ಸುದ್ದಿಮೂಲ ವಾರ್ತೆ
ಆನೇಕಲ್,ಸೆ.19: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ದಿನಗಳ ಹಿಂದೆ ಮಾರಕ ರೋಗಕ್ಕೆ ಮೂರರಿಂದ ಹತ್ತು ತಿಂಗಳ ಏಳು ಚಿರತೆ ಮರಿಗಳು ಸಾವನ್ನಪ್ಪಿ ಸೂತಕದ ಛಾಯೆ ಆವರಿಸಿತ್ತು ಅದರ ಬೆನ್ನಲ್ಲೇ ಮಂಗಳವಾರ 13 ಜಿಂಕೆಮರಿಗಳು ಸಾವನಪ್ಪಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದ ಮೂರು ದಿನಗಳ ಹಿಂದೆ ಮೂರರಿಂದ ಹತ್ತು ತಿಂಗಳ ಚರಿತೆ ಮರಿಗಳು ಪಾರ್ವೊ ಮಾರಕ ರೋಗಕ್ಕೆ ತುತ್ತಾಗಿ ಸಾವನಪ್ಪಿದ್ದು ಆ ಪ್ರಕರಣ ಮಾಸುವ ಮುನ್ನವೇ ಉದ್ಯಾನವನ ಸಫಾರಿಯಲ್ಲಿ 13 ಜಿಂಕೆ ಮರಿಗಳು ಸಾವನಪ್ಪಿದೆ.
ಸೇಂಟ್ ಜಾನ್ ಆಸ್ಪತ್ರೆ ಬಳಿ 28 ಜಿಂಕೆಮರಿಗಳನ್ನು ಸಾಕಲಾಗಿತ್ತು. ಅದಕ್ಕೆ ಸೂಕ್ತ ಪೋಷಣೆ ಇಲ್ಲವೆಂದು ಬನ್ನೇರುಘಟ್ಟ ಪಾರ್ಕ್ ಗೆ ಕರೆ ತರಲಾಗಿತ್ತು, ಆದರೆ, 28 ಜಿಂಕೆಮರಿಗಳಲ್ಲಿ ಈಗಾಗಲೇ 13 ಸಾವನ್ನಪ್ಪಿದೆ.
ಕನಿಷ್ಟ ಕಾರ್ಯನಿರ್ವಾಹಣಾಧಿಕಾರಿಗೆ ಬೇರೆಡೆಯಿಂದ ತನ್ನ ಪ್ರಾಣಿಗಳನ್ನು ಕನಿಷ್ಠ ಒಂದು ತಿಂಗಳು ಕ್ವಾರಂಟೈನ್ ಮಾಡಬೇಕಿತ್ತು. ಆದರೆ, ಒಂದೇ ವಾರಕ್ಕೆ ಅವುಗಳನ್ನ ಸಫಾರಿಗೆ ಬಿಡಲಾಗಿತ್ತು. ಅಲ್ಲದೆ, ಆರೋಗ್ಯ ಮತ್ತು ಆಹಾರ ಔಷಧೋಪಚಾರ ಬಗ್ಗೆ ನಿಗವಹಿಸಬೇಕಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳದೆ ಸಫಾರಿಗೆ ಬಿಟ್ಟ ಕಾರಣಕ್ಕೆ 13 ಜಿಂಕೆಗಳು ಸಾವನಪ್ಪಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಾಣಿ ಪ್ರಿಯರು ಸಹ ಸೂಕ್ತ ತನಿಖೆಯನ್ನು ಮಾಡುವಂತೆ ಆಗ್ರಹಿಸಿದ್ದಾರೆ.
ಪಾರ್ವೊ ಕಾಯಿಲೆಯ ಬಗ್ಗೆ ಆನೇಕಲ್ ಪಶು ವೈದ್ಯಕೀಯ ವೈದ್ಯರಾದ ರಾಜಶೇಖರ್ ಈ ಬಗ್ಗೆ ಪ್ರತಿಕ್ರಿಯಿಸಿ,. ಪಾರ್ವೋ ಮಾರಕ ರೋಗ ಕೊರೋನ ಕಾಯಿಲೆ ಇದ್ದಂತೆ. ಇದು ಗಾಳಿಯಿಂದ ಹರಡುವ ಒಂದು ಮಾರಕ ರೋಗ ಅತಿ ಹೆಚ್ಚು ಬೆಕ್ಕು ಮತ್ತು ನಾಯಿಮರಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರಾಣಿಗಳಿಗೂ ಹರಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಬೆಕ್ಕು ಮತ್ತು ನಾಯಿಗಳಲ್ಲಿ ಪಾರ್ವೊ ಕಾಯಿಲೆ ಕಾಣಿಸಿಕೊಂಡಿದೆ ಇದರಿಂದ ಜೀರ್ಣಕ್ರಿಯೆ ಸಾಕಷ್ಟು ತೊಂದರೆಯನ್ನು ನೀಡುತ್ತದೆ.
ಆರು ದಿನಗಳ ಕಾಲ ಸೂಕ್ತ ವ್ಯಾಕ್ಸಿನೇಷನ್ ನನ್ನು ನೀಡಿ ಅಬ್ಸರ್ವೇಷನ್ ನಲ್ಲಿ ಇಡಬೇಕು. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೂಸ್ಟರ್ ಡೋಸ್ ಗಳನ್ನು ನೀಡಬೇಕು. ಆ ಬಗ್ಗೆ ಹೆಚ್ಚಿನ ಗಮನವಹಿಸಿ ಪ್ರಾಣಿಗಳನ್ನು ರಕ್ಷಣೆ ಮಾಡಬೇಕು ಅಂತ ರಾಜಶೇಖರ್ ಅವರು ತಿಳಿಸಿದರು.