ಸುದ್ದಿಮೂಲ ವಾರ್ತೆ ಸಿರವಾರ, ಅ.03:
ಈ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಿಗೆ, ಭಕ್ತರ ಅನುಕೂಲಕ್ಕೆೆ ಪ್ರಸಾದ ನಿಲಯ ನಿರ್ಮಾಣಕ್ಕೆೆ 25ಲಕ್ಷ ರೂಪಾಯಿ ನೀಡಲಾಗುವುದು ಎಂದು ವಿಜ್ಞಾನ ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದರು.
ಅವರು ಶುಕ್ರವಾರ ತಾಲೂಕಿನ ಹೀರಾ ಗ್ರಾಾಮದ ಆರಾಧ್ಯದೈವ ಶ್ರೀ ಸಿದ್ದರಾಮೇಶ್ವರ ಮಠದಲ್ಲಿ ನವರಾತ್ರಿಿ ಹಬ್ಬದ ಅಂಗವಾಗಿ ಶ್ರೀರಾಜಾ ರಾಜೇಶ್ವರಿ ದೇವಿಗೆ ಪುಷ್ಪಾಾರ್ಚನೆ ಮಾಡಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಮಾತನಾಡಿ ಶ್ರೀಮಠದ ಅಭಿವೃದ್ಧಿಿಗೆ ಸಹಕಾರದ ಮೂಲಕ, ಕಲ್ಯಾಾಣ ಮಂಟಪ, ಕಲ್ಯಾಾಣಿ, ರಸ್ತೆೆಯ ಅಭಿವೃದ್ಧಿಿ ಮಾಡಲಾಗಿದೆ, ಈ ಭಾಗದ ರೈತರಿಗೆ ನೀರಾವರಿ ವಂಚಿತ, ಕೊಳವೆ ಬಾವಿಯಿಂದ ಬೆಳೆಗಳನ್ನು ಬೆಳೆಯಲು, 110ಕೆವಿ ಜೆಸ್ಕಾಾಂ ಶಾಖಾ ಮಂಜೂರಾತಿ, ವಿದ್ಯುತ್ ಸಮಸ್ಯೆೆ ನೀಗಿಸಲು ಪ್ರಯತ್ನ ಮಾಡಲಾಗಿದೆ, ಇನ್ನೂ ಎರಡು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ದೂರೆಯಲಿದೆ, ಸತತ ಮಳೆಯಿಂದ ತಾಲ್ಲೂಕಿನಲ್ಲಿ ಅತಿವೃಷ್ಟಿಿಯಿಂದ ಹಾನಿಯಾದ ಬೆಳೆಗಳು ಹಾಗೂ ಮನೆಗಳು ಬಿದ್ದಿವೆ ಈ ಬಗ್ಗೆೆ ಸರ್ವೇ ಮಾಡಿ ಮಾಹಿತಿ ನೀಡಿ ಎಂದು ತಹಶಿಲ್ದಾಾರರಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಹಂಪಯ್ಯನಾಯಕ, ಮಠದ ಅಧ್ಯಕ್ಷ ಅಯ್ಯಪ್ಪ ತಾತ, ಚುಕ್ಕಿಿ ಸೂಗಪ್ಪ ಸಾಹುಕಾರ್, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಶಿವಮೂರ್ತಿ, ಶರಣಪ್ಪ ನಾಯಕ ಕೆ.ಗುಡದಿನ್ನಿಿ, ಕಿರಿಲಿಂಗಪ್ಪ, ಮಾಳಪ್ಪ, ಹನುಮಂತರಾಯಗೌಡ, ಅಯ್ಯಪ್ಪ ದೂರೆ, ಸಂಗಯ್ಯಸ್ವಾಾಮಿ, ಮಲ್ಲಿಕಾರ್ಜುನ, ವಿಕ್ರಮ ಪಾಟೀಲ, ನಾಗರಾಜಗೌಡ, ಧನಂಜಯ್ಯ ಸೇರಿದಂತೆ ಅನೇಕರು ವಿವಿಧ ಗ್ರಾಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಮೆರವಣಿಗೆ: ಜಂಬೂ ಸವಾರಿ ಮೆರವಣಿಗೆ ನೂರಾರು ಡೊಳ್ಳು ತಂಡ, ವಿವಿಧ ವಾದ್ಯಗಳ ಮೂಲಕ ಗ್ರಾಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ನವಲಕಲ್ ಬೃಹನ್ಮಠಕ್ಕೆೆ ಭೇಟಿ : ನವರಾತ್ರಿಿ ದಸರಾ ಹಬ್ಬದ ನಿಮಿತ್ಯ ನವಲಕಲ್ ಬೃಹನ್ಮಠಕ್ಕೆೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್ಎಸ್ ಬೋಸರಾಜು ಅವರು ಹಾಗೂ ಮಾನ್ವಿಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ್ ಅವರು ಶ್ರೀ ಶಾಂಭವಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಶೀರ್ವಾದ ಪಡೆದು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸೋಮನಾಥ ಶಿವಾಚಾರ್ಯ ಮಹಾ ಸ್ವಾಾಮಿಗಳಿಗೆ ಸನ್ಮಾಾನಿಸಿ ಆಶೀರ್ವಾದ ಪಡೆದರು.
ಮಠದ ಶ್ರೀಗಳು ಕಾಂಗ್ರೆೆಸ್ ಸಚಿವರಾದ ಎನ್ ಎಸ್ ಬೋಸರಾಜು ಅವರಿಗೆ, ಶಾಸಕ ಹಂಪಯ್ಯ ನಾಯಕ ಅವರಿಗೆ ಸನ್ಮಾಾನಿಸಿ ಆಶೀರ್ವದಿಸಿದರು. ನಂತರ ಶ್ರೀಗಳಿಂದ ಬನ್ನಿಿ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆೆಸ್ ನ ಹಿರಿಯರಾದ ಚುಕ್ಕಿಿ ಸೂಗಪ್ಪ, ಶರಣಯ್ಯ ನಾಯಕ್, ಕೆ ಶಾಂತಪ್ಪ, ಯುವ ಮುಖಂಡರಾದ ಬ್ರಿಿಜ್ಜೇಶ ಪಾಟೀಲ್, ಜಿ ಶಿವಮೂರ್ತಿ ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಭೂಪನಗೌಡ ಪಾಟೀಲ್, ಚುಕ್ಕಿಿ ಶಿವಕುಮಾರ್ ಸಾಹುಕಾರ್, ನಾಗಪ್ಪ ನವಲಕಲ್, ದೇವೆಂದ್ರಪ್ಪ, ಚಂದ್ರು ಕಳಸ, ಮಲ್ಲಪ್ಪ, ಮಲ್ಲಿಕಾರ್ಜುನ್ ಮಲ್ಲಟ, ಶರಣಪ್ಪ ಕವಿತಾಳ, ತಿಪ್ಪಯ್ಯ ಸ್ವಾಾಮಿ ಕವಿತಾಳ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಹೀರಾ ಸಿದ್ದರಾಮೇಶ್ವರ ಮಠ ಜಂಬೂ ಸವಾರಿಗೆ ಪೂಜೆ ಪ್ರಸಾದ ನಿಲಯಕ್ಕೆೆ 25ಲಕ್ಷ ರೂ- ಸಚಿವ ಭೋಸರಾಜು ಘೋಷಣೆ
