24*7 ಕಾರ್ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ: ರಾಜೇಶ್ವರಿ
ಎಫ್ ಎಸ್ ಟಿ ಟೀಮ್ ಐದು ಮಾಡಲಾಗಿದೆ.
ಜೇವರ್ಗಿ : ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಕುರಿತು ತಾಲೂಕ ದಂಡಾಧಿಕಾರಿಗಳ ಕಚೇರಿಯಲ್ಲಿ ಸಭೆ ಜರಗಿತು.
ದಂಡಾಧಿಕಾರಿ ಶ್ರೀಮತಿ ರಾಜೇಶ್ವರಿ ಮಾತನಾಡಿದರು ಭಾರತ ಚುನಾವಣಾ ಆಯೋಗವು ದಿನಾಂಕ 29.03.2023 ರಂದು 2023ರ ಚುನಾವಣೆ ಪಟ್ಟಿಯುತ್ತ ಅಧಿಸೂಚನೆ ಹೊರಡಿಸಿದ್ದು ಈ ಅಧಿಸೂಚನೆ ಪಟ್ಟಿ ಈ ಕೆಳಗಿನಂತಿರುತ್ತದೆ.
ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏಪ್ರಿಲ್ 21ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10ಕ್ಕೆ ರಾಜ್ಯದಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ ಎಂದರು.
35 ಜೇವರ್ಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2350038 ಮತದಾರರ ಇದ್ದು ಇದರಲ್ಲಿ ಗಂಡು119248 ಹೆಣ್ಣು115762 ಇತರೆ 28 ಮತದಾರರಿದ್ದು ಒಟ್ಟು 279 ಮತದಾನ ಕೇಂದ್ರಗಳು ಇರುತ್ತವೆ. ಜೇವರ್ಗಿ ಪಟ್ಟಣದಲ್ಲಿ 24 ಮತದಾನದ ಕೇಂದ್ರಗಳು 255 ಗ್ರಾಮೀಣ ಕೇಂದ್ರಗಳಿರುತ್ತವೆ. ಎಫ್ ಎಸ್ ಟಿ ಟೀಮ್ ಐದು ಮಾಡಲಾಗಿದ್ದು. ಜೇವರ್ಗಿ, ಯಡ್ರಾಮಿ, ಆಂದೋಲ, ನೇಲೋಗಿ, ಇಜೇರಿ, ಈ ರೀತಿಯಾಗಿ ನಮ್ಮ ಸಿಬ್ಬಂದಿ ವರ್ಗ ಚುನಾವಣೆ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಪ್ರಯುಕ್ತ ತಾಲೂಕಿನಲ್ಲಿ ನಾಲ್ಕು ಚೆಕ್ ಪೋಸ್ಟ್ಗಳು ನಿರಂತರವಾಗಿ ಕೆಲಸ ಮಾಡುತ್ತದೆ. ಜೇರಟಗಿ, ಚಿಗರಳ್ಳಿ, ನಾಗರಹಳ್ಳಿ, ನಾಗ ಅಲ್ಲಾಪುರ್ ಚೆಕ್ ಪೋಸ್ಟ್ಗಳು 24*7 ಕೆಲಸ ನಿರ್ವಹಿಸುತ್ತವೆ ಎಂದು ಹೇಳಿದರು.