ಸುದ್ದಿಮೂಲ ವಾರ್ತೆ ಸಿಂಧನೂರು, ೆ.02:
ಸಿಂಧನೂರಿನ ಪ್ರತಿಷ್ಠಿಿತ ಸಂಕೇತ ಶಿಕ್ಷಣ ಸಂಸ್ಥೆೆಯು ಪ್ರಸಕ್ತ ಶೈಕ್ಷಣಿಕ ಸಾಲಿಗೆ 20 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಶಿಕ್ಷಣ ಸಂಸ್ಥೆೆಯಲ್ಲಿ ಅಭ್ಯಾಾಸಿಸಿದ ಎಲ್ಲಾಾ ವಿದ್ಯಾಾರ್ಥಿಗಳ ಹಾಗೂ ಕಾರ್ಯನಿರ್ವಹಿಸಿದ ಎಲ್ಲಾಾ ಉಪನ್ಯಾಾಸಕರ ಒಳಗೊಂಡು ೆ-7 ರಂದು ಅಪೂರ್ವ ಸಂಗಮ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗುತ್ತಿಿದೆ ಎಂದು ಸಂಸ್ಥೆೆಯ ಕಾರ್ಯದರ್ಶಿ ಎಸ್.ಅನಿಲರಾಜ ವಕೀಲರು ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸೋಮವಾರ ಅವರು ಸುದ್ದಿಗೋಷ್ಟಿಿಯಲ್ಲಿ ಮಾತನಾಡಿದರು. 2004-2006 ರಲ್ಲಿ ಮೊದಲ ಬ್ಯಾಾಚ್ ಔಟ್ಪುಟ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಶಿಕ್ಷಣ ಸಂಸ್ಥೆೆಯಲ್ಲಿ ಸುಮಾರು 4-5 ಸಾವಿರ ವಿದ್ಯಾಾರ್ಥಿಗಳು ಅಭ್ಯಾಾಸ ಮಾಡಿದ್ದಾಾರೆ. ಇಲ್ಲಿ ಅಭ್ಯಾಾಸ ಅನೇಕರು ಉನ್ನತ ಹುದ್ದೆೆಯಲ್ಲಿದ್ದಾಾರೆ. ಸಿಎ, ಎಂಎನ್ಸಿ ಕಂಪನಿಗಳಲ್ಲಿ, ಸಿಪಿಐ, ಪಿಎಸ್ಐ, ಕಂದಾಯ, ಪೊಲೀಸ್, ಬ್ಯಾಾಂಕ್, ಶಿಕ್ಷಣ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿಿದ್ದಾಾರೆ. 20 ವರ್ಷಗಳಲ್ಲಿ ಅಭ್ಯಾಾಸ ಮಾಡಿದ ವಿದ್ಯಾಾರ್ಥಿಗಳನ್ನು ಹಾಗೂ ಅಲ್ಲಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ ಉಪನ್ಯಾಾಸಕರನ್ನು ಒಂದೇ ವೇದಿಕೆಗೆ ಕರೆತರುವ ಉದ್ದೇಶದಿಂದ ಹಳೆ ವಿದ್ಯಾಾರ್ಥಿಗಳ ಸ್ನೇಹ ಸಮ್ಮಿಿಲನದ ಭಾಗವಾಗಿ ಅಪೂರ್ವ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಎ್ಕೆಸಿಸಿಐ ನಿರ್ದೇಶಕ, ಬಿಜೆಪಿ ಮುಖಂಡ ತ್ರಿಿವಿಕ್ರಮ ಜೋಷಿ ಕಾರ್ಯಕ್ರಮ ಉದ್ಘಾಾಟಿಸಲಿದ್ದು, ಸಿಂಧನೂರಿನ ಆರ್.ಜಿ.ಎಂ. ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಡಾ.ಚನ್ನನಗೌಡ ಆರ್.ಪಾಟೀಲ್ ಭಾಗವಹಿಸಲಿದ್ದಾಾರೆ. ಲಿಬ್ರಾಾ ತರಬೇತುದಾರ ರಮೇಶ ಉಮ್ರಾಾಣಿ ಮುಖ್ಯಭಾಷಣಕಾರರಾಗಿ ಭಾಗಿಯಾಗಲಿದ್ದಾಾರೆ. ಮಧ್ಯಾಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, 3-6 ಗಂಟೆಯವರೆಗೆ ೊಟೋ ಶೆಷನ್ ಹಾಗೂ ನ್ನಿಿ ಗೇಮ್ಸ್ ನಡೆಯಲಿವೆ. 6-7 ರವರೆಗೆ ವೇದಿಕೆ ಕಾರ್ಯಕ್ರಮ, 7 ರಿಂದ 7.30 ರ ವರೆಗೆ ಹಳೆ ಉಪನ್ಯಾಾಸಕರಿಗೆ ಸನ್ಮಾಾನ ಕಾರ್ಯಕ್ರಮ, 7.30 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಪವನ್ ಭಟ್ ಅವರಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1500 ವಿದ್ಯಾಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಪತ್ರಿಿಕಾ ಗೋಷ್ಟಿಿಯ ಮೂಲಕವೂ ನಮ್ಮ ಸಂಸ್ಥೆೆಯಲ್ಲಿ ಅಭ್ಯಾಾಸ ಮಾಡಿದ ಹಳೆ ವಿದ್ಯಾಾರ್ಥಿಗಳನ್ನು ಆಹ್ವಾಾನ ಮಾಡುತ್ತಿಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಬಸವರಾಜ ಬೊಮ್ಮನಾಳ, ಪದವಿ ಕಾಲೇಜಿನ ಪ್ರಾಾಚಾರ್ಯ ರವಿಕುಮಾರ ಮಲ್ಲದಗುಡ್ಡ, ಉಪನ್ಯಾಾಸಕರಾದ ಎನ್.ದೀಪಕ, ವೆಂಕಟೇಶ ಬಂಡಾರಿ, ಸಂಗಮೇಶ ಪಾಟೀಲ್, ಡಾ.ವಿಶ್ವನಾಥ ಪತ್ತಾಾರ, ಪಂಪನಗೌಡ, ಬೆಟ್ಟಪ್ಪ ಪಾಟೀಲ್ ಇದ್ದರು.
ಸಿಂಧನೂರಿನ ಸಂಕೇತ ಶಿಕ್ಷಣ ಸಂಸ್ಥೆಗೆ 20 ವರ್ಷ ಪೂರ್ಣ 7 ರಂದು ಸಂಕೇತ ಅಪೂರ್ವ ಸಂಗಮ ಕಾರ್ಯಕ್ರಮ- ಎಸ್.ಅನಿಲರಾಜ್

