ಸುದ್ದಿಮೂಲ ವಾರ್ತೆ ,
ಸಿರುಗುಪ್ಪ ಏ೦೫-ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಾರಿಗೆ ರೈಲ್ವೆ ಕಾರ್ಮಿಕ ಪುನರ್ ವಸತಿ ಆಹಾರ ಕೃಷಿ ಸಹಕಾರಿ ನೀರಾವರಿ ಮುಂತಾದ ಖಾತೆಗಳ ಸಚಿವರಾಗಿ ಯಶಸ್ವಿಯಾಗಿ ನಿರ್ವಹಿಸಿ ವಿಶೇಷವಾಗಿ ರಕ್ಷಣಾ ಸಚಿವರಾಗಿ ಉಪ ಪ್ರಧಾನಿಗಳಾಗಿ ಅಮೋಘ ಸಾಧನೆಗೈದ ದೇಶದ ಕೃಷಿ ಆರ್ಥಿಕ ಬೆಳವಣಿಗೆ ಗೆ ನೀಡಿದ ಬಾಬು ಜಗಜೀವನ್ ರಾಮ್ ಎಂದು ತಾಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರು ಹೇಳಿದರು ಕರ್ನಾಟಕ ಸರ್ಕಾರ ತಾಲೂಕ ಆಡಳಿತ ಸಮಾಜ ಕಲ್ಯಾಣ ಸಹಭಾಗಿತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಆಯೋಜಿಸಿದ ಭಾರತದ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ ಬಾಬು ಜಗಜೀವನ್ ರಾಮ್ ಅವರ 116ನೇ ಜನ್ಮ ದಿನಾಚರಣೆ ಆಚರಿಸಲಾಯಿತು ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ತಹಸಿಲ್ದಾರ್ ಅವರು ಮಾಲಾರ್ಪಣೆ ಪುಷ್ಪ ಅರ್ಪಿಸಿ ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಯಲ್ಲಿರುವುದರಿಂದ ಗೌರವ ಪೂರ್ವಕ ಅರ್ಥಪೂರ್ಣವಾಗಿ ಮತ್ತು ಸರಳ ಸಾಂಕೇತಿಕ ರೀತಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಡಿಪಿಓ ಏಕೆ ಜಲಾಲಪ್ಪ, ಬಿ ಸಿ ಎಂ ಅಧಿಕಾರಿ ಎ ಗಾದಿಲಿಂಗಪ್ಪ, ಪರಿಶಿಷ್ಟ ಅಧಿಕಾರಿ ರಾಘವೇಂದ್ರ ವರ್ಮ, ದಲಿತ ಸಂಘರ್ಷ ಸಮಿತಿಯ ಮುಖ್ಯಸ್ಥ ಹೆಚ್ ಬಿ ಗಂಗಪ್ಪ, ರಫೀಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯ ಸಮಾಜ ಸುಧಾರಕ ಅಬ್ದುಲ್ ನಬಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ, ವಿವಿಧ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ದಲಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು.