ಸುದ್ದಿಮೂಲ ವಿಶೇಷ ರಾಯಚೂರು, ನ.13:
ರಾಯಚೂರು ನಗರದಲ್ಲಿ ನಿರ್ಮಿಸಲಾಗಿರುವ ಜಿಲ್ಲಾಾ ನ್ಯಾಾಯಾಲಯದ ಸಂಕೀರ್ಣ ಕಾಮಗಾರಿ ಪೂರ್ಣಗೊಳಿಸಲು ಅನುದಾನದ ಕೊರತೆ ಎದುರಾಗಿದ್ದು ಮೂರು ವರ್ಷದ ಕಾಮಗಾರಿ ಮುಂದಿನ ವರ್ಷಕ್ಕೆೆ ಕಾಲಿಟ್ಟರೂ ಅಚ್ಚರಿ ಇಲ್ಲ ಎನ್ನುವಂತಿದೆ ಸದ್ಯದ ಸ್ಥಿಿತಿ.
ನಗರದ ಹೈದ್ರಾಾಬಾದ್ ರಸ್ತೆೆಯ ಹಳೆಯ ಜಿಲ್ಲಾಾಸ್ಪತ್ರೆೆಯ ಸ್ಥಳದಲ್ಲಿ ನಿರ್ಮಿಸಲಾಗುತ್ತಿಿರುವ ಜಿಲ್ಲಾಾ ನ್ಯಾಾಯಾಲಯದ ಸಂಕೀರ್ಣ ಕಟ್ಟಡ ಕಾಮಗಾರಿಗೆ 2023ರ ಅಂತ್ಯದಲ್ಲಿ ಚಾಲನೆ ನೀಡಲಾಗಿತ್ತುಘಿ. ಮೂರು ವರ್ಷದಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಮೇಲುಸ್ತುವಾರಿಯಲ್ಲಿ ಹೈದ್ರಾಾಬಾದ್ ಮೂಲದ ಗುತ್ತಿಿಗೆದಾರರು ಕಾಮಗಾರಿ ನಿರ್ವಹಿಸಬೇಕಿತ್ತುಘಿ.ಅದಕ್ಕಾಾಗಿ ಆರಂಭದಲ್ಲಿ 28 ಕೋಟಿ ಅನುದಾನ ಮೀಸಲಿಡಲಾಗಿತ್ತುಘಿ. ಅದು 22 ಕೋಟಿಗೆ ಅಂತಿಮಗೊಳಿಸಲಾಗಿತ್ತುಘಿ. ಹೊಸ ನ್ಯಾಾಯಾಲಯದ ಸಂಕೀರ್ಣದ ಕಟ್ಟಡ ಮೂಲ ವಿನ್ಯಾಾಸದಂತೆಯೇ ನಿರ್ಮಿಸಿದ್ದು ಮೂರಂತಸ್ಥಿಿನ ಕಟ್ಟಡ ಇದಾಗಿದ್ದು ಅದರೊಳಗೆ 14 ವಿವಿಧ ಶ್ರೇಣಿಯ ನ್ಯಾಾಯಾಲಯಗಳ ಕಟ್ಟಡ, ಸಭಾಂಗಣ, ಆಡಳಿತಾತ್ಮಕ ಕೊಠಡಿಗಳು ಸೇರಿ ಹಳೆಯ ನ್ಯಾಾಯಾಲಯದಲ್ಲಿರುವ ಬಹುತೇಕ ವಿಭಾಗಗಳಿರುವಂತೆ ಕಟ್ಟಡ ನಿರ್ಮಿಸಲಾಗಿದೆ.
ಈಗಾಗಲೇ ಗುತ್ತಿಿಗೆದಾರರು ಮೂರಂತಸ್ಥಿಿನ ವಿವಿಧ ವಿಭಾಗಗಳನ್ನೊೊಳಗೊಂಡ ನ್ಯಾಾಯಾಲಯದ ಕಟ್ಟಡ ಪೂರ್ಣಗೊಳಿಸಿದ್ದು ಅನುದಾನ ಬಿಡುಗಡೆ ಮಾಡುವುದು ಬಾಕಿ ಇದೆ ಎಂದು ಹೇಳಲಾಗುತ್ತಿಿದೆ.
ಇದೀಗ ಬಹುತೇಕ ಕಟ್ಟಡ ಪೂರ್ಣಗೊಂಡಿದೆ. ಆದರೆ, ರಸ್ತೆೆಘಿ, ಒಳ ಹೊರ ಚರಂಡಿ, ವಿವಿಧ ಸೌಕರ್ಯ, ಪೀಠೋಪಕರಣಗಳು, ವಿದ್ಯುತ್ ಸಂಪರ್ಕ, ಪ್ರತ್ಯೇಕ ವಿದ್ಯುತ್ ಪರಿವರ್ತಕ ಸೇರಿ ವಿವಿಧ ಸೌಲಭ್ಯಗಳ ಪೂರೈಕೆಗೆ ಅನುದಾನದ ಕೊರತೆ ಎದುರಾಗಿದೆ.
ಇದಕ್ಕಾಾಗಿ ಲೋಕೋಪಯೋಗಿ ಇಲಾಖೆಯ ತಾಂತ್ರಿಿಕ ಅಧಿಕಾರಿಗಳು ಜಿಲ್ಲಾಾಡಳಿತದ ಮೂಲಕ ಸುಮಾರು 20 ಕೋಟಿ ಮೊತ್ತದ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾಾವನೆ ಸಲ್ಲಿಸಿದ್ದರು. ಆದರೆ, ಅದಕ್ಕೆೆ ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಆರ್ಥಿಕ ಇಲಾಖೆಯಿಂದ ಅನುಮತಿ ಸಿಗುವುದು ಅನುಮಾನ ವ್ಯಕ್ತಪಡಿಸಿದ್ದರಿಂದ ತುರ್ತಾಗಿ ಅಗತ್ಯ ಇರುವ ಸೌಲಭ್ಯಗಳಿಗೆ ಮೊದಲ ಹಂತದಲ್ಲಿ ಕ್ರಿಿಯಾ ಯೋಜನೆ ಸಲ್ಲಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಕಳೆದ ಐದು ತಿಂಗಳ ಹಿಂದೆ 13 ಕೋ 50 ಲ ಮೊತ್ತದ ಪ್ರಸ್ತಾಾವನೆಯನ್ನು ಸರ್ಕಾರಕ್ಕೆೆ ಸಲ್ಲಿಸಿದ್ದಾಾರೆ.
ಆದರೆ, ಇದುವರೆಗೂ ಆ ಮೊತ್ತಕ್ಕೂ ಅನುಮೋದನೆ ಸಿಗದ ಕಾರಣ ಜಿಲ್ಲಾಾ ನ್ಯಾಾಯಾಲಯದ ಕಟ್ಟಡ ಪೂರ್ಣಗೊಂಡರೂ ಅದು ಲೋಕಾರ್ಪಣೆಗೊಳ್ಳುವುದು ತಡವಾಗಲಿದೆ ಎಂಬುದು ವಾಸ್ತವ ಸಂಗತಿಯಾಗಿದೆ.
ಈ ಹಿನ್ನೆೆಲೆಯಲ್ಲಿ ಈಗಾಗಲೇ ವಕೀಲರ ಸಂಘದ ನೇತೃತ್ವದಲ್ಲಿ ನಿಯೋಗ ಜಿಲ್ಲೆೆಯ ಸಚಿವ, ಶಾಸಕರಿಗೆ, ಕಾನೂನು ಸಚಿವ ಎಚ್.ಕೆ.ಪಾಟೀಲ ಅವರನ್ನೂ ಭೇಟಿ ಮಾಡಿ ಹೊಸ ಕಟ್ಟಡ ಶೀಘ್ರ ಪೂರ್ಣ ಪ್ರಮಾಣದಲ್ಲಿ ಸಿದ್ದಗೊಳಿಸಿ ಲೋಕಾರ್ಪಣೆ ಮಾಡಬೇಕು ಅಲ್ಲದೆ, ವಕೀಲರ ಸಂಘದ ಕಟ್ಟಡಕ್ಕೂ ಪ್ರತ್ಯೇಕ ಅನುದಾನ ಒದಗಿಸಬೇಕು ಎಲ್ಲ ಕೊಠಡಿಗಳಲ್ಲಿ ಧ್ವನಿ ಸ್ಪಷ್ಟತೆಗೆ ಗೋಡೆಗೆ ತಾಲೂಕು ನ್ಯಾಾಯಾಲಯಗಳ ಮಾದರಿಯಲ್ಲಿ ಕಟ್ಟಿಿಗೆಯ ಪಟ್ಟಿಿಯ ಮಾದರಿ ನಿರ್ಮಾಣ ಮಾಡಿ ಕೊಡಲು ಒತ್ತಾಾಯಿಸಿದ್ದಾಾರೆ.
ಆದರೆ, ಹೊಸದಾಗಿ ಏನೇ ಸೌಲಭ್ಯಗಳ ಅಗತ್ಯವಿದ್ದರೂ ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಅನುದಾನದ ಪ್ರಸ್ತಾಾವನೆಗೆ ಅನುಮತಿ ಅನಿವಾರ್ಯವಾಗಿದೆ. ಅಲ್ಲದೆ, ಅನುಮತಿ ಸಿಕ್ಕ ಮೇಲೆ ಟೆಂಡರ್ ಕರೆದು ಸೌಲಭ್ಯ ಕೊಡಿಸಬೇಕಿದೆ.
ಹೀಗಾಗಿ, ಮೂರಂತಸ್ಥಿಿನ ಜಿಲ್ಲಾಾ ನ್ಯಾಾಯಾಲಯದ ಸಂಕೀರ್ಣ ಸಾರ್ವಜನಿಕ ಬಳಕೆಗೆ ಇನ್ನೂ ಎರಡ್ಮೂರು ತಿಂಗಳ ಕಾಯಬೇಕಾಗಿದೆ ಎಂಬುದು ವಾಸ್ತವ ಸಂಗತಿ.
ಕೋಟ್-1 :
ಈಗಾಗಲೇ ಜಿಲ್ಲಾಾ ನ್ಯಾಾಯಾಲಯದ ಸಂಕೀರ್ಣ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿ ಅಗತ್ಯ ಇರುವ ಸೌಲಭ್ಯಗಳಿಗಾಗಿ ಲೋಕೋಪಯೋಗಿ ಇಲಾಖೆ ಮೂಲಕ ಸರ್ಕಾರಕ್ಕೆೆ ಸುಮಾರು 13 ಕೋ 50 ಲಕ್ಷ ಮೊತ್ತದ ಪ್ರಸ್ತಾಾವನೆ ಸಲ್ಲಿಸಿದ್ದಾಾಗಿ ಅಧಿಕಾರಿಗಳು ತಿಳಿಸಿದ್ದಾಾರೆ. ಆ ಅನುದಾನ ಬಂದ ತಕ್ಷಣ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತಿಿದ್ದಂತೆ ಲೋಕಾರ್ಪಣೆ ಆಗಲಿದೆ.
— ಮಾರುತಿ ಎಸ್.ಬಗಾಡೆ, ಜಿಲ್ಲಾಾ ಸತ್ರ ಹಾಗೂ ಪ್ರಧಾನ ನ್ಯಾಾಯಾಧೀಶರು ರಾಯಚೂರು.
ಈಗಾಗಲೇ ಜಿಲ್ಲಾಾ ನ್ಯಾಾಯಾಲಯದ ಸಂಕೀರ್ಣದ ಕಟ್ಟಡ ಮುಗಿದಿದ್ದು ಉಳಿದ ಸೌಲಭ್ಯಗಳಿಗೆ ಅನುದಾನ ಕೋರಿ ಸರ್ಕಾರಕ್ಕೆೆ ಪ್ರಸ್ತಾಾವನೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಇದೆ. ಎಲ್ಲ ತಾಲೂಕಿನಲ್ಲೂ ಹೊಸ ಕೋರ್ಟ್ಗಳು ನಿರ್ಮಾಣವಾಗಿ ಲೋಕಾರ್ಪಣೆಯಾಗಿವೆ ನಮ್ಮ ಜಿಲ್ಲಾಾ ನ್ಯಾಾಯಾಲಯವೂ ಲೋಕಾರ್ಪಣೆ ಶೀಘ್ರ ಆಗಬೇಕು ಎಂಬುದು ನಮ್ಮ ಒತ್ತಾಾಯ.
— ಎನ್.ಶಿವಶಂಕರ, ಹಿರಿಯ ವಕೀಲ ರಾಯಚೂರು.
ಮೂರಂತಸ್ಥಿಿನ ಸುಸಜ್ಜಿಿತ ಜಿಲ್ಲಾಾ ನ್ಯಾಾಯಾಲಯದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಅಗತ್ಯ ರಸ್ತೆೆ ಮತ್ತಿಿತರ ಪೀಠೋಪಕರಣ, ಮೂಲ ಸೌಕರ್ಯಗಳಿಗಾಗಿ ಸರ್ಕಾರಕ್ಕೆೆ ಅನುದಾನ ಕೋರಿ ಪ್ರಸ್ತಾಾವನೆ ಸಲ್ಲಿಸಿದ್ದೇವೆ. ಬಂದ ತಕ್ಷಣ ಕೆಲಸ ಆರಂಭಿಸಲಾಗುವುದು.
— ರಾಘವೇಂದ್ರಘಿ, ಎಇಇ, ಲೋಕೋಪಯೋಗಿ ಇಲಾಖೆ.

