ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.20:
ಹಲವಾಗಲು ಗ್ರಾಾಮಕ್ಕೆೆ ಸೇರಿದ ಮಾವಿನ ಗುಣಿ ಹತ್ತಿಿರವಿರುವ 30 ಕುಟುಂಬಗಳು ಕನಿಷ್ಠ 30 ವರ್ಷಗಳಿಂದ ವಾಸವಾಗಿದ್ದರೂ ಇವರಿಗೆ 30 ವರ್ಷಗಳಿಂದ ಭೂತ ಸೌಲಭ್ಯಗಳನ್ನು ನೀಡದೇ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಭಾರತ ಕಮ್ಯುನಿಷ್ಟ್ ಪಕ್ಷ (ಸಿಪಿಐ)ದ ತಾಲೂಕು ಮಂಡಳಿಯವರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಮೂಲಭೂತ ಸೌಲಭ್ಯಗಳಾದ ವಿದ್ಯುತ್ ಸೌಕರ್ಯ, ಕುಡಿಯುವ ನೀರು, ಸಾರಿಗೆ ಬಸ್ ಕೋರಿಕೆ ನಿಲುಗಡೆ ಒದಗಿಸುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ವೈ.ಎಚ್. ಅವರಿಗೆ ಮವಿ ಸಲ್ಲಿಸಿದರು.
ತಾಲೂಕು ಕಾರ್ಯದರ್ಶಿ ಹೆಚ್.ಎಂ.ಸಂತೋಷ್ ಮಾತನಾಡಿ, ಕಳೆದ 30 ವರ್ಷಗಳಿಂದ ಜೀವನ ನಡೆಸುತ್ತಿಿದ್ದರೂ ಈ ಕುಟುಂಬಗಳ ಮನೆಗಳು ಪಂಚಾಯ್ತಿಿ ಡಿಮ್ಯಾಾಂಡ್ ಪುಸ್ತಕದಲ್ಲಿ ನೋಂದಣಿ ಮಾಡಿಸಿಕೊಂಡು ಮನೆ ತೆರಿಗೆಯನ್ನು ಸಹ ಪಂಚಾಯ್ತಿಿಗೆ ಪಾವತಿಸುತ್ತಾಾ ಬಂದಿದ್ದಾಾರೆ. ಮನೆಗಳು ನಿರ್ಮಾಣ ಮಾಡಿಕೊಂಡು ಇಷ್ಟು ವರ್ಷವಳಾದರು ಇವರಿಗೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾಾರೆ ಎಂದು ದೂರಿದರು.
ತಾಲೂಕು ಕಾರ್ಯದರ್ಶಿ ಬಳಿಗನೂರು ಕೊಟ್ರೇಶ್ ಮಾತನಾಡಿ, ಇಲ್ಲಿಯ ಬಡ ಜನರ ಸಮಸ್ಯೆೆಗಳು ತಮ್ಮ ಕಣ್ಣುಮುಂದೆ ಕಂಡರು ತಮ್ಮ ಮೌನದ ಹಿಂದಿರುವ ಉದ್ದೇಶವೇನು? ಎಂಬುದೆ ನಮ್ಮ ಪ್ರಶ್ನೆೆಯಾಗಿದೆ. ನಾವು ಸ್ವಾಾತಂತ್ರ ಪಡೆದು 7 ದಶಕಗಳೆ ಕಳೆಯುತ್ತಿಿದ್ದರೂ ನಮಗೆ ಮೂಲಭೂತ ಸೌಲಭ್ಯ ಕೊಡಿ ಎಂದು ಜನರು ಕೇಳುತ್ತಿಿರುವುದನ್ನು ನೋಡಿದರೆ ನಮ್ಮ ಆಡಳಿತ ವ್ಯವಸ್ಥೆೆಯ ಕಾರ್ಯವೈಪಲ್ಯ ಕಣ್ಣಿಿಗೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದರು.
ಜಿಲ್ಲಾಾ ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿದರು, 15 ದಿನದೊಳಗಾಗಿ ಸರಿಪಡಿಸುತ್ತೇವೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ವೈ.ಎಚ್. ಭರವಸೆ ನೀಡಿದ್ದರಿಂದ, ಹೋರಾಟವನ್ನು ಹಿಂಪಡೆದರು. ಈ ವೇಳೆ ಹಲವಾಗಲು ಮಹೇಂದ್ರಕುಮಾರ್, ಹೆಚ್.ನೀಲಮ್ಮ, ಭಾಗ್ಯಮ್ಮ, ಸೇರಿದಂತೆ ಆನೇಕರು ಇದ್ದರು.
30 ವರ್ಷಗಳಿಂದ ಮೂಲಸೌಲಭ್ಯಗಳಿಲ್ಲದೇ ಪರದಾಡುತ್ತಿರುವ 30 ಕುಟುಂಬಗಳು

