ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ನೋಂದಣಿ ಕಾಯ್ದೆೆ ಅನ್ವಯ ಪ್ರಕಾಶಕರು 2025ರಲ್ಲಿ ಮುದ್ರಿಿಸಿ ಪ್ರಕಟಿಸಿದ ಮೊದಲ ಆವೃತ್ತಿಿಯ ಪುಸ್ತಕಗಳ 3 ಪ್ರತಿಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ್ ಪಾರ್ಕ್, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು. ರಾಜ್ಯ ಮಟ್ಟದ ಪುಸ್ತಕ ಆಯ್ಕೆೆ ಸಮಿತಿಯು ಅಯ್ಕೆೆಗಾಗಿ ಸಲ್ಲಿಸಲಾದ 3 ಪ್ರತಿಗಳಲ್ಲಿ ಒಂದನ್ನು ಪರಿಗಣಿಸಲಾಗುತ್ತದೆ.
2025ರಲ್ಲಿ ರಾಜ್ಯದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪ್ರತಿ ಶೀರ್ಷಿಕೆ ಮೂರು ಪ್ರತಿಗಳನ್ನು ಮುತ್ತಾಾಗಿ ಸಲ್ಲಿಸಿ ದಿನಾಂಕ: 31-01-2026ರ ಸಂಜೆ 5.30ರ ಒಳಗಾಗಿ ನೋಂದಣಿ ಮಾಡಿಸತಕ್ಕದ್ದು, ನೋಂದಣಿಯಾದ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆೆ ಸಮಿತಿಯಿಂದ ಆಯ್ಕೆೆಗಾಗಿ ಪರಿಗಣಿಸಲಾಗುವುದು. ಅಂತಿಮ ದಿನಾಂಕದ ನಂತರ ನೋಂದಣಿಯಾಗುವ ಪುಸ್ತಕಗಳನ್ನು ಆಯ್ಕೆೆಗಾಗಿ ಪರಿಗಣಿಸಲಾಗುವುದಿಲ್ಲ.
ಸಾಹಿತ್ಯ, ಮಕ್ಕಳ ಸಾಹಿತ್ಯ, ಕಲೆ ಮತ್ತು ವಿಜ್ಞಾನ ಪ್ರಕಾರಗಳ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆೆ ಸಮಿತಿಗೆ ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ ಹೆಚ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

