ಸುದ್ದಿಮೂಲ ವಾರ್ತೆ ರಾಯಚೂರು, ಜ.20:
ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಾಲಯಗಳ ರಾಷ್ಟ್ರ ಮಟ್ಟದ ಆಥ್ಲೆೆಟಿಕ್ ಕ್ರೀಡಾಕೂಟದಲ್ಲಿ ವಾಲ್ಮೀಕಿ ವಿಶ್ವ ವಿದ್ಯಾಾಲಯದ ವಿದ್ಯಾಾ ರ್ಥಿಗಳ ಸಾಧನೆಯಿಂದ ದೇಶಕ್ಕೆೆ ಪರಿಚಯ ವಾಗುವಂತಾಗಿದೆ ಎಂದು ಕುಲಪತಿ ಪ್ರೊೊಘಿ.ಶಿವಾನಂದ ಕೆಳಗಿನಮನಿ ಶ್ಲಾಾಘಿಸಿದರು.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾಾನ ವಿಶ್ವವಿದ್ಯಾಾಲಯ ಮತ್ತು ಮೂಡಬಿದಿರೆಯ ಆಳ್ವಾಾಸ್ ಶಿಕ್ಷಣ ಸಂಸ್ಥೆೆ ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ 2025-26 ನೇ ಪ್ರಸಕ್ತ ಸಾಲಿನ 85 ನೇ ಅಖಿಲ ಭಾರತ ಅಂತರ್ ವಿವಿಗಳ ಅಥ್ಲೆೆಟಿಕ್ ಕ್ರೀಡಾಕೂಟದಲ್ಲಿ 11ನೇ ಸ್ಥಾಾನ ಪಡೆದ ವಿಶ್ವ ವಿದ್ಯಾಾಲಯದ ವಿದ್ಯಾಾರ್ಥಿಗಳ ಸಾಧನೆಗೆ ಅಭಿನಂದಿಸಿ ಮಾತನಾಡಿದರು. ರಾಷ್ಟ್ರಮಟ್ಟದ ಈ ಕ್ರೀಡಾಕೂಟದಲ್ಲಿ ದೇಶದ ನಾನಾ ರಾಜ್ಯಗಳ 306 ವಿಶ್ವವಿದ್ಯಾಾಲಯಗಳ ಪುರುಷ ಮತ್ತು ಮಹಿಳಾ ವಿಭಾಗ ಸೇರಿ ಪದವಿ ಮತ್ತು ಸ್ನಾಾತಕೋತ್ತರ ಪದವಿಯ 3 ಸಾವಿರಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಸ್ಪರ್ಧಿಸಿ ಕೀರ್ತಿ ಹೆಚ್ಚಿಿಸಿದ್ದಾಾರೆ ಎಂದರು. ನಮ್ಮ ವಿದ್ಯಾಾರ್ಥಿಗಳ ಈ ಸಾಧನೆ ದೇಶಕ್ಕೆೆ ಕೊಡುಗೆಯಾಗಲಿ ಎಂದು ಹರ್ಷ ವ್ಯಕ್ತಪಡಿಸಿದರು.
ಉಪಕುಲಸಚಿವರು, ನಿಕಾಯಗಳ ಡೀನರು, ಅಧಿಕಾರಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.
ರಾಷ್ಟ್ರೀಯ ಕ್ರೀಡಾಕೂಟ, ವಾಲ್ಮೀಕಿ ವಿವಿಗೆ 11ನೇ ಸ್ಥಾನ ಕ್ರೀಡಾಸಕ್ತರಿಗೆ ಅಗತ್ಯ ಪ್ರೋೋತ್ಸಾಹಕ್ಕೆ ಸಿದ್ಧ – ಪ್ರೊ.ಶಿವಾನಂದ ಕೆಳಗಿನಮನಿ

