ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.28:
ಭಾರತೀಯ ರಾಷ್ಟ್ರೀಯ ಕಾಂಗ್ರೆೆಸ್ ಪಕ್ಷದ 140ನೇ ಸಂಸ್ಥಾಾಪನಾ ದಿನಾಚರಣೆಯನ್ನು ಲಿಂಗಸುಗೂರು ಪಟ್ಟಣದ ಕಾಂಗ್ರೆೆಸ್ ಕಚೇರಿಯಲ್ಲಿ ರವಿವಾರ ಆಚರಿಸಲಾಯಿತು.
ರಾಯಚೂರು-ಕೊಪ್ಪಳ ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಾಪುರ ರಾಷ್ಟ್ರಪಿತ ಮಹಾತ್ಮಾಾ ಗಾಂಧೀಜಿಯವರ ಭಾವಚಿತ್ರಕ್ಕೆೆ ಪುಷ್ಪನಮನ ಸಲ್ಲಿಸಿ ಮಾತನಾಡಿ ದೇಶಕ್ಕೆೆ ಸ್ವಾಾತಂತ್ರ್ಯ ತಂದುಕೊಟ್ಟು, ರಾಷ್ಟ್ರದ ಏಕತೆ, ಅಖಂಡತೆ ಹಾಗೂ ಸರ್ವತೋಮುಖ ಅಭಿವೃದ್ಧಿಿಗೆ ಶ್ರಮಿಸಿದ ಕಾಂಗ್ರೆೆಸ್ ಪಕ್ಷದ ಎಲ್ಲಾಾ ಹಿರಿಯ ನಾಯಕರು ಮತ್ತು ಮಹಾನ್ ತ್ಯಾಾಗಿಗಳನ್ನು ಸ್ಮರಿಸಿ ಕಾಂಗ್ರೆೆಸ್ ಪಕ್ಷವು ದೇಶದ ಪ್ರಜಾಪ್ರಭುತ್ವದ ರಕ್ಷಣೆಗೆ ಹಾಗೂ ಸಾಮಾಜಿಕ ನ್ಯಾಾಯದ ಅನುಷ್ಠಾಾನಕ್ಕೆೆ ನೀಡಿರುವ ಕೊಡುಗೆಗಳನ್ನು ಗುಣಗಾನ ಮಾಡಿದರು.
ನಗರ ಯೋಜನೆ ಪ್ರಾಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ ಕರಡಕಲ್, ಗ್ಯಾಾರಂಟಿ ಯೋಜನೆಗಳ ಜಿಲ್ಲಾಾ ಅಧ್ಯಕ್ಷ ಪಾಮಯ್ಯ ಮುರಾರಿ, ಮಾಜಿ ಜಿ.ಪಂ, ಅಧ್ಯಕ್ಷ ಗುಂಡಪ್ಪನಾಯಕ್, ಸೋಮಶೇಖರ್ ಐದನಾಳ, ಪ್ರಮೋದಕುಲ್ಕರ್ಣಿ, ಶರಣಬಸವವಾರದ, ಶಿವನಗೌಡ ವಂದಲಿ, ಅನಿಷ್ಪಾಷಾ, ಅಮರೇಶ ಮೆದಿನಾಪುರ, ವೆಂಕಟೇಶ ಕಳ್ಳಿಿಲಿಂಗಸುಗೂರು, ನಾಗರಾಜ್ ಕುಪ್ಪಣ್ಣ, ಲಾಲಪ್ಪ ರಾಠೋಡ, ಜಗದೀಶ ಪಾಟೀಲ್, ಪ್ರಕಾಶ್ ಕುರಿ, ಶಿವಾಜಿ ಕಟ್ಟಿಿಮನಿ, ಶರಣಪ್ಪ ಹುನುಕುಂಟಿ, ಮೋಹನ್ ಗೋಸ್ಲೆೆ ಕರಡಕಲ್, ಮೌನೇಶ ತೊಪ್ಪಲ್ದೊಡ್ಡಿಿ ಸೇರಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಲಿಂಗಸುಗೂರಿನಲ್ಲಿ 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

