ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.03:
ಬಳ್ಳಾಾರಿಯ ಬ್ಯಾಾನರ್ ಗಲಾಟೆಯಲ್ಲಿ ಗುಂಡು ತಗುಲಿ ಮೃತಪಟ್ಟ ಕಾಂಗ್ರೆೆಸ್ ಕಾರ್ಯಕರ್ತ ರಾಜಶೇಖರ (26) ಅವರ ಮನೆಗೆ ಜಿಲ್ಲಾಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶನಿವಾರ ಭೇಟಿ ನೀಡಿ, ಸಾಂತ್ವನ ಹೇಳಿ ವೈಯಕ್ತಿಿಕವಾಗಿ 25 ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಿದ್ದಾಾರೆ.
ಸಂತ್ರಸ್ತ ತಾಯಿಯ ಕೈಗೆ 25 ಲಕ್ಷ ರೂಪಾಯಿ ನಗದು ಹಣವನ್ನು ಕೊಟ್ಟು, ನಾನು, ನಮ್ಮ ಸರ್ಕಾರ, ಶಾಸಕ ನಾರಾ ಭರತರೆಡ್ಡಿಿ ಮತ್ತು ಕಾಂಗ್ರೆೆಸ್ ಪಕ್ಷ ನಿಮ್ಮೊೊಂದಿಗೆ. ಯಾವುದೇ ಆತಂಕ ಪಡಬೇಡಿ. ನಿಮಗೆ ಮನೆ ಕಟ್ಟಿಿಸಿಕೊಡುವ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರು, ಬ್ಯಾಾನರ್ ಘಟನೆಯಲ್ಲಿ ರಾಜಶೇಖರ ನಿಧನ ಹೊಂದಿರುವುದು ದುಃಖದ ವಿಷಯ. ಮೃತನು ಮನೆಗೆ ದೊಡ್ಡ ಮಗ. ಹೋಟಲ್ ವ್ಯವಹಾರ ಮಾಡಿಕೊಂಡಿದ್ದವರು. ನಾವೆಲ್ಲರೂ ಆ ಕುಟುಂಬದ ಜೊತೆಗಿದ್ದೇವೆ. ಸ್ಲಂ ಬೋರ್ಡ್ನಿಂದ ಮನೆ ಕಟ್ಟಿಿಸಿಕೊಡಲಾಗುತ್ತದೆ. ಅಲ್ಲದೇ, ಪಕ್ಷವೂ ಮೃತನ ಕುಟುಂಬಕ್ಕೆೆ ಪರಿಹಾರ ನೀಡಲಿದೆ ಎಂದರು.
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಬಹಳ ದಿನಗಳ ಕನಸು. ಕನಸು ನನಸಾಗೋ ಸಂದರ್ಭ ಬಂದಿತ್ತು. ಜಿ. ಜನಾರ್ಧನರೆಡ್ಡಿಿ ಅವರು ಬ್ಯಾಾನರ್ ಕಟ್ಟಲು ಬಿಟ್ಟಿಿದ್ದರೆ ಏನೂ ಆಗುತ್ತಿಿರಲಿಲ್ಲ. ಒಳ್ಳೆೆಯ ಕಾರ್ಯಕ್ರಮ ಮುಂದೂಡಲ್ಪಟ್ಟಿಿತು. ಕಳಂಕ ಪಡೆಯಿತು. ಜಿ. ಜನಾರ್ಧನರೆಡ್ಡಿಿ ಸಣ್ಣತನ ತೋರಿಸಿದ್ದಾಾರೆ. ಮಾಜಿ ಮಂತ್ರಿಿಗಳ ಚಿಲ್ಲರೆತನ ತೋರಿಸಿದ್ದಾಾರೆ. ಜಿ. ಜನಾರ್ಧನರೆಡ್ಡಿಿ ಶಾಸಕ ನಾರಾ ಭರತರೆಡ್ಡಿಿಗೆ ೆನ್ ಮಾಡಿ, ಬ್ಯಾಾನರ್ ತೆಗಿ ಎಂದಿದ್ದರೆ ಆಗಿ ಹೋಗುತ್ತಿಿತ್ತು ಎಂದರು.
ಶಾಸಕರಾದ ನಾರಾ ಭರತರೆಡ್ಡಿಿ, ಜೆ.ಎನ್. ಗಣೇಶ್ ಇನ್ನಿಿತರರು ಈ ಸಂದರ್ಭದಲ್ಲಿದ್ದರು.

