ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.13:
ಸಹಕಾರಿ ಸಂಘದಡಿ ಸ್ಥಾಾಪನೆಯಾದ ಪ್ರಬಲ ಬಳ್ಳಾಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಾಂಕ್ ಸ್ಥಾಾಪನೆಯಾಗಿ 106 ವರ್ಷಗಳಾದ ಹಿನ್ನಲೆಯಲ್ಲಿ ಹರಪನಹಳ್ಳಿಿ ಪಟ್ಟಣದ ಬಿಡಿಸಿಸಿ ಬ್ಯಾಾಂಕ್ ಶಾಖೆಯಲ್ಲಿ ತಾಲೂಕು ನಿರ್ದೇಶಕ ವೈ ಡಿ ಅಣ್ಣಪ್ಪ ಇವರ ಸಮ್ಮುಖದಲ್ಲಿ ಸಂಸ್ಥಾಾಪನಾ ದಿನವನ್ನು ಆಚರಿಸಲಾಯಿತು.
ಈ ಸುಸಂದರ್ಭದಲ್ಲಿ ನಿರ್ದೇಶಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕ ವೈ.ಡಿ ಅಣ್ಣಪ್ಪ ಅವರು ಸಹಕಾರಿ ಸಂಘದ ಹಲವಾರು ನಾಯಕರ ಶ್ರಮದಿಂದ ಬಳ್ಳಾಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಾಂಕ್ ಸ್ಥಾಾಪನೆಯಾಗಿ ಶತಮಾನ ಪೂರೈಸಿ ಇಂದಿಗೆ 106 ವರ್ಷಕ್ಕೆೆ ಪದಾರ್ಪಣೆ ಮಾಡಿದೆ. ಈ ಸಂಘ ಇಷ್ಟು ವರ್ಷಗಳ ಕಾಲ ಯಶಸ್ವಿಿಯಾಗಿ ನಡೆದು ಬರಲು ಬಹಳ ವ್ಯಕ್ತಿಿಗಳ ಶ್ರಮವಿದೆ ಇದರ ಅಡಿಯಲ್ಲಿ ವಿವಿಧ ಸಹಕಾರ ಸಂಘಗಳನ್ನು ಸ್ಥಾಾಪಿಸಿ ತಾಲ್ಲೂಕಿನ ಕೃಷಿಕರಿಗೆ ಮತ್ತು ವ್ಯಾಾಪಾರಸ್ಥರಿಗೆ ಗ್ರಾಾಹಕರಿಗೆ ಉತ್ತಮ ಸೇವೆ ನೀಡಿದೆ ಇಂತಹ ಸಾಧನೆಗೆ ನಮ್ಮೊೊಂದಿಗೆ ಹೆಜ್ಜೆೆಹಾಕಿದ ನಿರ್ದೇಶಕರ ಮತ್ತು ಆಡಳಿತ ಮಂಡಳಿಯವರ ಅಪಾರ ಕಾಳಜಿಯಿಂದ ನಮ್ಮ ಹರಪನಹಳ್ಳಿಿ ಶಾಖೆ ರೈತರ, ಶೇರುದಾರರ, ವ್ಯಾಾಪಾರಿಗಳ, ನೌಕರಿದಾರರಿಗೆ ಉತ್ತಮ ಬ್ಯಾಾಂಕ್ ಸೇವೆ ಒದಗಿಸಿ ಲಾಭಗಳಿಸಲು ಸಾಧ್ಯವಾಯಿತು ಎಂದರು.
ಅದರಂತೆ ತಾಲೂಕಿನ ಉಚ್ಚಂಗಿದುರ್ಗ ಶಾಖೆ ಕೂಡ ಜಿಲ್ಲೆಯಲ್ಲಿ ಗ್ರಾಾಹಕರಿಗೆ ಉತ್ತಮ ಸೇವೆ ಒದಗಿಸಿ ಹೆಸರು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಿ 90 ಸೊಸೈಟಿಯ ಅಧ್ಯಕ್ಷ ಎಮ್ ವಿ ಕೃಷ್ಣ ಕಾಂತ.ನಿರ್ದೇಶಕರುಗಳಾದ,ದಂಡಿನ ಹರೀಶ್,ಗಿಡ್ಡಳ್ಳಿಿ ನಾಗರಾಜ.ಮುತ್ತಿಿಗಿ ಜಂಭಣ್ಣ ಬಿಡಿಸಿಸಿ ಬ್ಯಾಾಂಕ್ ವ್ಯವಸ್ಥಾಾಪಕ ರಮೇಶ್, ಬಿ 90 ಸೊಸೈಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಸವರಾಜ ತಾಲೂಕು ಬಿಡಿಸಿಸಿ ಶಾಖೆಯ ಮೇಲ್ವಿಿಚಾರಕ ಜಿ. ಅಂಜಿನಪ್ಪ, ಪುರಸಭಾ ಸದಸ್ಯ ಭರತೇಶ್, ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ಪ್ರಾಾಣೇಶ್ ವಕೀಲರು, ಮೈದೂರುಮಲ್ಲಿಕಾರ್ಜುನ, ಕೆಂಚಪ್ಪ, ಚಿಗಟೇರಿ ಜಂಭಣ್ಣ ಶ್ಯಾಾನಬೋಗ ಸುರೇಶ್ ಎನ್.ಸುರೇಶ್, ಪಾಟ್ನಾಾಮ್ ಪರಶುರಾಮ ಹಾಗೂ ತಾಲೂಕಿನ ವಿವಿಧ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಬಳ್ಳಾರಿ ಬಿಡಿಸಿಸಿಬ್ಯಾಾಂಕ್ ನ 106 ನೇ ಸಂಸ್ಥಾಪನಾ ದಿನಾಚರಣೆ ಬ್ಯಾಾಂಕ್ ಯಶಸ್ಸಿಗೆ ಅನೇಕರ ಶ್ರಮ ಇದೆ – ಅಣ್ಣಪ್ಪ

