ಸುದ್ದಿಮೂಲ ವಾರ್ತೆ
ಕುಷ್ಟಗಿ, ಮೇ. 30: ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಕಳಮಳ್ಳಿ ತಾಂಡಾ ಬಳಿ ತೊಂಟವೊಂದರಲ್ಲಿ ಕಟ್ಟಿ ಹಾಕಲಾಗಿದ್ದ 2 ಎಮ್ಮೆ, 2 ಎತ್ತು ಹಾಗೂ 7 ಆಕಳುಗಳ ಮೇಲೆ ವಿದ್ಯುತ್ ಕಂಬದ ತಂತಿ ಹರಿದು ಬಿದ್ದು ಜಾನುವಾರುಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ತಾಂಡಾದ ರೈತ ರಾಮಪ್ಪ ಪವಾರ್ ಅವರಿಗೆ ಸೇರಿದ 10 ದನಗಳು ಮತ್ತು ಭದ್ರಪ್ಪ ಪವಾರ್ ಅವರಿಗೆ ಸೇರಿದ 2 ಎಮ್ಮೆಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿವೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಅವರು ಜೆಸ್ಕಾಂ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಜೆಸ್ಕಾಂನಿಂದ ಪ್ರತಿ ಜಾನುವಾರಿಗೆ 50 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ಜಾನುವಾರುಗಳ ಮಾಲೀಕರಿಗೆ ನೀಡಲು ನಿರ್ಣಯಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪಿಎಸ್ಐ ತಿಮ್ಮಣ್ಣ ನಾಯಕ, ಕಂದಾರ ನಿರೀಕ್ಷಕ ಶರಣಪ್ಪ ದಾಸರ, ಗ್ರಾಮ ಲೇಕ್ಕಾಧಿಕಾರಿ ನಾಗರಾಜ ಹಾಗೂ ಗ್ರಾಮಸ್ಥರು ಹಾಜರಿದ್ದರು.