ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.04:
ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಡಿ-20 ಹಾಗೂ 21 ರಂದು ಎರಡು ದಿನಗಳ ಕಾಲ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ಹಾಕುವುದಕ್ಕಾಾಗಿ ಅರ್ಜಿ ಅವಧಿ ವಿಸ್ತರಿಸಲಾಗಿದೆ ಎಂದು ಪುಸ್ತಕ ಮಳಿಗೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಮತಗಿ ತಿಳಿಸಿದ್ದಾಾರೆ.
ಆಸಕ್ತ ನಾಡಿನ ಪ್ರಕಾಶಕರು, ಬುಕ್ ಡಿಪೋ ಮಾಲೀಕರು ಹಾಗೂ ಲೇಖಕರು ಹಾಗೂ ಕರ ಕುಶಲ ವಸ್ತುಗಳ ಪ್ರದರ್ಶನಕಾರರು ಹಾಗೂ ವಿವಿಧ ಚಿತ್ರಕಲಾ ಪ್ರದರ್ಶನಕಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜೂನ್ 10 ಕೊನೆಯ ದಿನಾಂಕವಾಗಿತ್ತು. ಆದರೆ ಸಮ್ಮೇಳನ ಮುಂದೂಡಿದ ಕಾರಣಕ್ಕಾಾಗಿ ಪುಸ್ತಕ ಮಳಿಗೆ ನೋಂದಾಯಿಸಿಕೊಳ್ಳುವ ಅವಧಿಯನ್ನು ವಿಸ್ತರಿಸಿ ಡಿ-15 ರ ವರೆಗೆ ಅವಕಾಶ ಕಲ್ಪಿಿಸಲಾಗಿದೆ. ಪ್ರತಿ ಮಳಿಗೆಗೆ 1500 ರೂ. ನೀಡಿ ನೋಂದಾಯಿಸಿ ಕೊಳ್ಳಬೇಕಾಗಿದೆ. ಪ್ರತಿಯೊಂದು ಮಳಿಗೆಯು 10್ಡ10 ಅಳತೆಯನ್ನು ಹೊಂದಿರುತ್ತದೆ. ಪುಸ್ತಕ ಮಳಿಗೆ ಹಾಕಲು ಇಚ್ಚಿಿಸುವವರು ನರಸಪ್ಪ ಗೋನವಾರ(ಅಧ್ಯಕ್ಷ) 70268 28585, ರಾಘವೇಂದ್ರ ಶಿಕ್ಷಕರು(ಉಪಾಧ್ಯಕ್ಷ) – 80739 32682, ಡಾ.ಮಲ್ಲಿಕಾರ್ಜುನ ಕಮತಗಿ 98807 84470, ಸದಸ್ಯರಾದ ಸಿದ್ದಪ್ಪ ಸಿ ಸಿಳ್ಳೇದ 96114 00084, ಸಬ್ಜಲಿಸಾಬ್ ಹೆಚ್.ಎಂ.ಭೋಗಾವತಿ -99807 78073, ಆಂಜನೇಯ ಶಿಕ್ಷಕರು 9880729075 ಯರಿಯಪ್ಪ ಬೆಳಗುರ್ಕಿ 97391 56918, ಬಸವರಾಜ ಬ್ಯಾಾಗವಾಟ 81977 80157, ಸತೀಶ್ ಹಳ್ಳಿಿ 78929 90034 ರನ್ನು ಸಂಪರ್ಕಿಸಲು ಕೋರಲಾಗಿದೆ.
11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪುಸ್ತಕ ಮಳಿಗೆ ನೋಂದಾಯಿಸುವ ಅವಧಿ ವಿಸ್ತರಣೆ – ಮಲ್ಲಿಕಾರ್ಜುನ

