ಸುದ್ದಿಮೂಲ ವಾರ್ತೆ ಸಿರವಾರ, ನ.13:
ತಾಲೂಕಿನ ಗಣದಿನ್ನಿಿ ಗ್ರಾಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಾಸ ನಿರ್ಣಯ ಎರಡನೇ ಬಾರಿ ವಿಲವಾದ ಘಟನೆ ಬುಧವಾರ ಜರುಗಿದೆ.
ಅಧ್ಯಕ್ಷರ ಸ್ಥಾಾನ ಸಾಮಾನ್ಯ ವರ್ಗಕ್ಕೆೆ ಮೀಸಲಾಗಿದೆ. ಹಾಲಿ ಅಧ್ಯಕ್ಷ ಸೂಗೂರಯ್ಯ ಹಿರೇಮಠ ಅವರ ವಿರುದ್ಧದ ಅವಿಶ್ವಾಾಸ ಗೊತ್ತುವಳಿ ನಿರ್ಣಯ ಮಾಡಲು ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಲೆ ಆಗಮಿಸಿದ್ದರು.
ಎರಡೂವರೆ ವರ್ಷದಲ್ಲಿ ಎರಡು ಬಾರಿ ಅಧ್ಯಕ್ಷರ ವಿರುದ್ಧ ಅವಿಶ್ವಾಾಸ ನಿರ್ಣಯ ಮಾಡಿಸಿದ್ದು ತಾಲ್ಲೂಕಿನ ಪ್ರಥಮ ಗ್ರಾಾಮ ಪಂಚಾಯತಿ ಎಂಬ ಹೆಗ್ಗಳಿಕೆ, ಈ ಗ್ರಾಾಮ ಪಂಚಾಯತಿಯಲ್ಲಿ ಕೇವಲ 15ಜನ ಸದಸ್ಯರು ಇದ್ದು, ಉಪಾಧ್ಯಕ್ಷರ ಸ್ಥಾಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದೆ.
ಹಾಲಿ ಅಧ್ಯಕ್ಷರು ಎರಡು ಎರಡು ಬಾರಿ ಕೋರ್ಟ್ ನಿಂದ ಅವಿಶ್ವಾಾಸಕ್ಕೆೆ ತಡೆ ತಂದಿದ್ದರು, ಅಧ್ಯಕ್ಷರ ವಿರುದ್ಧ ಅವಿಶ್ವಾಾಸಕ್ಕೆೆ ಸಹಿ ಮಾಡಿದ ಸದಸ್ಯರು ಒಬ್ಬರು ಹಾಜರು ಆಗಲ್ಲ ಇದರಿಂದ ಸಹಾಯ ಆಯುಕ್ತರು ಗರಂ ಆಗಿದ್ದು, ಸಮಯ ವ್ಯರ್ಥಮಾಡಿದ್ದಾರೆ ಎಂದು ಸದಸ್ಯರ ನಡೆಗೆ ಬೇಸರ ವ್ಯಕ್ತಪಡಿಸಿದರು. ಅವಿಶ್ವಾಾಸ ನಿರ್ಣಯಕ್ಕೆೆ ಕೋರಿಕೆ ಸಲ್ಲಿಸಿ ಗ್ರಾಾ.ಪಂ.ಗೆ ಹಾಜರು ಆಗದ ಸದಸ್ಯರ ಮೇಲೆ ಸೂಕ್ತ ಕ್ರಮಕ್ಕೆೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಓ ರಮೇಶ ನಾಯಕ, ಎಎಸ್ ಐ ಬಸನಗೌಡ ಪಾಟೀಲ ಗ್ರಾಾ.ಪಂ.ಸಿಬ್ಬಂದಿ ಇದ್ದರು.

