ಸುದ್ದಿಮೂಲ ವಾರ್ತೆ ಬಳ್ಳಾರಿ, (ಕುಡತಿನಿ), ಡಿ.28:
ಕುಡತಿನಿ ಸುತ್ತಲಿನ ಭೂ ಸಂತ್ರಸ್ತರು ಭೂಮಿಯನ್ನು ತುಂಡು ತುಂಡು ಮಾಡಿ ಬೇರೆ ಬೇರೆ ಕಂಪನಿಗಳಿಗೆ ರಿಯಲ್ ಎಸ್ಟೇಟ್ ರೀತಿಯಲ್ಲಿ ಮಾರಾಟ ಮಾಡುತ್ತಿಿರುವ ಕೆಐಎಡಿಬಿಯ ನೀತಿಯನ್ನು ವಿರೋಧಿಸಿ ಏಳು ಗ್ರಾಾಮಗಳ ಭೂ ಸಂತ್ರಸ್ತರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಜನವರಿ 12ರ ಸೋಮವಾರ ಬೆಳಗ್ಗೆೆ ಕುಡತಿನಿಯಿಂದ ಬಳ್ಳಾಾರಿ ಜಿಲ್ಲಾಾಧಿಕಾರಿಗಳ ಕಚೇರಿಯವರೆಗೆ ಪಾದಾಯಾತ್ರೆೆ ಹಮ್ಮಿಿಕೊಂಡಿದ್ದಾಾರೆ.
ಕರ್ನಾಟಕ ಪ್ರಾಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷರಾಗಿರುವ ಯು. ಬಸವರಾಜ್ ಅವರು, ಕುಡತಿನಿ, ಹರಗಿನಡೋಣಿ, ಜಾನೇಕುಂಟೆ, ವೇಣಿವೀರಾಪುರ, ಕೊಳಗಲ್ಲು, ಯರಂಗಳಿ, ಸಿದ್ದಮ್ಮನಹಳ್ಳಿಿ ಗ್ರಾಾಮಗಳ 12ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಾಧೀನಕ್ಕೆೆ ತೆಗೆದುಕೊಂಡಿದ್ದು, ಬೃಹತ್ ಕೈಗಾರಿಕೆಗಳಿಗೆ ನೀಡಿದೆ. ಆದರೆ, ಈ ಭೂಮಿಯನ್ನು ಚಿಕ್ಕ ಚಿಕ್ಕ ಕೈಗಾರಿಕಾ ಘಟಕಗಳನ್ನು ಪ್ರಾಾರಂಭಿಸಲು ಮಾರಾಟ ಮಾಡುತ್ತಿಿದೆ. ಇದು ವ್ಯವಸ್ಥೆೆಯ ವಿರೋಧಿ ಎಂದರು.
ಜಿಂದಾಲ್ನ ಜೆಎ್ಇ ಸ್ಟೀಲ್ ಎಲೆಕ್ಟ್ರಿಿಕಲ್ ಕೈಗಾರಿಕೆ ಸ್ಥಾಾಪನೆಗೆ ಸರ್ಕಾರ ಭೂಮಿ ನೀಡಿದೆ. ಮಿತ್ತಲ್, ಬ್ರಹ್ಮಿಿಣಿ ಸೇರಿ ವಿವಿಧ ಕೈಗಾರಿಕೆಗಳಿಗೆ ಭೂಮಿ ನೀಡಿರುವ ಕೆಐಎಡಿಬಿಯು ಈಗ ಅದೇ ಭೂಮಿಯನ್ನು ತುಂಡು ತುಂಡಾಗಿ ವಿವಿಧ ಕಂಪನಿಗಳಿಗೆ ನೀಡುತ್ತಿಿದೆ. ಈಗ, ಜಿಂದಾಲ್ನ ಜೆಎ್ಇ ಘಟಕ ಪ್ರಾಾರಂಭಕ್ಕೆೆ ಪರವಾನಿಗೆ ನೀಡಿದೆ ಎಂದರು.
ಕೆಐಎಡಿಬಿಯ ಈ ಕ್ರಮವನ್ನು ವಿರೋಧಿಸಿ ಪಾದಯಾತ್ರೆೆ ಹಮ್ಮಿಿಕೊಳ್ಳಲಾಗಿದೆ. ಈ ಪಾದಯಾತ್ರೆೆಯಲ್ಲಿ ಭೂ ಸಂತ್ರಸ್ತರು, ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಹಾಗೂ ವಿವಿಧ ಸಂಘಟನೆಗಳವರು ಪಾಲ್ಗೊೊಳ್ಳುತ್ತಿಿದ್ದಾಾರೆ ಎಂದರು.

