ಸುದ್ದಿಮೂಲ ವಾರ್ತೆ ರಾಯಚೂರು, ನ.12:
ಕರ್ನಾಟಕ ರಾಜ್ಯ ಜಿಲ್ಲಾ ಸಹಕಾರ ಮಹಾಮಂಡಳ, ಸೌಹಾರ್ದ ಸಂಯುಕ್ತ ಸಹಕಾರಿ ಸೇರಿ ವಿವಿಧ ಸಹಕಾರ ಸಂಘಗಳ ಸಂಯುಕ್ತಾಾಶ್ರಯದಲ್ಲಿ ನ.15ರಂದು ರಾಯಚೂರಿನಲ್ಲಿ ರಾಜ್ಯ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಾಹ ಸಮಾರಂಭ ಹಮ್ಮಿಿಕೊಳ್ಳಲಾಗಿದೆ ಎಂದು ರಾಯಚೂರು ಕೊಪ್ಪಳ ಜಿಲ್ಲಾಾ ಕೇಂದ್ರ ಸಹಕಾರ ಬ್ಯಾಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ ತೋರಣದಿನ್ನಿಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆೆ 10ಕ್ಕೆೆ ಕೃಷಿ ವಿಶ್ವವಿದ್ಯಾಾಲಯ ಸಭಾಂಗಣದಲ್ಲಿ ಹಮ್ಮಿಿಕೊಂಡಿರುವ ಸಮಾರಂಭವನ್ನು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜ್ ಉದ್ಘಾಾಟಿಸಲಿದ್ದಾಾರೆ. ವಸ್ತು ಪ್ರದರ್ಶನ ಮಳಿಗೆಗಳನ್ನು ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಸಹಕಾರ ವಾರಪತ್ರಿಿಕೆ ವಿಶೇಷ ಸಂಚಿಕೆಯನ್ನು ಶಾಸಕ ಬಸನಗೌಡ ದದ್ದಲ್, ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ ಭಾವಚಿತ್ರಕ್ಕೆೆ ಸಂಸದ ಜಿ.ಕುಮಾರ ನಾಯಕ ಪುಷ್ಪಾಾರ್ಚನೆ ಮಾಡಲಿದ್ದಾಾರೆ. ಶಾಸಕರಾದ ಬಸನಗೌಡ ತುರ್ವಿಹಾಳ, ಹಂಪನಗೌಡ ಬಾದರ್ಲಿ ಅವರು ಹಿರಿಯ ಸಹಕಾರಿಗಳಿಗೆ ಸನ್ಮಾಾನಿಸಲಿದ್ದುಘಿ, ಸ್ವಾಾಭಿಮಾನ ಸಹಕಾರ ವಿಶೇಷ ಸಂಚಿಕೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಂಂಡಳದ ಅಧ್ಯಕ್ಷ ಜಿ.ಟಿ.ದೇವಗೌಡ ಬಿಡುಗಡೆ ಮಾಡಿದರೆ, ಉತ್ತಮ ಸಹಕಾರ ಸಂಘಗಳಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ಸನ್ಮಾಾನಿಸಲಿದ್ದಾಾರೆ. ಸಮಾರಂಭದ ಅಧ್ಯಕ್ಷತೆ ಶಾಸಕ ಡಾ.ಶಿವರಾಜ ಪಾಟೀಲ ವಹಿಸಲಿದ್ದಾಾರೆ ಎಂದು ಮಾಹಿತಿ ನೀಡಿದರು.
ಸಹಕಾರ ಸಂಸ್ಥೆೆಗಳ ಮೂಲಕ ಗ್ರಾಾಮೀಣ ಅಭಿವೃದ್ಧಿಿಯ ಬಲವರ್ಧನೆ ಈ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಜಿಲ್ಲೆಯಲ್ಲಿ ಎರಡನೇ ಕಾರ್ಯಕ್ರಮ ಇದಾಗಿದ್ದು ಸಹಕಾರ ಚಳವಳಿ ನಡೆದು ಬಂದ ಹಾದಿಯ ಅವಲೋಕನ, ಭವಿಷ್ಯದ ಸಹಕಾರ ಚಳುವಳಿ ಯಶಸ್ವಿಿಯಾಗಿ ಮುನ್ನಡೆಸುವ ಬಗ್ಗೆೆ ಸದಸ್ಯಘಿ, ನಿರ್ದೇಶಕ, ಅಧಿಕಾರಿಗಳಿಗೆ ಸಹಕಾರ ಇಲಾಖೆ ನಿವೃತ್ತ ಅಪರ ನಿಬಂಧಕರಾದ ಗುರುಸ್ವಾಾಮಿ ವಿಶೇಷ ಉಪನ್ಯಾಾಸ ನೀಡುವರು ಎಂದರು.
ರಾಜ್ಯದಲ್ಲಿ ರಾಯಚೂರು ಜಿಲ್ಲೆೆಯ ಸೌಹಾರ್ದ, ಪ್ಯಾಾಕ್ಸ್ ಸಹಕಾರಿ ಗ್ರಾಾಮೀಣ ಭಾಗದಲ್ಲಿ ಗಣಕೀಕರಣ ಬಳಕೆಯಲ್ಲಿ 2ನೇ ಸ್ಥಾಾನ ಪಡೆದಿದೆ ಎಂದರು.
ರಾಜ್ಯ ಸರ್ಕಾರದ ಸಹಕಾರಿ ಕಾಯಿದೆ ಬಗ್ಗೆೆ ಇನ್ನೂ ನಿಯಮಗಳು ರೂಪಿಸಿಲ್ಲ ಆದರೆ, ಸದನದಲ್ಲಿ ಚರ್ಚಿತವಾದಂತೆ ಕೆಲವು ಉತ್ತಮ ಅಂಶಗಳಿವೆ ಕೆಲವು ವಿರುದ್ಧವಾಗಿವೆ. ಆ ಬಗ್ಗೆೆ ನಿಯಮ ಅಂತಿಮಗೊಂಡ ಮೇಲೆ ಮುಂದಿನ ಕಾನೂನು ಹೋರಾಟದ ಬಗ್ಗೆೆ ಚರ್ಚೆ ನಡೆಯುತ್ತಿಿದೆ ಎಂದ ಅವರು, ಯಾವ ಸಹಕಾರಿಗಳು ಆರ್ಬಿಐ ಅಡಿ ನೋಂದಣಿಯಾಗಿವೆಯೊ ಅವುಗಳ ಆಸ್ತಿಿ ವಾಣಿಜ್ಯ ಉದ್ದೇಶಕ್ಕೆೆ ಬಳಸಲು ಬರುವುದಿಲ್ಲಘಿ. ಮಾರಾಟ ಮಾಡಬೇಕು ಇಲ್ಲ ಶಾಖೆಗಳ ವಿಸ್ತರಿಸಬೇಕಾಗಿದೆ ಎಂದು ಆಸ್ತಿಿಯ ನಿರುಪಯುಕ್ತದ ಬಗ್ಗೆೆ ಕೇಳಿದ ಪ್ರಶ್ನೆೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ರಾಜ್ಯ ನಿರ್ದೇಶಕ ಆರ್.ತಿಮ್ಮಯ್ಯಶೆಟ್ಟಿಿಘಿ, ಜಿಲ್ಲಾಾ ಸಹಕಾರಿ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪಾಟೀಲ ಶಾವಂತಗೇರಿ, ಜಿಲ್ಲಾಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ದೊಡ್ಡ ಬಸವರಾಜ, ನಿರ್ದೇಶಕ ಕಲ್ಲಯ್ಯಸ್ವಾಾಮಿ, ಸಹಕಾರ ಸಂಘಗಳ ಉಪನಿಬಂಧಕ ಎಂ.ಆರ್.ಮನೋಹರ, ಆರ್ಡಿಸಿಸಿ ವ್ಯವಸ್ಥಾಾಪಕ ನಿರ್ದೇಶಕ ಎಂ.ಬಿ.ಪೂಜಾರ, ಪ್ರಾಾಂತಿಯ ವ್ಯವಸ್ಥಾಾಪಕ ಸೂರ್ಯಕಾಂತ ಇತರರಿದ್ದರು.
ರಾಯಚೂರು ಜಿಲ್ಲೆೆಯಲ್ಲಿ 1259 ಸಹಕಾರಿ ಸಂಘಗಳಿದ್ದು 900 ಕಾರ್ಯನಿರ್ವಹಿಸುತ್ತಿಿದ್ದು ಈ ಪೈಕಿ 144 ಕೃಷಿ ಪತ್ತಿಿನ ಸಹಕಾರಿ ಸಂಘಗಳು, ಒಂದು ಪಟ್ಟಣ ಸೌಹಾರ್ದ ಬ್ಯಾಾಂಕ್ ಕಾರ್ಯ ನಿರ್ವಹಿಸುತ್ತಿಿದೆ.
ಜಿಲ್ಲೆೆಯಲ್ಲಿ 421 ಸೌಹಾರ್ದ ಸಹಕಾರಿಗಳಿದ್ದು ಈ ಪೈಕಿ 381 ಕಾರ್ಯ ನಿರ್ವಹಿಸುತ್ತಿಿದ್ದು 311 ಸಂಸ್ಥೆೆಗಳು ಲಾಭದಲ್ಲಿದ್ದು ಉಳಿದವು ನಷ್ಟದಲ್ಲಿವೆ. ಜಿಲ್ಲೆೆಯ ಸೌಹಾರ್ದ ಸಹಕಾರಿಗಳಿಂದಲೆ 3271 ಕೋ ವಾರ್ಷಿಕ ವಹಿವಾಟು ನಡೆಯುತ್ತಿಿದ್ದು ಈ ಪೈಕಿ ಸುಮಾರು 2500 ಸಾಲ ವಿತರಿಸಿವೆ, 2651 ಕೋಟಿ ವಿವಿಧ ಮೂಲದ ಠೇವಣಿ, ವ್ಯವಹಾರ ನಡೆಸುತ್ತಿಿದ್ದು ಸುಮಾರು 2 ಸಾವಿರ ಜನರಿಗೆ ಪ್ರತ್ಯಕ್ಷಘಿ, ಪರೋಕ್ಷ ಉದ್ಯೋೋಗ ಒದಗಿಸಿವೆ ಎಂದು ವಿಶ್ವನಾಥ ಪಾಟೀಲ ವಿವರಿಸಿದರು.
ಸೌಹಾರ್ದ ಸಹಕಾರಿ ಒಕ್ಕೂಟದ 25ನೇ ವರ್ಷದ ಸಂಭ್ರಮದ ವೇಳೆ ರಾಯಚೂರಿನಲ್ಲಿ ಈ ಅಖಿಲ ಭಾರತ ಸಹಕಾರ ಸಪ್ತಾಾಹ ಸಮಾರಂಭ ನಡೆಯುತ್ತಿಿರುವುದು ಹರ್ಷ ತಂದಿದೆ. ರಾಜ್ಯ ಸರ್ಕಾರದ ಸಹಕಾರ ಕಾಯಿದೆಯ ಸಾಧಕ-ಬಾಧಕಗಳ ಬಗ್ಗೆೆ ಮುಂಬರುವ ದಿನಗಳಲ್ಲಿ ಚರ್ಚಿಸಿ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂಬುದರ ಬಗ್ಗೆೆ ನಿರ್ಧರಿಸಲಾಗುತ್ತದೆ.
— ದೊಡ್ಡ ಬಸವರಾಜ, ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ.
ರಾಜ್ಯದಲ್ಲಿ ಆತ್ಮನಿರ್ಭರ ಭಾರತದ ಸಾಧನೆಗೆ ವಾಹಕಗಳಾಗಿ, ಆರ್ಥಿಕ ಸಬಲೀಕರಣಕ್ಕೆೆ ತನ್ನದೆ ಆದ ಸೌಕರ್ಯಗಳೊಂದಿಗೆ ಸಹಕಾರ ಸಂಘ, ಸೌಹಾರ್ದ ಬ್ಯಾಾಂಕ್ಗಳು ಕೆಲಸ ಮಾಡುತ್ತಿಿವೆ. ಈ ಸಹಕಾರ ಸಪ್ತಾಾಹ ಸಮಾರಂಭಕ್ಕೆೆ ಜಿಲ್ಲೆೆಯ ಎಲ್ಲ ಸಹಕಾರಿಗಳು, ರೈತರು, ಸದಸ್ಯರು ಆಗಮಿಸಿ ಯಶಸ್ವಿಿಗೊಳಿಸಲು ಕೋರುತ್ತೇನೆ.
— ಆರ್.ತಿಮ್ಮಯ್ಯಶೆಟ್ಟಿಿ, ಮಾನ್ವಿಿಘಿ ರಾಜ್ಯ ನಿರ್ದೇಶಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ.

