ಸುದ್ದಿಮೂಲ ವಾರ್ತೆ
ತಿಪಟೂರು, ಸೆ.27: ಸತತ 23 ವರ್ಷಗಳಿಂದ ಸಮಾನ ಸಹಕಾರದ ಮನೋಭಾವ, ಸಮಾನ ಉದ್ದೇಶ ಸಾಮಾನ್ಯ ಜನರು ಆರ್ಥಿಕ ಸಬಲತೆ ಸಾಧಿಸಲು ಸಹಕಾರಿಯಾಗಿ ಎಲ್ಲಾ ವರ್ಗದ ಜನರನ್ನು ಆರ್ಥಿಕ ಸದೃಢಗೊಳಿಸಲು ಶಾಸನಬದ್ಧವಾಗಿ ರಚಿಸಿಕೊಂಡ ಹಣಕಾಸು ಸಂಸ್ಥೆಯೇ ನಮ್ಮ ಸಹಕಾರಿ ಸಂಘ, ಸದಸ್ಯರೆಲ್ಲರ ಉತ್ತಮ ಸಹಕಾರದ ನಿರ್ವಹಣೆಯಿಂದಲೇ ಶ್ರೀ ಉದಯ ರವಿ ಸಹಕಾರಿ ಸಂಘ ಅಭಿವೃದ್ಧಿ ಸಾಧಿಸಿದೆ ಎಂದು ಅಧ್ಯಕ್ಷರಾದ ಕೆ ಎಂ ರಾಜಣ್ಣ ಅಭಿಪ್ರಾಯಪಟ್ಟರು.
ಶ್ರೀ ಉದಯರವಿ ಸೌಹಾರ್ದಪತ್ತಿನ ಸಹಕಾರಿ ಸಂಘದ 23ನೇ ವಾರ್ಷಿಕ ಸಭೆಯು ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದು ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಹಕಾರಿ ಈ ವರ್ಷ 270 ಕೋಟಿ ರೂ ಠೇವಣಿ ಹೊಂದಿದ್ದು 218 ಕೋಟಿ ಸಾಲ ವಿತರಣೆ ಮಾಡಿ ೨೮೬ ಕೋಟಿ ದುಡಿಯುವ ಬಂಡವಾಳ ಶೇಖರಣೆ ಮಾಡಿ ವರ್ಷದ ಅಂತ್ಯಕ್ಕೆ 1204 ಕೋಟಿ ವಹಿವಾಟು ಮಾಡಿದ್ದು ಈ ವರ್ಷದಲ್ಲಿ 2 ಕೋಟಿ 40 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದರು.
ಎರಡು ವರ್ಷಗಳ ಕೋವಿಡ್ ಕಾರಣದಿಂದ ವಸೂಲಾತಿ ಹಿನ್ನಡೆಯಾಗಿದ್ದು ಬಾಕಿ ಸಾಲಗಳ ವಸೂಲಾತಿಗಾಗಿ ಬಿಗಿ ಕ್ರಮ ಕೈಗೊಂಡು ಸದ್ಯದ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಪ್ರಗತಿಪಥದತ್ತ ಸಾಗುತ್ತಿದೆ ಈ ಬಾರಿ ಷೇರುದಾರರಿಗೆ ಶೇ18 ಷೇರು ಡಿವಿಡೆಂಟ್ ನೀಡುತ್ತಿದ್ದೇವೆ. ಕಳೆದ ವರ್ಷದಲ್ಲಿ ತುರುವೇಕೆರೆಯಲ್ಲಿ ಎರಡನೇ ಶಾಖೆ ಪ್ರಾರಂಭಿಸಿದ್ದೇವೆ. ಶ್ರೀ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ನಿವೇಶನ ಖರೀದಿಸಿದ್ದೇವೆ, ಸಹಕಾರಿಯ ಸದಸ್ಯರು ಆಡಳಿತ ಮಂಡಳಿಯ ಪ್ರೋತ್ಸಾಹ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಅಭಿವೃದ್ಧಿಗೆ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.
ಸಹಕಾರಿ ಸದಸ್ಯರಿಗೆ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಯೋಜನೆಯಾದ ಯಶಸ್ವಿನಿ ಕಾರ್ಡ್ ನೋಂದಣಿ ಮಾಡಿಸಿ ವಿತರಿಸಲಾಗಿದೆ. ಇನ್ನೆರಡು ವರ್ಷದಲ್ಲಿ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವ ಆಚರಿಸಲಾಗುವುದು. ಸುಧೀರ್ಘ ಸೇವೆಗೆ ಸದಸ್ಯರು ಮತ್ತು ಕಾರ್ಯಕಾರಿ ಮಂಡಳಿ ಹಾಗೂ ಆಡಳಿತ ಮಂಡಳಿಯ ಅನನ್ಯ ಸೇವೆ ಬಹುಮುಖ್ಯವಾಗಿದೆ. ಆ ವರ್ಷದಲ್ಲಿ ಸದಸ್ಯರಿಗೆ ಉಚಿತ ಉಡುಗೊರೆ ನೀಡಲಾಗುತ್ತದೆ. ಇದೇ ರೀತಿಯ ಸಹಕಾರ ಮುಂದೆಯೂ ಸಹ ಕೋರುತ್ತೇವೆ ಎಂದು ಸಂಸ್ಥಾಪಕ ಗೌರವಾಧ್ಯಕ್ಷ ಎಸ್.ಸೋಮಶೇಖರ್ಹೇಳಿದರು.