ಸುದ್ದಿಮೂಲ ವಾರ್ತೆ ಸಿಂಧನೂರು, ೆ.08:
ಸಹಕಾರಿ ಸಂಘಗಳು ಹಣಕಾಸಿನ ವ್ಯವಹಾರದ ಜೊತೆಗೆ ಸಾಮಾಜಿಕ ಸೇವೆಗಳನ್ನು ಮಾಡಬೇಕಿದೆ. ಸಪ್ತಗಿರಿ ಸೌಹಾರ್ದ ಸಹಕಾರಿಯು ಕೇವಲ 20 ರೂ.ಗಳಿಗೆ ವೈದ್ಯಕೀಯ ತಪಾಸಣಾ ಸೇವೆಗೆ ಮುಂದಾಗಿರುವದು ಶ್ಲಾಾಘನೀಯವಾಗಿದೆ ಎಂದು ವಿಕಾಸ ಕೋ-ಅಪರೇಟಿವ್ ಬ್ಯಾಾಂಕಿನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.
ನಗರದ ಬಸವ ವೃತ್ತದಲ್ಲಿ ರವಿವಾರ ಸಪ್ತಗಿರಿ ಸೌಹಾರ್ದ ಸಹಕಾರಿ ಸಂಘವು ಭಾರತಿ ಮೆಡಿಕಲ್ ಹಾಗೂ ಜನರಲ್ ಸ್ಟೋೋರ್ಸ್ ಸಹಕಾರದೊಂದಿಗೆ 20 ರೂ.ಗಳಿಗೆ ವೈದ್ಯಕೀಯ ತಪಾಸಣೆ ಮಾಡುವ ಸಪ್ತಗಿರಿ ಕ್ಲಿಿನಿಕ್ ಉದ್ಘಾಾಟಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ಕೇವಲ ಸಾಲ ನೀಡುವದು, ವಸೂಲಾತಿ ಮಾಡುವದು ಕೆಲಸವಲ್ಲ. ಸದಸ್ಯರಿಗೆ ಅನುಕೂಲ ಕಲ್ಪಿಿಸುವ ನಿಟ್ಟಿಿನಲ್ಲಿ ವಿಭಿನ್ನವಾದ ಆಲೋಚನೆಗಳೊಂದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಸೇವೆ ಒದಗಿಸಬೇಕು. ಆ ನಿಟ್ಟಿಿನಲ್ಲಿ ಸಪ್ತಗಿರಿ ಸಹಕಾರಿಯು ಮಹತ್ವದ ಹೆಜ್ಜೆೆಯಿಟ್ಟಿಿದೆ. ಆರೋಗ್ಯ ತಪಾಸಣೆ ದುಬಾರಿಯಾಗುತ್ತಿಿರುವ ಕಾಲಘಟ್ಟದಲ್ಲಿ ಬಡವರಿಗೆ, ಸದಸ್ಯರಿಗೆ ಅನುಕೂಲ ಕಲ್ಪಿಿಸಲು ಕೇವಲ 20 ರೂ.ಗಳಿಗೆ ವೈದ್ಯಕೀಯ ಸೇವೆ ನೀಡುತ್ತಿಿರುವದು ಅತ್ಯುತ್ತಮ ಕಾರ್ಯವಾಗಿದೆ ಎಂದರು.
ಸಹಕಾರಿಯ ಅಧ್ಯಕ್ಷ ವೈ.ನಾಗರಾಜ ಶ್ರೇೇಷ್ಠಿಿ ಮಾತನಾಡಿ, ನಮ್ಮ ಸಹಕಾರಿಯು ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಪರಿಶ್ರಮದಿಂದ 25 ವರ್ಷಕ್ಕೆೆ ಕಾಲಿಟ್ಟಿಿದ್ದು, ಇದರ ಭಾಗವಾಗಿ ಸಪ್ತಗಿರಿ ಕ್ಲಿಿನಿಕ್ ಅರಂಭಿಸುತ್ತಿಿದ್ದೇವೆ. ಎಂಬಿಬಿಎಸ್ ವೈದ್ಯರಾದ ಡಾ.ಪಾಂಡುರಂಗ ಶೆಟ್ಟಿಿ ಅವರು ವೈದ್ಯಕೀಯ ತಪಾಸಣೆಯನ್ನು ನಿತ್ಯವೂ ಬೆಳಗ್ಗೆೆ 10 ಗಂಟೆಯಿಂದ ಮಧ್ಯಾಾಹ್ನ 2 ಗಂಟೆಯವರೆಗೆ ಲಭ್ಯವಿದ್ದು, ಸೇವೆ ನೀಡುವರು. ಇದರ ಲಾಭ ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಡಾ.ಇ.ಪಾಂಡುರಂಗ ಶೆಟ್ಟಿಿ, ಸಹಕಾರಿಯ ಸಂಸ್ಥಾಾಪಕ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಉಪಾಧ್ಯಕ್ಷ ಯಲ್ಲಪ್ಪ ಜಂತ್ಲಿಿ, ಸಿಇಓ ಆನಂದ ಕೆ ಸೇರಿದಂತೆ ನಿರ್ದೇಶಕರು ಹಾಗೂ ಇತರರು ಭಾಗವಹಿಸಿದ್ದರು.
ಸಪ್ತಗಿರಿ ಸಹಕಾರಿ ಸಂಘದ 25 ನೇ ವರ್ಷದ ವಾರ್ಷಿಕೋತ್ಸವ 20 ರೂ.ಗೆ ವೈದ್ಯಕೀಯ ಸೇವೆ ಶ್ಲಾಘನೀಯ – ಹಿರೇಮಠ

