ಸುದ್ದಿಮೂಲ ವಾರ್ತೆ ಕೊಪ್ಪಳ, ಜ.03:
ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಖ್ಯಾಾತಿ ಹೊಂದಿರುವ ಜಾತ್ರೆೆ. ಈ ಜಾತ್ರೆೆಯ ಮುಖ್ಯ ಆಕರ್ಷಣೆ ಮಹಾದಾಸೋಹ. ಈ ಬಾರಿ 22 ದಿನ ನಡೆಯುವ ದಾಸೋಹಕ್ಕಾಾಗಿ ಭಕ್ತರು ತರಹೇವಾರಿ ತಿಂಡಿ ತಿನಿಸು ತಯಾರಿಸುತ್ತಾಾರೆ. ಈ ಬಾರಿ ದಾಸೋಹದಲ್ಲಿ 10 ಲಕ್ಷ ಮೈಸೂರ ಪಾಕ್ ಭಕ್ತರ ಊಟದಲ್ಲಿರುತ್ತವೆ. ಈಗ ಬಾಣಿಸಿಗರು ಮೈಸೂರು ಪಾಕ್ ತಯಾರಿಸುತ್ತಿಿದ್ದಾಾರೆ.
ಅಕ್ಷರ. ಅರಿವು ಹಾಗೂ ಅನ್ನ ದಾಸೋಹದಿಂದಾಗಿ ಪ್ರಸಿದ್ದಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆೆ ಎಂದರೆ ಎಲ್ಲವೂ ಹೊಸತನ. ಜಾತ್ರೆೆಯು ವೈವಿದ್ಯಮಯವಾಗಿರುತ್ತದೆ. ಜಾತ್ರೆೆಯ ಸಂದರ್ಭದಲ್ಲಿ ಮಹಾದಾಸೋಹ ನಡೆಯುತ್ತಿಿದೆ. ಸರಿ ಸುಮಾರು 25 ಲಕ್ಷಕ್ಕೂ ಅಧಿಕ ಜನ ದಾಸೋಹದಲ್ಲಿ ಊಟ ಮಾಡುತ್ತಾಾರೆ. ಈ ದಾಸೋಹಕ್ಕಾಾಗಿ ನಾಡಿನಾದ್ಯಂತ ಭಕ್ತರು ಬಗೆ ಬಗೆಯ ತಿಂಡಿ ತಿನಿಸು. ರೊಟ್ಟಿಿ. ಮಾದಲಿ. ರವೆ ಉಂಡಿ. ಹೀಗೆ ತರಹೇವಾರಿ ತಿನಿಸು ತಯಾರಿಸಿ ಮಠಕ್ಕೆೆ ಸಮರ್ಪಿಸುತ್ತಾಾರೆ. ಈ ಬಾರಿ ದಾಸೋಹದಲ್ಲಿ 10 ಲಕ್ಷಕ್ಕೂ ಹೆಚ್ಚು ಮೈಸೂರು ಪಾಕ್ ತಯಾರಿ ನಡೆದಿದೆ.
ಸಿಂಧನೂರಿನ ಗೆಳೆಯರ ಬಳಗದವರು ದಾಸೋಹಕ್ಕಾಾಗಿ ಮೈಸೂರು ಪಾಕ್ ತಯಾರಿಸುತ್ತಿಿದ್ದಾಾರೆ. 60 ಕ್ವಿಿಂಟಾಲ್ ಸಕ್ಕರೆ. 30 ಕ್ವಿಿಂಟಾಲ್ ಕಡಲೆಹಿಟ್ಟು. 5000 ಲೀಟರ್ ಎಣ್ಣೆೆ. 3 ಕ್ವಿಿಂಟಾಲ್ ತುಪ್ಪ. 50 ಕೆಜಿ ಏಲಕ್ಕಿಿ ಹಾಕಿ ಮೈಸೂರು ಪಾಕ್ ನ್ನು ಸುಮಾರು 200 ಜನ ಬಾಣಿಸಿಗರು ತಯಾರಿಸುತ್ತಿಿದ್ದಾಾರೆ. ಎರಡು ದಿನಗಳ ಕಾಲ ಮಠದ ದಾಸೋಹ ಭವನದ ಪಕ್ಕ ಮೈಸೂರು ಪಾಕ್ ತಯಾರಿ ಮಾಡುತ್ತಿಿದ್ದಾಾರೆ.
ಸಿಂಧನೂರು ಗೆಳೆಯರ ಬಳಗದವರು ಕಳೆದ ಹತ್ತು ವರ್ಷಗಳಿಂದ ದಾಸೋಹದಲ್ಲಿ ಬಗೆ ಬಗೆಯ ತಿಂಡಿ ತಯಾರಿಸಿ ನೀಡಿದ್ದಾಾರೆ. ಬೂಂದಿ ಲಾಡು. ಶೇಂಗಾ ಹೊಳಿಗೆ. ಉದುರು ಸಜ್ಜಕ. ಕಳೆದ ವರ್ಷ ಜಿಲೇಬಿ ತಯಾರಿಸಿದ್ದು ಈ ಬಾರಿ ಮೈಸೂರು ಪಾಕ್ ತಯಾರಿಸುತ್ತಿಿದ್ದಾಾರೆ.
ಗವಿಮಠ ಜಾತ್ರೆೆಯೆಂದರೆ ವಿಶೇಷವಾಗಿದ್ದು ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಸೇವೆಗಾಗಿ ಬರುತ್ತಿಿರುವ ಮಹಿಳೆಯರು. ದಾಸೋಹದಲ್ಲಿ ಯಾವುದು ಕಡಿಮೆಯಾಗದಂತೆ ಸ್ವಯಂ ಪ್ರೇೇರಿತವಾಗಿ ಅಡುಗೆ ತಯಾರಿ. ಅಡುಗೆಗೆ ಬೇಕಾಗುವ ವಸ್ತುಗಳನ್ನು ತಯಾರಿಸಿ ಕೊಡುತ್ತಾಾರೆ.
ಜನವರಿ ಒಂದರಿಂದ ಆರಂಭವಾದ ಮಹಾದಾಸೋಹವು ಜನವರಿ 21 ರವರೆಗೂ ನಡೆಯುತ್ತಿಿದೆ. ಈ ದಾಸೋಹದಲ್ಲಿ ಊಟ ಮಾಡಿ ಒಂದು ಕಡೆ ಇಷ್ಟು ಜನಕ್ಕೆೆ ಯಾವುದೇ ಕೊರತೆಯಾಗದಂತೆ. ಯಾವುದೆ ಗೊಂದಲವಿಲ್ಲದೆ ದಾಸೋಹ ನಡೆಯುತ್ತಿಿರುವುದಕ್ಕೆೆ ಅಚ್ಚರಿ ವ್ಯಕ್ತಪಡಿಸುತ್ತಿಿದ್ದಾಾರೆ. ಕೊಪ್ಪಳ ಗವಿಮಠ ಜಾತ್ರೆೆಯ ವೈಶಿಷ್ಟ್ಯ ನೋಡಲು ರಾಜ್ಯದ ಮೂಲೆ ಮೂಲೆಯಿಂದಲೂ ಜನ ಬರುತ್ತಾಾರೆ.
ದಾಸೋಹದಲ್ಲಿ ಈ ಬಾರಿ 10 ಲಕ್ಷ ಮೈಸೂರು ಪಾಕ್

