ಸುದ್ದಿಮೂಲ ವಾರ್ತೆ ರಾಯಚೂರು, ನ.08:
ಸಮಾಜದಲ್ಲಿರುವ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿಿನಲ್ಲಿ ಕಾರ್ಯೋನ್ಮುಖವಾಗಿರುವ ರಾಣಾ ಪ್ರತಾಪ ಎಜ್ಯೂಕೇಷನ್ ಟ್ರಸ್ಟ್ ಕಾರ್ಯ ಶ್ಲಾಾಘನೀಯ ಎಂದು ವಿಧಾನ ಪರಿಷತ್ ಶಾಸಕ ಎ. ವಸಂತ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಶುಕ್ರವಾರ ನಗರದ ರಾಣಾ ಪ್ರತಾಪ್ ಎಜ್ಯೂಕೇಷನ್ಟ್ರಸ್ಟ್ ಸಂಚಾರಿತ ಬಾಬಾ ಗುರುಕುಲ ಪ್ರಾಾಥಮಿಕ ಶಾಲಾ ಕೊಠಡಿಯ ನಿರ್ಮಾಣಕ್ಕಾಾಗಿ ಭೂಮಿ ಪೂಜೆ ಕಾರ್ಯಕ್ಕೆೆ ಚಾಲನೆ ನೀಡಿ ಮಾತನಾಡಿದರು. ಬಾಬಾ ಗುರುಕುಲ ಟ್ರಸ್ಟ್ ಬಡ ಮಕ್ಕಳಿಗೆ ವಿದ್ಯಾಾಭ್ಯಾಾಸ ಕಲ್ಪಿಿಸಿರುವುದು ಶ್ಲಾಾಘನೀಯವಾಗಿದೆ.
ಅದಕ್ಕಾಾಗಿ 10 ಲ ರೂ ಅನುದಾನವನ್ನು ನೀಡಿದ್ದೇನೆ. ಮುಂದೆಯೂ ಸಹ ಸಂಸ್ಧೆೆಗೆ ಸಹಾಯ -ಸಹಕಾರ ನೀಡಲು ಸಿದ್ಧವಿದ್ದೇನೆ. ಈ ಸಂಸ್ಧೆೆ ಇನ್ನೂ ಎತ್ತರಕ್ಕೆೆ ಬೆಳೆಯಲಿ, ಸಮಾಜದಲ್ಲಿ ಬಡವರಿಗೆ ಶಿಕ್ಷಣದಿಂದ ಮಾತ್ರ ಸಮ ಸಮಾಜಕ್ಕೆೆ ನಾಂದಿ ಹಾಡಿದಂತಾಗುತ್ತದೆ. ಈ ದಿಶೆಯಲ್ಲಿ ಸಂಸ್ಧೆೆ ಕಾರ್ಯ ಮುಚ್ಚುವಂತದ್ದು ಎಂದು ಕೊಂಡಾಡಿದರು.
ಇದೇ ವೇಳೆ ಶಾಸಕ ಎ. ವಸಂತ್ಕುಮಾರ್ ಅವರನ್ನು ಸಂಸ್ಧೆೆಯ ಉಪಾಧ್ಯಕ್ಷ ಪ್ರೇಮ್ ಪ್ರಸಾದ್ ಶುಕ್ಲಾಾ, ಟ್ರಸ್ಟಿಿಗಳಾದ ಮನೋಹರ್ ಸಿಂಗ್, ರಾಘವೇಂದ್ರಸಿಂಗ್ ಸನ್ಮಾಾನಿಸಿದರು.
ಈ ವೇಳೆ ಮಣಿರಾಂ ಸಿಂಗ್,ಮುಖ್ಯ ಗುರು ತಿರುಮಲಮ್ಮ, ಶಿಕ್ಷಕ ವೃಂದ ಹಾಗೂ ವಿದ್ಯಾಾರ್ಥಿಗಳು, ಬೋಧಕೇತರ ಸಿಬ್ಬಂದಿ ಇದ್ದರು.

