ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಸರಳ ಸಾಧಾರಣ ಬದುಕು ನಡೆಸಿದ ವೇಮನರಂತ ಸಂತರ ಜಯಂತಿ ಗಳು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ಚಿಂತನೆ ತತ್ವಗಳ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.
ನಗರದ ಪಂ. ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಸಾಮಾನ್ಯ ಜೀವನ ನಡೆಸಿದ ಮಹಾಯೋಗಿ ವೇಮನರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ಸಮಾಜದ ಬಂಧುಗಳ ಬೇಡಿಕೆಯಂತೆ ನಗರದಲ್ಲಿ ನಿವೇಶನ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ವೇಮನ ಮಂದಿರ ನಿರ್ಮಾಣವಾಗಲಿದೆ. ವೇಮನ ಸಮುದಾಯ ಭವನ ನಿರ್ಮಾಣಕ್ಕೆೆ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು.
ರಾಯಚೂರು ತಹಶೀಲ್ದಾಾರ ಸುರೇಶ್ ವರ್ಮಾ ಮಾತನಾಡಿ, ಮಹಾಯೋಗಿ ವೇಮನರು ಆಧ್ಯಾಾತ್ಮಿಿಕ ಜೀವನಕ್ಕೆೆ ಬರಲು ಹೇಮರೆಡ್ಡಿಿ ಮಲ್ಲಮ್ಮ ಅವರು ಕಾರಣರಾದರು. ಸಮಾಜದ ಏಳಿಗೆಗೆ ಅವರು ಶ್ರಮಿಸಿದ್ದು, ಎಲ್ಲ ಭಾರತೀಯರು ಸೇರಿ ವೇಮನ ಜಯಂತಿ ಆಚರಣೆ ಮಾಡಬೇಕು. ಹೇಮರೆಡ್ಡಿಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಆಚಾರ, ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಮ್ಮೆೆಲ್ಲರಿಂದ ಆಗಬೇಕೆಂದು ಹೇಳಿದರು.
ಸಾಮಾಜಿಕ ಸಮಸ್ಯೆೆ ಮತ್ತು ಪಿಡುಗುಗಳ ನಿವಾರಣೆಯಲ್ಲಿ ಹಲವಾರು ಶ್ರೇಷ್ಠ ದಾರ್ಶನಿಕರು, ಸಂತರು, ಶರಣರು ಮಹತ್ವದ ಪಾತ್ರವಹಿಸಿದ್ದು, ಅದರಲ್ಲಿ ವೇಮನರ ಕೊಡುಗೆ ಗಮನಾರ್ಹವಾಗಿದೆ. ಅವರ ಆಡು ಭಾಷೆಯ ಪದ್ಯಗಳಲ್ಲಿನ ತತ್ವಗಳು ಮನಪರಿವರ್ತನೆಗೊಳಿಸುವ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿವೆ ಎಂದರು.
ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿಿ ಮಾತನಾಡಿ, ತೆಲುಗಿನ ನಾಡಗೀತೆಯಲ್ಲಿ ಹೇಮರೆಡ್ಡಿಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಅವರು ಹೆಸರನ್ನು ಉಲ್ಲೇಖಿಸಲಾಗಿದೆ. ರೆಡ್ಡಿಿ ಎನ್ನುವುದು ನಾಯಕತ್ವದ ಪರ್ಯಾಯ ಹೆಸರಾಗಿದ್ದು, ರೆಡ್ಡಿಿ ಎಂಬ ಪದವು ರಾಷ್ಟ್ರಕೂಟರ ಆಳ್ವಿಿಕೆಯಲ್ಲಿ ಚಾಲ್ತಿಿಗೆ ಬಂದಿದೆ. ಸಮಾಜದವರು ಎಲ್ಲರೂ ಒಗ್ಗಟ್ಟನಿಂದ ಸಮಾಜವನ್ನು ಸಂಘಟಿಸಬೇಕು. ಧಾರವಾಹಿ ಮೂಲಕ ಹೇಮರೆಡ್ಡಿಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಇತಿಹಾಸ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಸುಮಾರು 20 ಸಾವಿರ ವೇಮನ ಪದ್ಯಗಳು ಇರಬಹುದು ಎಂದು ಹೇಳಲಾಗಿದೆ. 6 ಸಾವಿರ ಪದ್ಯಗಳು ಮುದ್ರಣಗೊಂಡಿದ್ದು, ಇನ್ನೂ 14 ಸಾವಿರ ಪದ್ಯಗಳು ಸಂಶೋಧನೆಗೆ ಒಳಪಡಿಸಲಾಗಿದೆ. ಗದಗ ಜಿಲ್ಲೆಯ ಎಸ್ ಆರ್ಪಾಟೀಲ್ರು ಸುಮಾರು 4 ಸಾವಿರ ಪುಸ್ತಕಗಳನ್ನು ಕನ್ನಡಕ್ಕೆೆ ಅನುವಾದ ಮಾಡಿದ್ದಾರೆ. ರೆಡ್ಡಿಿ ಅಭಿವೃದ್ಧಿಿ ನಿಗಮ ಹಾಗೂ ರೆಡ್ಡಿಿ ಪ್ರಾಾಧಿಕಾರವನ್ನು ಸರ್ಕಾರದಿಂದ ಸ್ಥಾಾಪಿಸಿಬೇಕೆಂದರು.
ಅತಿಹೆಚ್ಚು ಅಂಕಗಳನ್ನು ಗಳಿಸಿ ಸಮುದಾಯದ ವಿದ್ಯಾಾರ್ಥಿಗಳಿಗೆ ವಿವಿಧ ಗಣ್ಯರಿಂದ ವಿದ್ಯಾಾರ್ಥಿಗಳಾದ ಸ್ಪೂರ್ತಿ ತಂದೆ ನರಸಿಂಹ ರೆಡ್ಡಿಿ, ಸಾಯಿ ರಘುಪತಿ ರೆಡ್ಡಿಿ, ಆಕಾಂಕ್ಷಾ ರೆಡ್ಡಿಿ ತಂದೆ ಪ್ರಕಾಶ್ ರೆಡ್ಡಿಿ, ಅನನ್ಯ ತಂದೆ ವಿಕ್ರಮ್ ರೆಡ್ಡಿಿ, ಕೀರ್ತಿ ತಂದೆ ಪ್ರಾಾಣೇಶ್ ರೆಡ್ಡಿಿ ಅವರಿಗೆ ಸನ್ಮಾಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾಾರ ಜಗದೀಶ, ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್, ಸಮಾಜದ ಮುಖಂಡರಾದ ಜಿ.ರಾಮಚಂದ್ರ ರೆಡ್ಡಿಿ, ಅಚ್ಚುತ್ ರೆಡ್ಡಿಿ, ಡಾ.ಭೀಮನಗೌಡ, ಚಂದ್ರಶೇಖರ ರೆಡ್ಡಿಿ, ಸುಧಾಕರರೆಡ್ಡಿಿಘಿ, ಭೀಮೇಶ್ ನಾಯ್ಕ್, ರಾಮನಗೌಡ ಏಗನೂರು, ಕೇಶವ ರೆಡ್ಡಿಿ , ಪಿ.ಗೋವರ್ಧನ ರೆಡ್ಡಿಿ, ವಿ.ಪಿ. ರೆಡ್ಡಿಿಘಿ ಸೇರಿದಂತೆ ಸಮಾಜದ ಇತರರಿದ್ದರು.
ನಿವೇಶನ ಮಂಜೂರು, ಭವನಕ್ಕೆ 10 ಲಕ್ಷ ರೂ ಘೋಷಣೆ ಮಹಾಯೋಗಿ ವೇಮನರನ್ನು ಜಯಂತಿಗೆ ಸೀಮಿತಗೊಳಿಸದಿರಿ-ಡಾ.ಶಿವರಾಜ ಪಾಟೀಲ

