ಸುದ್ದಿಮೂಲ ವಾರ್ತೆ ಬೀದರ್, ನ.06:
ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ನಿಷ್ಠುರ ನಡೆ ಮತ್ತೆೆ ಸಾಬೀತಾಗಿದೆ.
ನೂರೆಂಟು ಗೋಳು ತೋಡಿಕೊಂಡು ವರ್ಷಕ್ಕೆೆ 100 ರೂ. ಹೆಚ್ಚುವರಿಯಾಗಿ ಟನ್ಗೆ ನಿಗದಿಪಡಿಸುವುದನ್ನು ರೂಢಿ ಮಾಡಿಕೊಂಡಿರುವ ಜಿಲ್ಲೆಯ ಸಹಕಾರ ಹಾಗೂ ಖಾಂಡಸಾರಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು ಪ್ರಸಕ್ತ ಸಾಲಲ್ಲೂ ಪ್ರತಿ ಟನ್ ಕಬ್ಬಿಿಗೆ 100 ಅಂದರೆ 2700 ರೂ. ನೀಡಲು ನಿರ್ಧರಿಸಿವೆ.
ಹೌದು, ಗುರುವಾರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ನೇತೃತ್ವದಲ್ಲಿ ಜಿಲ್ಲೆಯ ರೈತರ ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರತಿನಿಧಿಗಳ ಸಮ್ಮುಖದಲ್ಲಿ ಕಬ್ಬು ದರ ನಿಗದಿ ಸಭೆ ವಿಲಗೊಂಡಿದೆ.
ಜಿಲ್ಲೆಯ ರೈತರು ಟನ್ ಕಬ್ಬಿಿಗೆ 3500 ರೂ. ನೀಡುವಂತೆ ಆಗ್ರಹಿಸಿದರು. ಆದರೆ, ಕಾರ್ಖಾನೆ ಪ್ರತಿನಿಧಿಗಳು ಕೇವಲ ಕಳೆದ ವರ್ಷಕ್ಕೆೆ ನಿಗದಿಪಡಿಸಿದ ದರಕ್ಕಿಿಂತ 100 ಹೆಚ್ಚುವರಿ ನೀಡುವುದಾಗಿ ಹೇಳಿವೆ ಎಂದು ತಿಳಿದು ಬಂದಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಾಮಪ್ಪ ಆಣದೂರೆ ಮಾತನಾಡಿ, ಪ್ರತಿ ಟನ್ ಕಬ್ಬಿಿಗೆ 3500 ರೂ.ಗಳನ್ನು ಪಾವತಿಸದಿದ್ದರೆ ಈ ತಿಂಗಳ 12 ರಂದು ಹುಮನಾಬಾದ್ ಬಳಿಯ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನಂತರ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಮಾತನಾಡಿ, ತಕ್ಷಣ ಎಲ್ಲಾ ಕಾರ್ಖಾನೆಗಳ ಅಧ್ಯಕ್ಷರನ್ನು ಕರೆದು ಮಾತುಕತೆ ನಡೆಸಲು ಆದೇಶ ನೀಡಿದರು. ಬರುವ ನವೆಂಬರ್ 10ರಂದು ಎರಡನೇ ಸುತ್ತಿಿನ ಮಾತುಕತೆ ನಡೆಸಿ ದರ ನಿಗದಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ, ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ, ಭವಾನಿ ಸಕ್ಕರೆ ಕಾರ್ಖಾನೆ, ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಭಾಗವಹಿಸಿದ್ದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ್, ದಯಾನಂದ ಸ್ವಾಾಮಿ, ಮಲ್ಲಿಕಾರ್ಜುನ ಸ್ವಾಾಮಿ, ಬಾಬುರಾವ್ ಹೊನ್ನಾಾ ಮತ್ತು ಇತರ ನಾಯಕರು ಭಾಗವಹಿಸಿದ್ದರು.

