ಸುದ್ದಿಮೂಲ ವಾರ್ತೆ ಮಸ್ಕಿ, ಜ.19:
ಪಟ್ಟಣದ ಪುರಸಭೆ ಹತ್ತಿಿರ ಇರುವ
ಶ್ರೀ ಕಾಳಿಕಾ ದೇವಿಯ ದೇವಸ್ಥಾಾನದ ವಾರ್ಷಿಕೋತ್ಸವವು ಅತ್ಯಂತ ವೈಭವದಿಂದ ದಿ.23 ಶುಕ್ರವಾರದಂದು ಜರುಗಲಿದೆ. ಈ ಶುಭ ಸಂದರ್ಭದಲ್ಲಿ ಕುಂಭ, ಕಳಸ, ಪಲ್ಲಕ್ಕಿಿಉತ್ಸವ, ಪುರವಂತರ ಸೇವಾ ಮತ್ತು ಪೂಜಾ ಕಾರ್ಯಕ್ರಮ ಜರಗುತ್ತವೆ ನಂತರ ಅನ್ನಸಂತರ್ಪಣೆ ನಡೆಯುತ್ತದೆ.ಮಸ್ಕಿಿ ತಾಲೂಕಿನ ವಿಶ್ವಕರ್ಮ ಸಮಾಜದವರು ಮತ್ತು ಶ್ರೀ ಕಾಳಿಕಾದೇವಿಯ ಭಕ್ತರು, ಸಹ ಕುಟುಂಬ ಸಮೇತರಾಗಿ ಭಾಗವಹಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕಾಳಿಕಾ ದೇವಿ ಟ್ರಸ್ಟ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12ನೇ ವರ್ಷದ ಶ್ರೀ ಕಾಳಿಕಾದೇವಿ ವಾರ್ಷಿಕೋತ್ಸವ ಸಂಭ್ರಮ

