ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಕರ್ನಾಟಕ ರಾಜ್ಯ ಹಾಗೂ ಜಿಲ್ಲಾಾ ದಲಿತ ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಾಶ್ರಯದಲ್ಲಿ ಡಿ.20 ಹಾಗೂ 21ರಂದು ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಿಕೊಳ್ಳಲಾಗಿದೆ ಎಂದು ಪರಿಷತ್ತಿಿನ ರಾಜ್ಯಾಧ್ಯಕ್ಷ ಅರ್ಜುನ ಗೋಳಸಂಗಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಎರಡು ದಿನಗಳ ಈ ಸಮ್ಮೇಳನ ಸಂವಿಧಾನ ಭಾರತ ಎಂಬುದನ್ನು ಮುಖ್ಯ ಆಶಯವಾಗಿಸಿಕೊಂಡಿದ್ದಾಾಗಿ ವಿವರಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಗತಿ ಪರ ಲೇಖಕಿ, ಸಾಹಿತಿ ಯಾದಗಿರಿಯ ಡಾ.ಜಯದೇವಿ ಗಾಯಕವಾಡ ಅವರ ಆಯ್ಕೆೆ ಮಾಡಿದ್ದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊೊ. ಬರಗೂರು ರಾಮಚಂದ್ರಪ್ಪ ಅವರು ಉದ್ಘಾಾಟಿಸಲಿದ್ದಾಾರೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಸರ್ವರಿಗೂ ಸಂವಿಧಾನ ಮತ್ತು ಮೀಸಲಾತಿ ಒಳಗೆ ಮತ್ತು ಹೊರಗೆ ಎಂಬ ಎರಡು ವಿಷಯಗಳ ಮೇಲೆ ಸಂವಾದ ಗೋಷ್ಠಿಿ ಇದೆ. ಸರ್ವರಿಗೂ ಸಂವಿಧಾನ ಕುರಿತು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಾಲಯದ ಕನ್ನಡ ಪ್ರಾಾಧ್ಯಾಾಪಕ ಡಾ.ಅಪ್ಪಗೆರೆ ಸೋಮಶೇಖರ ಹಾಗೂ ಮೀಸಲಾತಿ ಒಳಗೆ, ಹೊರಗೆ ವಿಷಯದ ಕುರಿತು ಸಾಹಿತಿ ಗುರುಪ್ರಸಾದ ಕಂಟಲಗೆರೆ ವಿಷಯ ಮಂಡಿಸಲಿದ್ದಾಾರೆ ಎಂದರು.
ಇದರ ಜೊತೆಗೆ ಸಮ್ಮೇಳನಾಧ್ಯಕ್ಷರ ಸಾಹಿತ್ಯ, ಬರಹ ಕುರಿತು ವಿಚಾರ ಗೋಷ್ಠಿಿ ಹಾಗೂ ಮಹಿಳಾ ಮತ್ತು ಪುರುಷ ಕಾವ್ಯಾಾಯಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರೀಯ ಗೌರವ, ರಾಷ್ಟ್ರೀಯ ಯುವ ಹಾಗೂ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಿ, ಬಾಲ ಪ್ರಶಸ್ತಿಿ ಪ್ರದಾನ ಮಾಡಲಾಗುವುದು.್ನ ಕಾರ್ಯಕ್ರಮದಲ್ಲಿ ಸಚಿವ ಎನ್.ಎಸ್.ಬೋಸರಾಜ್ ಪ್ರಾಾಸ್ತಾಾವಿಕ ನುಡಿಗಳನ್ನು ಆಡಲಿದ್ದು, ಮಾಜಿ ರಾಜ್ಯಸಭೆ ಸಂಸದ ಡಾ.ಎಲ್.ಹನುಮಂತಪ್ಪ ಅವರು ಆಶಯ ನುಡಿಗಳನ್ನು ಆಡಲಿದ್ದಾಾರೆ. ನಿಕಟಪೂರ್ವ ಅಧ್ಯಕ್ಷ ಪ್ರೊೊ.ಎಚ್.ಟಿ.ಪೋತೆ, ಡಾ.ಮನುಬಳಿಗಾರ, ಜಿಲ್ಲೆೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಅಧಿಕಾರಿಗಳು, ದಲಿತ ಸಾಹಿತ್ಯಾಾಸಕ್ತರು, ಸಾಹಿತಿಗಳು ಭಾಗವಹಿಸಲಿದ್ದಾಾರೆ ಎಂದು ಹೇಳಿದರು.
ಡಿ.20 ಹಾಗೂ 21 ರಂದು 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಸಂವಿಧಾನ ಭಾರತವೇ ಸಮ್ಮೇಳನದ ಮುಖ್ಯ ಆಶಯ – ಅರ್ಜುನ್

