ಸುದ್ದಿಮೂಲ ವಾರ್ತೆ,
ನವದೆಹಲಿ,ಏ.9 :ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆೆಗೆ ಭಾನುವಾರ ಸಹ ರಾಷ್ಟ್ರ ರಾಜಧಾನಿಯಲ್ಲಿ ಕಸರತ್ತು ಮುಂದುವರೆದಿದ್ದು, 16 ಶಾಸಕರಿಗೆ ಟಿಕೆಟ್ ಕೈ ತಪ್ಪುುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಜೆ 5 ಗಂಟೆಗೆ ಸಂಸದೀಯ ಮಂಡಳಿ ಸಭೆ ನಡೆದಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಾ, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಮುಖ್ಯಮಂತ್ರಿಿ ಬಸವರಾಜ ಬೊಮ್ಮಾಾಯಿ, ಮಾಜಿ ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತಿಿತರರು ಭಾಗವಹಿಸಿದ್ದರು.
ಮೂಲಗಳ ಪ್ರಕಾರ ಹಾಲಿ ಬಿಜೆಪಿಯ 16 ಶಾಸಕರಿಗೆ ಟಿಕೆಟ್ ಕೈ ತಪ್ಪಲಿದ್ದು, ಈ ಕ್ಷೇತ್ರಕ್ಕೆೆ ಹೊಸಬರನ್ನು ಕಣಕ್ಕಿಿಳಿಸಲು ಬಿಜೆಪಿ ಮುಂದಾಗಿದೆ. ಕೆಲವರು ವಯಸ್ಸಿಿನ ಕಾರಣಕ್ಕಾಾಗಿ ಸ್ಪರ್ಧೆಗೆ ಹಿಂದೇಟು ಹಾಕಿದರೆ ಇನ್ನು ಕೆಲವರಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹಾಗೂ ಮೂರು ಸಮೀಕ್ಷೆಗಳಲ್ಲಿ ಸೋಲಬಹುದೆಂಬ ಭೀತಿ ಇರುವುದರಿಂದ ಪಕ್ಷ ನಿಷ್ಠರಿಗೆ ಟಿಕೆಟ್ ನೀಡಬೇಕೆಂದು ಚರ್ಚೆ ನಡೆಸಿದ್ದಾಾರಂತೆ.
ಈಗಾಗಲೇ ಗುಜರಾತ್, ಹಿಮಾಚಲ ಪ್ರದೇಶ ಸೇರಿದಂತೆ ಇತ್ತೀಚಿನ ಚುನಾವಣೆಗಳಲ್ಲಿ ಹಿರಿಯ ನಾಯಕರು ಮತ್ತು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಇದೇ ಸಂಪ್ರದಾಯವನ್ನು ರಾಜ್ಯ ಚುನಾವಣೆಯಲ್ಲಿಯೂ ಮುಂದುವರೆಸಲಿದೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಹಲವು ಶಾಸಕರಿಗೆ ಟಿಕೆಟ್ ಕೈತಪ್ಪುವ ಆತಂಕ ಕಾಣಿಸಿಕೊಂಡಿದೆ.
ಇದಕ್ಕೂ ಮುನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಾ ಅವರ ನಿವಾಸದಲ್ಲಿ ಮತ್ತೊೊಂದು ಸುತ್ತಿಿನ ಮಾತುಕತೆ ನಡೆದಿದ್ದು, ಅಂತಿಮವಾಗಿ ಸಂಸದೀಯ ಮಂಡಳಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸಂಜೆ ಇಲ್ಲವೇ ಸೋಮವಾರ ಮೊದಲ ಹಂತದ ಪಟ್ಟಿಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಮೊದಲ ಪಟ್ಟಿಿಯಲ್ಲಿ 125ರಿಂದ 140 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದ್ದು, ತಕ್ಷಣವೇ ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಧಾನಿ ನೇತೃತ್ವದ ಈ ಸಭೆಯಲ್ಲಿ 140ಕ್ಕೂ ಹೆಚ್ಚು ಹೆಸರು ಒಳಗೊಂಡಿರುವ ಮೊದಲ ಪಟ್ಟಿಿ ಅಂತಿಮಗೊಳಿಲಾಗಿದೆ ಎಂದು ತಿಳಿದುಬಂದಿದೆ. ಎಲ್ಲಾ 224 ಸ್ಥಾಾನಗಳ ಅಭ್ಯರ್ಥಿಗಳ ಬಗ್ಗೆೆ ಸಭೆಯಲ್ಲಿ ಚರ್ಚೆ ನಡೆಸಿ. ಆದರೂ ಕಾಂಗ್ರೆೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಉಳಿದ ಸ್ಥಾಾನಗಳಿಗೆ ಅಭ್ಯರ್ಥಿ ಘೋಷಿಸಿದ ನಂತರ ಎರಡನೇ ಪಟ್ಟಿಿ ಬಿಡುಗಡೆ ಮಾಡಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆೆಸ್ ಇನ್ನೂ 58 ಸ್ಥಾಾನಗಳಿಗೆ ಅಭ್ಯರ್ಥಿ ಘೋಷಿಸ ಬೇಕಿದೆ. ಜೆಡಿಎಸ್ ತನ್ನ ಎರಡನೇ ಪಟ್ಟಿಿಯನ್ನು ಬಿಡುಗಡೆ ಮಾಡಿಲ್ಲ. ಪಟ್ಟಿಿ ಬಿಡುಗಡೆ ಬಳಿಕ ಬಂಡಾಯವೇಳುವ ನಾಯಕರು ಪಕ್ಷಾಂತರ ಮಾಡುವುದು ಸಾಮಾನ್ಯ, ಹೀಗಾಗಿ ಕಾಂಗ್ರೆೆಸ್ ಮತ್ತು ಜೆಡಿಎಸ್ನ ಪಟ್ಟಿಿ ಬಿಡುಗಡೆ ನಂತರವೇ ಬಿಜೆಪಿ ಕೆಲವು ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಆಂತರಿಕ ಸಮೀಕ್ಷೆ ವರದಿಗಳು, ವಯೋಮಿತಿ, ಹೆಚ್ಚು ಬಾರಿ ಅವಕಾಶ, ಅಧಿಕಾರ ಅನುಭವಿಸಿದ ಹತ್ತಾಾರು ಶಾಸಕರ ಮರು ಸ್ಪರ್ಧೆಗೆ ಅವಕಾಶ ನೀಡಬೇಕೆ?, ಬೇಡವೇ ಎಂಬ ಬಗ್ಗೆೆಯೂ ಚರ್ಚೆ ನಡೆದಿದೆ. ಹಾಗೆಯೇ ಕೆಲ ಸಂಸದರು, ಎಂಎಲ್ಸಿಿಗಳು ಚುನಾವಣೆಗೆ ಉತ್ಸಾಾಹ ತೋರಿರುವ ಕುರಿತೂ ಸಮಾಲೋಚನೆ ನಡೆದಿದೆ ಎಂದುಗೊತ್ತಾಾಗಿದೆ.
ಅಧಿಕಾರಕ್ಕೆೆ ತಂದೇ ತೀರಬೇಕೆಂದು ಕಾರ್ಯತಂತ್ರ ಹೆಣೆಯುತ್ತಿಿರುವ ಬಿಜೆಪಿ ವರಿಷ್ಠರು ಸಮರ್ಥ ಅಭ್ಯರ್ಥಿಗಳ ಆಯ್ಕೆೆಗೆ ಯಾವೆಲ್ಲಾ ಮಾನದಂಡ ಅನುಸರಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ಯಾರಿಗೆ ಟಿಕೆಟ್ ಇಲ್ಲ
ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ ನಗರ
ಎಂ.ಪಿ.ಕುಮಾರಸ್ವಾಾಮಿ – ಮೂಡಿಗೆರೆ
ಸುಕುರ್ಮಾ ಶೆಟ್ಟಿಿ – ಬೈಂದೂರು
ಸುನೀಲ್ ನಾಯಕ್ – ಭಟ್ಕಳ
ಸಂಜೀವ್ ಮಠಂದೂರು – ಪುತ್ತೂರು
ಎಸ್.ಎ.ರವೀಂದ್ರನಾಥ್ – ದಾವಣಗೆರೆ ಉತ್ತರ
ಹಾಲಾಡಿ ಶ್ರೀನಿವಾಸ ಶೆಟ್ಟಿಿ – ಕುಂದಾಪುರ
ಮಹೇಶ್ ಕುಮಟಹಳ್ಳಿಿ – ಅಥಣಿ
ನೆಹರು ಓಲೆಕಾರ್ – ಹಾವೇರಿ
ವೆಂಕಟ್ರೆಡ್ಡಿಿ ಮುದ್ನಾಾಳ್ – ಯಾದಗಿರಿ
ಬಸವರಾಜ ಮತ್ತಿಿಮೂಡ್ – ಕಲಬುರಗಿ ಗ್ರಾಾಮೀಣ
ಸೋಮಲಿಂಗಪ್ಪ – ಶಿರಗುಪ್ಪ
ಮಾಡಾಳು ವಿರೂಪಾಕ್ಷಪ್ಪ – ಚೆನ್ನಗಿರಿ
ರವಿ ಸುಬ್ರಹ್ಮಣ್ಯ – ಬಸವನಗುಡಿ
ಉದಯ ಗರುಡಾಚಾರ್ – ಚಿಕ್ಕಪೇಟೆ
ಎಂ.ಕೃಷ್ಣಪ್ಪ – ಬೆಂಗಳೂರು ದಕ್ಷಿಣ
ಎಸ್.ಎ.ರಾಮದಾಸ್ – ಕೃಷ್ಣರಾಜ
ಕಳಕಪ್ಪ ಬಂಡಿ – ರೋಣ
ಲಾಲಜಿ ಮೆಂಡನ್ – ಕಾಪು
ರಾಮಪ್ಪ ಲಮಾಣಿ – ಶಿರಹಟ್ಟಿಿ