ಸುದ್ದಿಮೂಲವಾರ್ತೆ
ಕೊಪ್ಪಳ ಜು 04: ಆಸ್ಪತ್ರೆಗೆ ದಾಖಲಾಗಿ ಹೆರಿಗೆ ಮಾಡಿಸುವ ಮುನ್ನವೇ ದಾರಿ ಮಧ್ಯೆದಲ್ಲಿ 108 ವಾಹನ ಸಿಬ್ಬಂದಿ ಸುರಕ್ಷಿತ ಹೆರಿಗೆ ಮಾಡಿಸಿದ ಘಟನೆ ಕೊಪ್ಪಳ ತಾಲೂಕಿನ ಟಣಕನಕಲ್ಲು ಬಳಿ ನಡೆದಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.
ಕುಷ್ಟಗಿಯ ಪವಿತ್ರಾ ಬೈಲ ಪತ್ತಾರ ಎಂಬ ಮಹಿಳೆಯು ಹೆರಿಗೆಗಾಗಿ ಕುಷ್ಟಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸ್ಥೂಲಕಾಯವಿದ್ದು ಹೆರಿಗೆ ಸಂದರ್ಭದಲ್ಲಿ ಹೆಚ್ವಿನ ಯಂತ್ರೋಪಕರಣಗಳು ಅವಶ್ಯವಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕುಷ್ಟಗಿ ತಾಲೂಕಾ ಆಸ್ಪತ್ರೆಯಿಂದ ಕೊಪ್ಪಳಕ್ಕೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬರುತ್ತಿರುವಾಗ ಮಧ್ಯೆ 108 ವಾಹನದಲ್ಲಿ ಹೆರಿಗೆ ಮಾಡಿಸಿದ್ದಾರೆ.
ಪವಿತ್ರಾ ಬೈಲಪತ್ತಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಾಹನದಲ್ಲಿರುವ ಚಾಲಕ ಪ್ರಕಾಶ ಹಾಗು ಸಿಬ್ಬಂದಿ ಭೀಮಪ್ಪ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಸಿಬ್ಬಂದಿಗೆ ಕುಟುಂಬಸ್ಥರು ಧನ್ಯವಾದಗಳ ತಿಳಿಸಿದ್ದಾರೆ.