ಸುದ್ದಿಮೂಲ ವಾರ್ತೆ
ಮೇ23: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯ 2022 ರ ಫಲಿತಾಂಶವನ್ನು ಪ್ರಕಟಿಸಿದೆ. ಈ ವರ್ಷವು ಕೂಡ ಮಹಿಳೆಯರೇ ಉನ್ನತ ಸ್ಥಾನಗಳನ್ನು ಪಡೆದು, ಪ್ರಾಬಲ್ಯ ಸಾಧಿಸಿದ್ದಾರೆ.
ಪರೀಕ್ಷೆಯ ತಮ್ಮ ಫಲಿತಾಂಶವನ್ನು ಅಧಿಕೃತ upsc.gov.in. ವೆಬ್ ಸೈಟ್ನಲ್ಲಿ ಪರಿಶೀಲಿಸಬಹುದು. ಹೆಚ್ಚು ಅಂಕ ಪಡೆದು ಉರ್ತಿಣರಾದ ಇಶಿತಾ ಕಿಶೋರ್ ಅವರು AIR 1 ನಂತರ ಸ್ಥಾನದಲ್ಲಿ ಗರಿಮಾ ಲೋಹಿಯಾ, ಉಮಾ ಹರತಿ.ಎನ್ ಮತ್ತು ಸ್ಮೃತಿ ಮಿಶ್ರಾ ಪಡೆದುಕೊಂಡಿದ್ದಾರೆ ಮತ್ತೊಮ್ಮೆ ಮಹಿಳಾ ಅಭ್ಯರ್ಥಿಗಳು ಟಾಪರ್ಗಳಗಿದ್ದಾರೆ.
2022ನೇ ಸಾಲಿನ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳಲ್ಲಿ UPSC ಫಲಿತಾಂಶದ ಪ್ರಕಾರ ಭಾರತೀಯ ಆಡಳಿತ ಸೇವೆಯಂತಹ ವಿವಿಧ ಹುದ್ದೆಗಳ ನೇಮಕಾತಿಗಾಗಿ ಈ ವರ್ಷ ಒಟ್ಟು 933 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
UPSC CSE ಪೂರ್ವಭಾವಿ ಪರೀಕ್ಷೆಯನ್ನು 2022ರ ಜೂನ್ 5ರಂದು ನಡೆಸಲಾಗಿತ್ತು ಮತ್ತು ಫಲಿತಾಂಶಗಳನ್ನು ಜೂನ್ 22 ರಂದು ಪ್ರಕಟಿಸಲಾಯಿತು. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16 ರಿಂದ 25 ರ ವರೆಗೆ ನಡೆದಿತ್ತು. ಇದರ ಫಲಿತಾಂಶಗಳನ್ನು ಡಿಸೆಂಬರ್ 6 ರಂದು ಪ್ರಕಟಿಸಲಾಯಿತು 2022ನೇ ಸಾಲಿನ ಸಂದರ್ಶನವನ್ನು 2023ರ ಮೇ 18ರವರೆಗೆ ನಡೆಸಲಾಯಿತು. ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಆಧಾರದ ಮೇಲೆ ಆಯೋಗವು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
UPSC ಮೇ 28 ರಂದು CSE 2023 ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ. ಪರೀಕ್ಷೆಯ ಪ್ರವೇಶ ಕಾರ್ಡ್ಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ಪಡೆಯಬಹುದಾಗಿದೆ.