ಜೇವರ್ಗಿ ೦೮ : ಪಟ್ಟಣದಲ್ಲಿನ ೧೮ ವಯಸಿನ ಎಲ್ಲಾ ಜನರು ತಪ್ಪದೆ ಮತದಾರರ ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಬೇಕು ಎಂದು ಜಮಾತೇ ಉಲ್ಮಾಎ ಹಿಂದ ಜೇವರ್ಗಿ ಅಧ್ಯಕ್ಷ ಮೌಲಾನ ಅಬ್ದುಲ್ ರಹೀಮ್ ಬಾಕವಿ ತಿಳಿಸಿದರು.
ಪಟ್ಟಣದ ಅಬ್ದುಲ್ ಕಲಾಂ ಶಾಲೆಯಲ್ಲಿ ಜಮಾತೇ ಉಲ್ಮಾಎ ಹಿಂದ ಜೇವರ್ಗಿ ವತಿಯಿಂದ ಮತದಾರರ ಗುರುತಿನ ಚೀಟಿ ಶಿಬಿರವನ್ನು ಆಯೋಜಿಸಲಾಗಿತ್ತು.
ಜೇವರ್ಗಿ ಪಟ್ಟಣದ ಸಾರ್ವಜನಿಕರ ಅನುಕುಲಕ್ಕಾಗಿ ಹಾಗೂ ಬಡ ಮದ್ಯಮ ವರ್ಗದವರ ಸಲುವಾಗಿ ಪಟ್ಟಣದ ಚಿಕ್ಕಜೇವರ್ಗಿ, ಟಿಪ್ಪು ಸುಲ್ತಾನ ಚೌಕ, ಬಿಲಾಲ ಕಾಲೋನಿ, ಖಾಜಾ ಕಲೋನಿ ಸೆರಿದಂತೆ ಪ್ರತಿ ವಾರ್ಡ್ ನಲ್ಲಿ ಉಚಿತವಾಗಿ ಸೇವೆಯನ್ನು ನೀಡುತ್ತಿದ್ದೆವೆ. ಸಾರ್ವಜನಿಕರು ಈ ಸೌಲಬ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ಆಧರ ಕಾರ್ಡ್ ತಿದ್ದುಪಡೆ ಮಾಡಲಾಗುವುದು, ಮತದಾರರ ಗುರುತಿನ ಚೀಟಿ ಹಳೆಯದಿದ್ದರೆ ಅದನ್ನ ಹೋಸದಾಗಿ ಮಾಡಲಾಗುವುದು. ಬಡವರ ಅನುಕುಲಕ್ಕಾಗಿ ಪ್ರತಿ ವಾರ್ಡನಲ್ಲು ನಮ್ಮವರು ಕಾರ್ಯಪ್ರವೃತ್ತರಾಗಿದ್ದಾರೆ. ಸಾರ್ವಜನಕಿರು ಕಡ್ಡಾಯವಾಗಿ ೧೮ ವಯಸ್ಸಿನ ಪ್ರತಿಯೋಬ್ಬರು ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಬೇಕು ಎಂದು ಹೆಳಿದರು.
ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ ರಹೀಮ್ ಸಾಬ್ ಬಾಕವಿ , ಮುಫ್ತಿ ಮೊಹಮ್ಮದ್ ಖಲೀಲ್ ಅಹಮದ್ , ಮೌಲಾನಾ ಮೊಹಮ್ಮದ್ ಶರ್ಫೋದ್ದೀನ್ ಬಾಕವಿ , ಮುಫ್ತಿ ಅಬ್ದುಲ್ ಗಫೂರ್ ಈಶಆತ್ತಿ , ಮೌಲಾನಾ ಮೊಹಮ್ಮದ್ ವಸಿಂ ಖಾನ್ ಸಾಹಬ್ , ಮುಫ್ತಿ ಅಬ್ದುಲ್ ಮಜೀದ್ ಲಕ್ಪತಿ , ಹಾಫಿಜ್ ಮೊಹಮ್ಮದ್ ಇಸಾಕ್, ಅಲ್ ಹಾಜ್ ದಾವುದ್ ಇನಾಮ್ದಾರ್ , ಮೊಹಮ್ಮದ್ ಇಬ್ರಾಹಿಂ ಪಟೇಲ್ ಸಾಹಬ್ , ದಾವುದ್ ಛೋಟಾ ಡಿ.ಕೆ , ಮೊಹಮ್ಮದ್ ಅಯಾಜ್ ಗುತ್ತೇದಾರ್ , ಮೊಹಮ್ಮದ್ ರಫೀಕ್ ವರವಿ ಮುಂತಾದವರು ಉಪಸ್ಥಿತರಿದ್ದರು.