ಸುದ್ದಿಮೂಲ ವಾರ್ತೆ ರಾಯಚೂರು, ೆ.25:
ಆರ್ಟಿಪಿಎಸ್ನಲ್ಲಿ ಅನೇಕ ವರ್ಷಗಳಿಂದ ಖಾಯಂ ಸ್ವರೂಪದ ಕೆಲಸ ಮಾಡುತ್ತಿಿರುವ ಗುತ್ತಿಿಗೆ ಕಾರ್ಮಿಕರ ಸೇವೆ ಖಾಯಂ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗಾಗಿ 15 ದಿನಗಳ ಗಡುವಿನ ಮನವಿಯನ್ನು ಅಧಿಕಾರಿಗಳಿಗೆ ಆರ್ಟಿಪಿಎಸ್ ಗುತ್ತಿಿಗೆ ಕಾರ್ಮಿಕರ ಸಂಘಗಳ ಜಂಟಿ ಹೋರಾಟ ಸಮಿತಿ ನೀಡಿದೆ.
ಇಂದು ಆರ್ಟಿಪಿಎಸ್ ಆವರಣದಲ್ಲಿ ವಿವಿಧ ವಲಯದ ಗುತ್ತಿಿಗೆ ಕಾರ್ಮಿಕರ ಸಭೆ ನಡೆಸಿದ ನಂತರ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ ಅವರಿಗೆ ಮುಷ್ಕರ ನಡೆಸುವ ಮುಂದಿನ 15 ದಿನಗಳ ಗಡುವು ನೀಡಿ ಬೇಡಿಕೆ ಮನವಿ ಸಲ್ಲಿಸಿದರು.
2025ರಲ್ಲಿ ವೇತನ ಶೇ.15ರಷ್ಟು ಹೆಚ್ಚುವರಿ ಮಾಡಿ ಪರಿಷ್ಕರಣೆ ಮಾಡಬೇಕು, 10 ವರ್ಷಗಳ ಗುತ್ತಿಿಗೆ ಕಾರ್ಮಿಕರು ಕೆಲಸ ಮಾಡುತ್ತಿಿದ್ದು ಅವರ ಸೇವಾ ಭದ್ರತೆಗನುಗುಣವಾಗಿ ಖಾಯಂಗೊಳಿಸಬೇಕು, ವಿವಿಧ ನ್ಯಾಾಯಾಲಯಗಳ ಪ್ರಕರಣದಡಿ ಸರ್ಕಾರಕ್ಕೆೆ ಶಿಾರಸ್ಸು ಮಾಡಬೇಕು, ಗುತ್ತಿಿಗೆ ಪದ್ದತಿ ಸರ್ಕಾರದ ಆದೇಶದಂತೆ ರದ್ದಾಾಗಿದ್ದು ಅನುಮತಿ ನೀಡದಿದ್ದರೂ ಮುಂದುವರಿದಿದ್ದು ಸೂಕ್ತ ಮಾರ್ಗ ಅನುಸರಿಸಬೇಕು, ಒಂದೇ ಮೂಲ ಮಾಲಿಕರಡಿಯಲ್ಲಿ ಕೆಲಸ ಮಾಡಿದ್ದು ಅವರಿಗೆ ನಿವೃತ್ತಿಿ ಅಥವಾ ನಿಧನದ ನಂತರ ನಿಯಮ ಬದ್ದವಾಗಿ ಉಪಧಾನ ನೀಡಿಲ್ಲ ಇದನ್ನು ಸರಿಪಡಿಸಬೇಕು, ವಿದ್ಯುತ್ ಉತ್ಪಾಾದನೆಯಲ್ಲಿ ಗುತ್ತಿಿಗೆ ಕಾರ್ಮಿಕರ ಸೇವೆಗಾಗಿ ಭವಿಷ್ಯ ನಿಧಿ ಖಾತೆಗೆ ವಂತಿಗೆ ಜಮಾ ಮಾಡಲು ಕ್ರಮ ವಹಿಸಬೇಕು, ಇಎಸ್ಐ, ಬೋನಸ್ ಮತ್ತಿಿತರ ಸೌಕರ್ಯ ಒದಗಿಸಬೇಕು ಅವರ ಮಕ್ಕಳಿಗೆ ಶುಲ್ಕ ರಹಿತ ಶಿಕ್ಷಣಕ್ಕೆೆ ಅವಕಾಶ ಕೊಡಬೇಕು, ಮನವಿ ಮಾಡಿದಾಗ ಅವುಗಳ ಬಗ್ಗೆೆ ಚರ್ಚಿಸಲು ಮನಸು ಮಾಡಬೇಕು, ಪ್ರತಿಭಟಿಸಿದ್ದಕ್ಕಾಾಗಿ ಆರು ಜನ ಕಾರ್ಮಿಕರಿಗೆ ಕಿರುಕುಳ ನೀಡುವುದು ನಿಲ್ಲಿಸಬೇಕು, ಗುಣಮಟ್ಟದ ಶಿರಸಾಣ ಸೇರಿ ರಕ್ಷಣೆಯ ಸಾಮಾಗ್ರಿಿ ಒದಗಿಸಬೇಕು, ಮೆಡಿಕಲ್ ತಪಾಸಣೆ ವರದಿ ಸೇರಿ ಹಲವು ಬೇಡಿಕೆಗಳ ಈಡೇರಿಸಲು ಒತ್ತಾಾಯಿಸಿದ್ದಾಾರೆ.
ಈ ಎಲ್ಲ ಬೇಡಿಕೆಗಳನ್ನು ಮುಂದಿನ 15 ದಿನಗಳಲ್ಲಿ ಚರ್ಚಿಸಿ ತಮ್ಮ ಸಂಘದ ಜೊತೆ ಚರ್ಚಿಸದೆ ಹೋದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಅಯ್ಯಣ್ಣ ಮಹಾಮನಿ, ಪ್ರಘಿ.ಕಾರ್ಯದರ್ಶಿ ಎಸ್.ಬಿ.ಪಾಟೀಲ ಸೇರಿದಂತೆ ಗುತ್ತಿಿಗೆ ಕಾರ್ಮಿಕರಿದ್ದರು.
ಆರ್ಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದಿಂದ 15 ದಿನ ಗಡವು ಸೇವೆ ಖಾಯಂ, ವೇತನ ಪರಿಷ್ಕರಣೆಗೆ ಆಗ್ರಹ

