ಸುದ್ದಿಮೂಲ ವಾರ್ತೆ ಸಿಂಧನೂರು, ಅ.04:
ಅತಿವೃಷ್ಠಿಿಯಿಂದಾಗಿ ತಾಲೂಕಿನ ಎಲ್ಲಾಾ ಬೆಳೆಗಳು ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆೆ ಗುರಿಯಾಗಿದ್ದಾಾರೆ. ಎಲ್ಲಾಾ ನಿಯಮಗಳನ್ನು ಸಡಿಲಿಸಿ ಎಲ್ಲಾಾ ಬೆಳೆಗಳಿಗೂ ಎಕರೆಗೆ 25 ಸಾವಿರ ರೂ.ಗಳ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ, ಕೆಓಎ್ ಅಧ್ಯಕ್ಷ ವೆಂಕಟರಾವ ನಾಡಗೌಡ ಸರಕಾರಕ್ಕೆೆ ಒತ್ತಾಾಯಿಸಿದರು.
ಶನಿವಾರ ತಾಲ್ಲೂಕಿನ ದಿದ್ದಗಿ, ರಾಮತ್ನಾಾಳ, ಬನ್ನಿಿಗನೂರು, ರಾಗಲಪರ್ವಿ, ಗೋನವಾರ ಸೇರಿದಂತೆ ವಿವಿಧ ಗ್ರಾಾಮಗಳಲ್ಲಿ ಮಳೆಯಿಂದ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಸರ್ಕಾರ ಹತ್ತಿಿ, ತೊಗರಿ ಮಾತ್ರ ಬೆಳೆನಷ್ಟ ಪರಿಹಾರ ನೀಡುವುದಾಗಿ ಹೇಳುತ್ತಿಿರುವುದು ಸರಿಯಲ್ಲ. ಮಳೆಯಿಂದ ಹತ್ತಿಿ, ತೊಗರಿ, ಜೋಳ ಮತ್ತು ಭತ್ತ ನಷ್ಟವಾಗಿದ್ದು, ಎಲ್ಲಾಾ ಬೆಳೆಗಳಿಗೆ ಪರಿಹಾರ ನೀಡಿ, ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಾಯಿಸಿದರು.
ವೈರಸ್ ಬಂದು ಹಿನ್ನಲೆಯಲ್ಲಿ ಶೇ.70-80 ರಷ್ಟು ಭತ್ತ ಹಾನಿಯಾಗಿದೆ. ಸಾವಿರಾರು ಖರ್ಚು ಮಾಡಿ ರೈತ ಕಂಗಾಲಾಗಿದ್ದಾಾನೆ. ಇನ್ನೂ ಎರಡೆರೆಡು ಬಾರಿ ಜೋಳ ಬಿತ್ತನೆ ಮಾಡಿದ್ದು, ಮಳೆಯಿಂದ ನಾಟಿಯಾಗದೇ ಸಂಪೂರ್ಣ ನೆಲಕ್ಕಚ್ಚಿಿ ಹೋಗಿದೆ. ರೈತರ ಯಾವ ಬೆಳೆಯೂ ಸಂಪೂರ್ಣ ಕೈ ಸೇರುವ ಪರಿಸ್ಥಿಿತಿ ಇಲ್ಲ. ಸರ್ಕಾರ ಕೇವಲ ಕೇಂದ್ರ ಸರ್ಕಾರ ನೀಡುವ ಪರಿಹಾರ ಕೊಟ್ಟು ಕೈಕಟ್ಟಿಿ ಕುಳಿತುಕೊಳ್ಳದೇ ರಾಜ್ಯ ಸರ್ಕಾರದಿಂದಲೂ ವಿಶೇಷ ಪ್ಯಾಾಕೇಜ್ ಘೋಷಿಸಿ ಎಲ್ಲಾಾ ಬೆಳೆಗಳಿಗೆ ಪರಿಹಾರ ಒದಗಿಸಬೇಕು ಎಂದು ನಾಡಗೌಡ ಆಗ್ರಹಿಸಿದರು.
ಸರ್ವೇ ಮಾಡಿ:
ಬೆಳೆಹಾನಿಯಾದ ಬಗ್ಗೆೆ ಸಿಂಧನೂರು ತಾಲೂಕಿನಲ್ಲಿ ಅಧಿಕಾರಿಗಳು ಇನ್ನೂ ಸರ್ವೆ ಆರಂಭಿಸಿಲ್ಲ. ಎರಡು ದಿನದಲ್ಲಿ ಸರ್ವೆ ಆರಂಭಿಸಬೇಕು. ಇಲ್ಲವಾದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದಾಗಿ ನಾಡಗೌಡ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ನಾಚಿಕೆಯಾಗಬೇಕು:
ಸಿಂಧನೂರು ನಗರದಲ್ಲಿ ಮಳೆಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಯುವಕನೋರ್ವ ಸಾವನ್ನಪ್ಪಿಿದ್ದಾಾನೆ. ಸಚಿವರಾಗಲಿ, ಶಾಸಕರಾಗಲಿ, ತಾಲೂಕಾ ಅಧಿಕಾರಿಗಳಾಗಲಿ ಅವರ ಮನೆಗೆ ಹೋಗಿಲ್ಲ ಎಂದರೆ ಅವರಿಗೆ ನಾಚಿಕೆಯಾಗಬೇಕು. ಕನಿಷ್ಟ ಸಾಂತ್ವನ ಹೇಳಿಲ್ಲ. ಪರಿಹಾರ ಕೊಡಿಸುವ ಭರವಸೆ ನೀಡಿಲ್ಲ. ತೋರಿಕೆಗಾಗಿ ಸಚಿವರು ಬೆಳೆ ಹಾನಿ ವೀಕ್ಷಣೆ ಮಾಡಿದ್ದಾಾರೆ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಧರ್ಮನಗೌಡ ಮಲ್ಕಾಾಪುರ, ಅಶೋಕಗೌಡ ಗದ್ರಟಗಿ, ಅಲ್ಲಮಪ್ರಭು ಪೂಜಾರ, ಲಿಂಗರಾಜ್ ಪಾಟೀಲ್ ರಾಗಲಪರ್ವಿ, ಕೆ.ಜಿಲಾನಿಪಾಷಾ, ವೆಂಕೋಬ ಕಲ್ಲೂರು, ವೆಂಕಟೇಶ ನಂಜಲದಿನ್ನಿಿ, ಸುಮಿತ್ ತಡಕಲ್, ರವಿ ಪನ್ನೂರು, ಎಸ್.ಪಿ.ಟೇಲರ್, ತಿಮ್ಮಣ್ಣ ನಾಯಕ ಸೇರಿದಂತೆ ಜೆಡಿಎಸ್ ಮುಖಂಡರು, ರೈತರು ಇದ್ದರು.
ಮಾಜಿ ಸಚಿವರಿಂದ ಬೆಳೆಹಾನಿ ವೀಕ್ಷಣೆ ಎಕರೆಗೆ 25ಸಾವಿರ ಪರಿಹಾರ ಕೊಡಿ: ನಾಡಗೌಡ ಒತ್ತಾಾಯ
