ಸುದ್ದಿಮೂಲ ವಾರ್ತೆ ರಾಯಚೂರು, ಡಿ.20:
ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಯ ಆಶಯ ಮಾತಿಗೆ ಸೀಮಿತವಾಗಿದ್ದು ಜಾತಿ ವಿನಾಶದ ಬದಲಿಗೆ ವಿಕಾಸವಾಗುತ್ತಿಿದೆ, ಧಾರ್ಮಿಕ ಸಂಘರ್ಷದ ಸಂಘಟನಾ ಸ್ಥಿಿತಿ ಹೆಚ್ಚಿಿದೆ ಸಮೂಹ ಸಂವೇದನೆ ಮರೆತು ಸಮೂಹ ಸನ್ನಿಿಯಲ್ಲಿದ್ದೇವೆ ಎಂದು ಸಾಹಿತಿ ಮತ್ತು ಸಾಂಸ್ಕೃತಿಕ ಚಿಂತಕ ಪ್ರೊೊಘಿ.ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.
ಅವರಿಂದು ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತಿಿನ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಉದ್ಘಾಾಟಿಸಿ ಮಾತನಾಡಿದರು. 1970ರ ಸನ್ನಿಿವೇಶ ಈಗ ಉಳಿದಿಲ್ಲಘಿ. ಅಂದು ಸ್ವಾಾತಂತ್ರ್ಯ ಸಮಾನತೆ, ಸಹೋದರತೆ ಬಲಗೊಳ್ಳುವಿಕೆ ಇತ್ತುಘಿ.ಸಂಘಟನೆಗಳ ಮೂಲಕ ಸಂಘಟಿತರಾಗುತ್ತಿಿದ್ದೆೆವು. ಇಂದು ನಾವು ಸಂಕುಚಿತರಾಗಿದ್ದೇವೆ ನಮ್ಮೊೊಳಗೆ ವಿಘಟನೆ ಹೆಚ್ಚಿಿದೆ. ಕೈಗಾರಿಕರಣ ಸಾಮೂಹಿಕ ಸಂವೇದನೆ ರೂಪದಲ್ಲಿತ್ತುಘಿ. ಇಂದು ಯುವಕರು ಜಾತಿ, ಧರ್ಮದ ಹೆಸರಲ್ಲಿ ಮುಳುಗಿ ಸಮೂಹ ಸನ್ನಿಿಯಂತಾಗಿದ್ದಾಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಂವಿಧಾನದ ಆಶಯದಂತೆ ಎಲ್ಲರನ್ನೊೊಳಗೊಂಡ ಸಮೂಹ ಸಂವೇಧನೆ ಇಲ್ಲವಾಗಿದೆ.
ಸ್ವಾಾರ್ಥ ತುಂಬಿದೆ :
ಸಂಕಟಗಳ ಸ್ಪೋೋಟವಾಗಿ ದಲಿತ ಸಾಹಿತ್ಯ ಚಿಂತನೆಗಳ ಬದಲಿಸಿತು ರಾಜ್ಯದಲ್ಲಿ ಏಕಕಾಲಕ್ಕೆೆ ಹಲವು ಚಳವಳಿಗಳು ಹುಟ್ಟಿಿಕೊಂಡು ಸಮಾಜಮುಖಿಯಾಗಿ ಪರಿವರ್ತನೆಯ ಗಾಳಿ ಬೀಸಿತ್ತುಘಿ. ಆದರೀಗ ಸ್ವಾಾರ್ಥ, ವ್ಯಕ್ತಿಿಗತ ಉತ್ಪಾಾದಕತೆಗೆ ಒತ್ತು ನೀಡಿದ್ದು ಆರ್ಥಿಕ ಸುಧಾರಣೆ ಬಂಡವಾಳ ಶಾಹಿಗಳನ್ನವಲಂಬಿಸುವಂತಾಗಿದೆ ಸಮಾನತೆ ಕುರಿತು ಮಾತನಾಡುತ್ತಿಿಲ್ಲಘಿ. ಆರ್ಥಿಕ ಸುಧಾರಣೆ ರಾಷ್ಟ್ರೀಕರಣ ಮುಖ್ಯವಾಗಿತ್ತುಘಿ. ಈಗ ಖಾಸಗೀಕರಣವೇ ಮುಖ್ಯವಾಗಿ ಸಾರ್ವಜನಿಕ ಆಸ್ತಿಿಗಳೆಲ್ಲ ಉಳ್ಳವರ ಕೈಗೆ ಸೇರುತ್ತಿಿವೆ ಎಂದು ವಿಷಾಧಿಸಿದರು.
ಬದಲಾದ ಸೈದ್ಧಾಾಂತಿಕತೆ :
ಸೈದ್ಧಾಾಂತಿಕ ರಾಜಕೀಯ, ರಾಜಕಾರಣಿಗಳು ಈಗಿಲ್ಲ ಬದಲಾಗಿ ಸಮಯ ಸಾಧಕತನದ್ದೆೆ ಮೇಲುಗೈ ಆಗಿದೆ.ಏನೇ ತಪ್ಪುುಘಿ, ಭ್ರಷ್ಟಾಾಚಾರ ಮಾಡಿದರೂ ಜಾತಿ, ಧರ್ಮ ನೋಡಿ ನಮ್ಮವ ಎಂಬ ಕೆಟ್ಟ ದೋರಣೆ ತಾಳುತ್ತಿಿರುವುದು ಗಮನಿಸಿದರೆ ನಾವು ಎತ್ತ ಸಾಗುತ್ತಿಿದ್ದೇವೆ. ನೈತಿಕತೆ ಇದೆಯೇ ಎಂಬ ಪ್ರಶ್ನೆೆ ಹುಟ್ಟು ಹಾಕಿದೆ. ವೌಲ್ಯಗಳು ಲಾಭ ನಷ್ಟದ ಲೆಕ್ಕಾಾಚಾರಕ್ಕೆೆ ಇಳಿದಿರುವ ಇಂತಹ ಸ್ಥಿಿತಿಯಲ್ಲಿ ಪ್ರಗತಿಪರರು, ದಲಿತ ಪರ ಸಂಘಟನೆಗಳು ಆತ್ಮಾಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಈ ದೇಶದಲ್ಲಿ ಶೇ.60ರಷ್ಟಿಿರುವ ಸಂಪತ್ತನ್ನು ಶೇ.1ರಷ್ಟು ಜನ ಮಾತ್ರ ಅನುಭವಿಸುತ್ತಿಿದ್ದಾಾರೆ.ಧಾರ್ಮಿಕ ದ್ರುವೀಕರಣ ಧರ್ಮ ದ್ವೇಷವಾಗಿ ರೂಪುಗೊಂಡು ವೈಷಮ್ಯ ತನ್ನ ಪಾರಮ್ಯ ಮರೆಯುತ್ತಿಿದೆ. ಜಾತಿ, ಧರ್ಮ, ದ್ವೇಷದ ಸಂಗತಿಗಳನ್ನು ವಿರೋಧಿಸಬೇಕಾಗಿದೆ.
ದೌರ್ಜನ್ಯ ಮೀರಿದೆ :
18 ನಿಮಿಷಕ್ಕೆೆ ಒಬ್ಬ ದಲಿತನ ಮೇಲೆ ದೌರ್ಜನ್ಯವಾದರೆ, ಪ್ರತಿವಾರ 13ಜನ ದಲಿತರ ಹತ್ಯೆೆಯಾಗುತ್ತಿಿದೆ, ದಿನಕ್ಕೆೆ 86 ಜನರ ಮೇಲೆ ದೌರ್ಜನ್ಯವಾಗುತ್ತಿಿದೆ ಎಂಬ ಆಂಶ ಕೇಂದ್ರ ಸರ್ಕಾರದ ಅಧಿಕೃತ ಸಂಸ್ಥೆೆಯ ವರದಿ ಉಲ್ಲೇಖಿಸಿದೆ. ಅಲ್ಲದೆ, ಶೇ.29.ರಷ್ಟು ಜನರಲ್ಲಿ ಜಮೀನು, ಶೇ.51ರಷ್ಟು ಜನ ಕೂಲಿಕಾರರೆ ಇದ್ದಾಾರೆ ಎಂಬ ಆಶಂವನ್ನು ಉಲ್ಲೇಖಿಸಿದ ಅವರು, ಹಿಂದಿನ ದಿನಗಳಿಗೆ ಹೋಲಿಕೆ ಮಾಡಿಕೊಂಡು ಕೂಡುವ ಕಾಲ ಇದಲ್ಲ ಎಂದು ಪ್ರತಿಪಾದಿಸಿದರು.
ದಲಿತ ಸಾಹಿತ್ಯದಲ್ಲಿ ಎರಡು ವಿಧ :
ದಲಿತ ಸಾಹಿತ್ಯದಲ್ಲಿ ಸಹಾನುಭೂತಿಯ ಸಂವೇದನೆ ಹಾಗೂ ಸ್ವಾಾನುಭಾವದ ಸಂವೇದನೆ ಎಂಬ ಎರಡು ಪ್ರಕಾರಗಳಿದ್ದು ಸಹಾನೂಭೂತಿ ಸಂವೇದನೆಯಲ್ಲಿ ಪ್ರಗತಿಪರ, ನವೋದಯ ,ಬಂಡಾಯ ಸಾಹಿತ್ಯವಿದ್ದು ಹೊರಗಿನವರು ದಲಿತರ ಸಂಕಟಗಳ ಬರೆದರೆ, ಸ್ವಾಾನುಭಾವದಲ್ಲಿ ದಲಿತರು ತಾವೇ ಅನುಭವಿಸಿದ ಸಂಕಟಗಳ ಉಲ್ಲೇಖಿಸಿ ಬರೆದಿದ್ದು ಈ ಎರಡೂ ಪ್ರಕಾರಗಳೂ ಪ್ರಾಾಮಾಣಿಕವಾಗಿವೆ.
ಒಕ್ಕೋೋರಲಿನ ಕೂಗಾಗಲಿ :
ಈ ದೇಶದ ಸಂವಿಧಾನ ಬರೆದ ಬಾಬಾ ಸಾಹೇಬ್ ಅಂಬೇಡ್ಕರರ ಬಗ್ಗೆೆ ಗೌರವ, ಅಭಿಮಾನವಿದ್ದರೆ ದೇಶದಲ್ಲಿ ಈಗ ನಡೆಯುತ್ತಿಿರುವ ಸಾಮಾಜಿಕ ಶ್ರೇಣೀಕರಣ, ಆರ್ಥಿಕ ಕೇಂದ್ರೀಕರಣ ಮತ್ತು ಧಾರ್ಮಿಕ ದ್ರುವೀಕರಣವನ್ನು ವಿರೋಧಿಸಿ ಜಾತಿವಾದಕ್ಕೆೆ ಆಕ್ಷೇಪಿಸುವ ಮೂಲಕ ದಲಿತರ ಸಂಕಟಗಳನ್ನು ಆಳುವವರ ಕಿವಿಗೆ ಹಾಕಿ ಬದಲಿಸಲು ಒಕ್ಕೊೊರಲಿನ ಕೂಗಾಕಬೇಕು ಎಂದು ಹೇಳಿದರು.
ಆಶಯ ನುಡಿಗಳನ್ನಾಾಡಿದ ರಾಜ್ಯಸಭೆ ಮಾಜಿ ಸಂಸದ ಹಾಗೂ ಸಾಹಿತಿ ಡಾ.ಎಲ್.ಹನುಮಂತಯ್ಯ, ಮೀಸಲಾತಿ ಕಸಿಯುವ ಹುನ್ನಾಾರದ ಜೊತೆಗೆ ಅಸ್ಪೃಶ್ಯತೆ ರೂಪಾಂತರಗೊಂಡಿದ್ದು ಅದರ ಕಬಂಧಬಾಹುಗಳ ಅನಾವರಣಗೊಳಿಸಲು ಯುವ ಕವಿಗಳು, ಲೇಖಕರು ಸವಾಲು ಸ್ವೀಕರಿಸಬೇಕು ಅಂತಹ ದಲಿತರ, ಶೋಷಿತರ ಧನಿ ಇಲ್ಲದವರಿಗೆ ಬಲ ತರುವ ಕಾರ್ಯಕ್ಕೆೆ ಇಂತಹ ಸಮ್ಮೇಳನಗಳು ಆಶಾಭಾವನೆ ಮೂಡಿಸಬೇಕಿದೆ.
ಎಷ್ಟೆೆ ಸಂಕಟ, ಸಂಕೋಲೆಗಳಿದ್ದರೂ ಬದುಕಬೇಕೆಂಬ ಛಲ ಇರುವ ಯಾವೊಬ್ಬ ದಲಿತ ಆತ್ಮಹತ್ಯೆೆ ಮಾಡಿಕೊಂಡ ಉದಾಹರಣೆ ಇಲ್ಲ . ಚಂದ್ರಯಾನಕ್ಕೂ ಈಗಿರುವ ಸಾಮಾಜಿಕ ಅಂತರಕ್ಕೂ ವ್ಯತ್ಯಾಾಸವಿಲ್ಲ ಆ ಮಟ್ಟಿಿಗೆ ದೂರವಿದೆ ವಾಸ್ತವ ಸ್ಥಿಿತಿ ಎಂದು ಅಸ್ಪೃಶ್ಯತೆಯ ಹಲವು ಮುಖಗಳನ್ನು ಉಲ್ಲೇಖಿಸಿದರು.
ಶ್ರೀಮಂತ, ಸ್ಪೃಶ್ಯ ಸಮಾಜದಲ್ಲಿ ಜನಿಸಿದರೂ ಕವಿ ಕುವೆಂಪು ಶೋಷಿತರ ನಿಜವಾದ ಧ್ವನಿಯಾಗಿ ಅನೇಕ ಸಾಹಿತ್ಯಗಳಲ್ಲಿ ದೇವರ ಬಗ್ಗೆೆಘಿ, ವೌಢ್ಯತೆ, ಶೋಷಿತರ ಬವಣೆಗಳ ಬಗ್ಗೆೆ ಬರೆದಿದ್ದಾಾರೆ ಎಂದು ವಿವರಿಸಿದರು.
ದಸಂಸ ಭೀಮವಾದದ ಸಂಚಾಲಕ ಡಾ.ಆರ್.ಮೋಹನರಾಜ್ ಮಾತನಾಡಿ, ಈ ರಾಜ್ಯ ಸರ್ಕಾರ ಶೋಷಿತ, ದಲಿತರ ಮಕ್ಕಳ ಶಿಕ್ಷಣ ಕಸಿಲು ರಾಜ್ಯದಲ್ಲಿ ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆ ಆರಂಭಿಸುತ್ತಿಿದ್ದು ಅದನ್ನು ವಿರೋಧಿಸಲು ಈ ಸಮ್ಮೇಳನ ವೇದಿಕೆಯಾಗಲಿ, ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಿಣ ಭಾರತಕ್ಕೆೆ ರಾಜಕೀಯವಾಗಿ ದೊಡ್ಡ ಪೆಟ್ಟು ಆಗಲಿದ್ದು ಎಚ್ಚರ ವಹಿಸಬೇಕು, ಹಿಂದಿ ಭಾಷೆ ಹೇರಿಕೆ ವಿರೋಧಿಸಲೇಬೇಕು ಎಂದು ಪ್ರತಿಪಾದಿಸಿದರು.
ಪುಸ್ತಕಗಳ ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿಿನ ಮಾಜಿ ಅಧ್ಯಕ್ಷ ಮನುಬಳಿಗಾರ ಮಾತನಾಡಿ, ಇಂತಹ ಸಮ್ಮೇಳನಗಳಿಗೆ ಪ್ರೋೋತ್ಸಾಾಹ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಸರ್ಕಾರ ಸುಮಾರು 2 ಸಾವಿರ ಕೋಟಿ ಅನುದಾನ ಮೀಸಲಿಡಲಿ ಇಲಾಖೆಯೂ ಸಹಿತ ಈ ಸಮ್ಮೇಳನಕ್ಕೆೆ 50 ಲಕ್ಷ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಸಂಸದ ಜಿ.ಕುಮಾರ ನಾಯಕ ಮಾತನಾಡಿ, ಇಂದು ಸಂವಿಧಾನದ ಆಶಯಕ್ಕೆೆ ವಿರುದ್ಧ ಕಾರ್ಯ ನಡೆಯುತ್ತಿಿದ್ದು ದೈತ್ಯ ಶಕ್ತಿಿಯ ಮುಂದೆ ಕೇವಲ ರಾಜಕೀಯವಾಗಿ ಅಷ್ಟೆೆ ಅಲ್ಲ ಸಮಾಜದ ಪ್ರಗತಿಪರರು, ಸಾಹಿತಿಗಳು ಧನಿಯಾಗಬೇಕಾಗಿದೆ ಎಂದರು.
ಇದಕ್ಕೂ ಮುನ್ನ ಪುಸ್ತಕ ಮಳಿಗೆಗಳನ್ನು ಶಾಸಕ ಡಾ. ಶಿವರಾಜ ಪಾಟೀ, ಸರ್ವಾಧ್ಯಕ್ಷರ ಪುಸ್ತಕ ಮಳಿಗೆಯನ್ನು ಸಂಸದ ಜಿ. ಕುಮಾರನಾಯಕ ಉದ್ಘಾಾಟಿಸಿದರು.
ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆೆ ಡಾ.ಜಯದೇವಿ ಗಾಯಕವಾಡ ಯಾದಗಿರಿ, ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೋಳಸಂಗಿ, ಮೇಯರ್ ನರಸಮ್ಮ ಮಾಡಗಿರಿ, ಸದಸ್ಯ ಜಯಣ್ಣ, ಮುಖಂಡರಾದ ಕೆ. ಶಾಂತಪ್ಪ, ನರಸಿಂಹಲು ಮಾಡಗಿರಿ, ಎಚ್.ಬಿ. ಮುರಾರಿ, ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಜೆ.ಬಿ. ರಾಜು, ಗಣಪತಿ ಚಲವಾದಿ, ಧರ್ಮಾವತಿ ಎಸ್. ನಾಯಕ, ಜಿಲ್ಲಾಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಾಳ ಸೇರಿದಂತೆ ಅನೇಕ ಸಾಹಿತಿಗಳು, ಲೇಖಕರು ಸಾಹಿತ್ಯಾಾಸಕ್ತರು ಇದ್ದರು.
11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಮೂಹ ಸಂವೇದನೆ ಮರೆಯಾಗಿ ಸನ್ನಿ ಭಾವ ಹೆಚ್ಚಿದೆ-ಪ್ರೊಘಿ.ಬರಗೂರು ರಾಮಚಂದ್ರಪ್ಪ

