ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.09:
ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಿಗೆ ಈ ವರ್ಷದ ನವೆಂಬರವರೆಗೆ ಎಸ್ಸಿಿಪಿ ಮತ್ತು ಟಿಎಸ್ಪಿಿ ಯೋಜನೆಯಡಿ 346.73 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ವಿಧಾನಸಭೆಯಲ್ಲಿ ಎಚ್.ಕೆ. ಸುರೇಶ್ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಯಾವುದೇ ಪಕ್ಷ ತಾರತಮ್ಯ ಮತ್ತು ರಾಜಕೀಯ ಇಲ್ಲದೆ ಎಲ್ಲಾ ಭಾಗದಲ್ಲಿಯೂ ಕೆರೆಗಳ ಸಂರಕ್ಷಣೆ ಮಾಡಲಾಗುತ್ತಿಿದೆ ಎಂದು ಹೇಳಿದರು.
ವಿಶೇಷ ಘಟಕ ಯೋಜನೆಯಡಿ 233.33 ಕೋಟಿ ರೂ., ಗಿರಿಜನ ಉಪಯೋಜನೆ ಅಡಿಯಲ್ಲಿ 113.40 ಕೋಟಿ ರೂ. ಯೋಜನೆಯಡಿ ಖರ್ಚು ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಅಲ್ಲದೆ, 2022-23 ನೇ ಸಾಲಿನಲ್ಲಿ 360.01 ಕೋಟಿ ರೂ., 2023-24 ನೇ ಸಾಲಿನಡಿ 70.06 ಕೋಟಿ ರೂ., 2024-25ನೇ ಸಾಲಿನಲ್ಲಿ 415.69 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಳೆದ ಮೂರು ವರ್ಷಗಳ ವಿವರಣೆ ನೀಡಿದರು.
ಯಾವುದೇ ಕ್ಷೇತ್ರಕ್ಕೂ ಸಹ ತಾರತಮ್ಯ ಮಾಡಿಲ್ಲ. ಯಾವುದೇ ಪಕ್ಷದ ಶಾಸಕರಿದ್ದರೂ ಸಹ ಕೆರೆಗಳ ಅಭಿವೃದ್ಧಿಿಗೆ ಅಗತ್ಯ ನೆರವು ಒದಗಿಸಲಾಗಿದೆ. ಬೇಲೂರು ವಿಧಾನಸಭಾ ಕ್ಷೇತ್ರಕ್ಕೂ ಸಹ 25.40 ಕೋಟಿ ರೂ. ಒದಗಿಸಲಾಗಿದೆ ಎಂದು ಸಚಿವರು ಶಾಸಕ ಎಚ್.ಕೆ. ಸುರೇಶ್ ಆರೋಪಕ್ಕೆೆ ಉತ್ತರ ನೀಡಿದರು.

