ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.10:
ರಾಜ್ಯಕ್ಕೆೆ 15 ನೇ ಹಣಕಾಸು ಆಯೋಗದಲ್ಲಿಯೂ ಸುಮಾರು 2,500 ಕೋಟಿ ರೂ. ಅನುದಾನ ಬರಬೇಕಿದೆ ಎಂದು ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಿಯಾಂಕ್ ಖರ್ಗೆ ಹೇಳಿದರು.
ನರೇಗಾದಡಿ ಸಾಮಗ್ರಿಿ ವೆಚ್ಚಕ್ಕೆೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ, ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆೆ ಈಗಾಗಲೇ ಪತ್ರ ಸಲ್ಲಿಸಲಾಗಿದೆ ಎಂದೂ ಅವರು ತಿಳಿಸಿದರು.
ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋೋತ್ತರ ಕಲಾಪದಲ್ಲಿ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಅವರು, ನರೇಗಾ ಯೋಜನೆಯಡಿ ಕ್ರಿಿಯಾ ಯೋಜನೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದು, ಈ ಕುರಿತಂತೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಸಚಿವ ಪ್ರಿಿಯಾಂಕ್ ಖರ್ಗೆ ಉತ್ತರಿಸಿ, ನರೇಗಾ ಯೋಜನೆಯಡಿ ಅನುಮತಿಸಿದ ಕಾಮಗಾರಿಗಳಲ್ಲಿ ಸಮುದಾಯ ಆಧಾರಿತ ಉದ್ದೇಶಕ್ಕಾಾಗಿ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ರೀತಿಯ ಕಾಮಗಾರಿಗಳನ್ನು ನಿಯಮಾನುಸಾರ ಗ್ರಾಾಮ ಪಂಚಾಯತಿಯ ಕ್ರಿಿಯಾ ಯೋಜನೆಯಲ್ಲಿ ಅಳವಡಿಸಿಕೊಂಡು ಅನುಷ್ಠಾಾನಗೊಳಿಸಬಹುದಾಗಿದೆ. ಒಂದು ವೇಳೆ ಸ್ಥಳೀಯ ಅಧಿಕಾರಿಗಳು ಆ ರೀತಿ ತಪ್ಪುು ಮಾಹಿತಿ ನೀಡಿದ್ದರೆ, ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ನರೇಗಾದಡಿ ಸಾಮಗ್ರಿಿ ವೆಚ್ಚಕ್ಕೆೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅನುಮತಿ ಇನ್ನೂ ಬಂದಿಲ್ಲ . ಈ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆೆ ತರಲಾಗುವುದು. ಅನುದಾನ ಬಳಿಕ ಗ್ರಾಾಮ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಹೇಳಿದರು.
15 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 2500 ಕೋಟಿ ಬಾಕಿ : ಸಚಿವ ಪ್ರಿಯಾಂಕ್

