ಹೀಗಾಗಿ, ಉಸ್ತುವಾರಿ ಸಚಿವರು ಈ ಯೋಜನೆಯನ್ನು ತನಿಖೆಗೊಳಪಡಿಸಿ ಅಡ್ಡಿಿಯಾದವರ ವಿರುದ್ಧ ಕ್ರಮ ವಹಿಸಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ಬವಣೆ ಪರಿಹರಿಸಬೇಕು. ಇಲ್ಲವಾದರೆ ಗ್ರಾಾಮದಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆೆ ತಡೆದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಗ್ರಾಾಮದ ಮುಖಂಡರಾದ ಹನುಮಂತರಾಯ ಗಚ್ಚಿಿನಮನೆ, ಬಸವಂತ ಪಾಟೀಲ್ ವಕೀಲ, ಬಸವರಾಜ ನಾಯಕ ಅತ್ತನೂರು, ಶಿವುಪುತ್ರನಾಯಕ, ಹಮೀದ ಪಾಷಾ, ರ್ಇಾನ್ ಇತರರಿದ್ದರು.

