ಸುದ್ದಿಮೂಲ ವಾರ್ತೆ ಬೆಂಗಳೂರು, ನ.27:
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಠಿಿಯಿಂದ ಬೆಳೆ ನಷ್ಟ ಅನುಭವಿಸಿದ 27 ಜಿಲ್ಲೆಗಳ 14.24 ಲಕ್ಷ ರೈತರಿಗೆ ರಾಜ್ಯ ಸರ್ಕಾರ 1033.60 ಕೋಟಿ ರೂ. ಪರಿಹಾರ ನೀಡಿದೆ.
ಪರಿಹಾರ ಮೊತ್ತ ಎಲ್ಲಾಾ ರೈತರ ಬ್ಯಾಾಂಕ್ ಖಾತೆಗಳಿಗೆ 24 ಗಂಟೆಗಳಲ್ಲಿ ಮೊತ್ತ ಜಮೆಯಾಗಲಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ 1218 ಕೋಟಿ ರೂ. ಮೊತ್ತದ ಹೊರತಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ಗೆ 8500 ರೂ. ಮೊತ್ತವನ್ನು ಹೆಚ್ಚುವರಿ ಪರಿಹಾರವಾಗಿ ಘೋಷಿಸಿದೆ. ಈ ವಿಶೇಷ ಪ್ಯಾಾಕೇಜ್ ವಿತರಣೆಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.
ಮುಂಗಾರಿನಲ್ಲಿ 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಜೂನ್ನಿಿಂದ ಸೆಪ್ಟಂಬರ್ ಅವಧಿಯಲ್ಲಿ ಅತಿವೃಷ್ಠಿಿಯಿಂದ 14.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿತ್ತು. 10.748 ಕೋಟಿ ರೂ. ಹಾನಿ ಅಂದಾಜಿಸಲಾಗಿತ್ತು. ಮುಖ್ಯವಾಗಿ ತೊಗರಿ 5.36 ಲಕ್ಷ ಹೆಕ್ಟೇರ್, ಹೆಸರು ಕಾಳು 2.63 ಲಕ್ಷ ಹೆಕ್ಟೇರ್, ಹತ್ತಿಿ 2.68 ಲಕ್ಷ ಹೆಕ್ಟೇರ್ ಹಾಗೂ ಮೆಕ್ಕೆೆಜೋಳ 1.21 ಲಕ್ಷ ಹೆಕ್ಟೇರ್ ಹಾನಿಯಾಗಿರುವುದು ಜಂಟಿ ಸಮೀಕ್ಷೆಯಲ್ಲಿ ದೃಢಪಟ್ಟಿಿತ್ತು ಎಂದರು.
ಎಸ್ಡಿಆರ್ಎ್ ಮಾನ ದಂಡಗಳ ಪ್ರಕಾರ ಗರಿಷ್ಠ ಎರಡು ಹೆಕ್ಟೇರ್ಗೆ ಸೀಮಿತವಾಗಿ 14.24 ಲಕ್ಷ ರೈತರಿಗೆ 1,218.03 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಈಗ ನೀಡುತ್ತಿಿರುವ ಹೆಚ್ಚುವರಿ ಪರಿಹಾರ 1,033.60 ಕೋಟಿ ರೂ. ಸೇರಿದಂತೆ ಒಟ್ಟು 2,251.63 ಕೋಟಿ ರೂ. ನೀಡಿದಂತಾಗುತ್ತದೆ ಎಂದರು.

