ಸುದ್ದಿಮೂಲ ವಾರ್ತೆ
ಮೈಸೂರು, ಮೇ 3: ಏನೇ ಆಗಲಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಬಿ.ಎನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಕೃಷ್ಣರಾಜ ಕ್ಷೇತ್ರದ
ವೀರಶೈವ ಲಿಂಗಾಯತ ಸಮುದಾಯದ ಸಭೆ ನಡೆಸಿ ಯಡಿಯೂರಪ್ಪ ಮಾತನಾಡಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ಅವರಿಗೆ ವೀರಶೈವ ಲಿಂಗಾಯತ
ಸಮುದಾಯ ಪೂರ್ಣ ಪ್ರಮಾಣದಲ್ಲಿ ಮತಚಲಾಯಿಸಿ ಅತಿಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ
ಮಾಡಿದ ಅವರು, ಅನ್ಯಪಕ್ಷಗಳ ಮಾತಿಗೆ ಹಾಗೂ ಯಾವುದೇ ವದಂತಿಗಳಿಗೆ ವೀರಶೈವ ಸಮಾಜ
ಕಿವಿಕೊಡಬಾರದು ಎಂದು ಕಿವಿಮಾತು ಹೇಳಿದರು.
ಈ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡೇ ಮಾಡುತ್ತೇವೆ ಎಂದು ನರೇಂದ್ರ ಮೋದಿ, ಅಮಿತ್ ಶಾ, ಜೆಪಿ
ನಡ್ಡಾ ರವರೊಂದಿಗೆ ಮಾತನಾಡಿ ತಿಳಿಸಿದ್ದು, ಹಾಗಾಗಿ ರಾಜ್ಯದೆಲ್ಲಡೆ ಪ್ರವಾಸ ಮಾಡುತ್ತಿದ್ದೇನೆ. ನಮ್ಮ
ಪಕ್ಷದ ಅಭ್ಯರ್ಥಿ ಟಿ.ಎಸ್ ಶ್ರೀವತ್ಸ ರವರಿಗೆ ಸಂಪೂರ್ಣ ಆಶೀರ್ವಾದ ಮಾಡಿದ್ದೇನೆ. ವೀರಶೈವರು ಹೆಚ್ಚಿನ
ಸಂಖ್ಯೆಯಲ್ಲಿ ಮತಚಲಾಯಿಸಬೇಕು ಎಂದು ಕರೆ ನೀಡಿದರು.
ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಟಿ.ಎಸ್ ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ,
ವೀರಶೈವ ಸಮುದಾಯದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ಕೆ ಎನ್ ಪುಟ್ಟಬುದ್ದಿ, ಯು. ಎಸ್ ಶೇಖರ್,
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ, ಕಾಪು ಸಿದ್ದಲಿಂಗ ಸ್ವಾಮಿ, ಮಾಜಿ ಮಹಾಪೌರರಾದ ಸುನಂದ
ಪಾಲನೇತ್ರ, ನಗರಪಾಲಿಕೆ ಸದಸ್ಯರಾದ ಬಿ ವಿ ಮಂಜುನಾಥ್, ಜಗದೀಶ್, ಕೇಬಲ್ ಮಹೇಶ್, ನಿರಂಜನ್
ಮರ್ತಿ, ಜಯಶಂಕರ್ , ಜೀವದಾರ ಗಿರೀಶ್, ಪುಟ್ಟರಾಜಪ್ಪ, ಸಂತೋಷ್ ಕುಮಾರ್, ಪ್ರಕಾಶ್ ಪಟೇಲ್, ಜಯ ಗೌಡ, ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.