ಸುದ್ದಿಮೂಲ ವಾರ್ತೆ ಬಳಗಾನೂರು, ಜ.07:
ಸಮೀಪದ ಉಟಕನೂರು ಗ್ರಾಾಮದ ಶ್ರೀಅಡವಿಸಿದ್ದೇಶ್ವರ ಮಠದಲ್ಲಿ ಜ. 11ರಂದು ಜರುಗಲಿರುವ ಲಿಂಶ್ರೀಮರಿಬಸವಲಿಂಗ ದೇಶಿ ಕೇಂದ್ರ ಶಿವಯೋಗಿಗಳ 35ನೇ ಜಾತ್ರಾಾಮಹೋತ್ಸವ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಿಕೊಂಡಿದ್ದು ಸದ್ಭಕ್ತರು ಪಾಲ್ಗೊೊಂಡು ಪಾವನರಾಗುವಂತೆ ಶ್ರೀ ಅಡವಿಸಿದ್ದೇಶ್ವರ ಶ್ರೀಮಠದ ಪೀಠಾಧಿಪತಿ ಶ್ರೀಮರಿಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಾಮಿಗಳು ಹೇಳಿದರು.
ಜಾತ್ರಾಾ ಮಹೋತ್ಸವ ನಿಮಿತ್ತ ಹಮ್ಮಿಿಕೊಂಡ ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಜ.9ರಂದು ಸಾಯಂಕಾಲ 4 ಗಂಟೆಗೆ ಶೇಂಗಾಹೋಳಿಗೆ ಮೆರವಣಿಗೆ ಗ್ರಾಾಮದ ಶ್ರೀಬಸವನ ಕಟ್ಟೆೆಯಿಂದ ಶ್ರೀಮಠದವರೆಗೆ ಜರಗುವುದು. ಅಂದಿನ ದಿನ ಪುರಾಣ ಪ್ರವಚನ ಕಾರ್ಯಕ್ರಮ ಸಾನಿಧ್ಯವನ್ನು ಮಹಾರಾಜ ನಿರಂಜನ ಜಗದ್ಗುರು ಕೀರ ದಿಂಗಾಲೇಶ್ವರ ಮಹಾಸ್ವಾಾಮಿಗಳು ವಹಿಸಿ ಆಶೀರ್ವಚನ ನೀಡಲಿದ್ದಾಾರೆ. ಜ.10ರಂದು ಬೆಳಿಗ್ಗೆೆ 11 ಗಂಟೆಗೆ ಜೋಡೆತ್ತುಗಳ ಮೆರವಣಿಗೆ, ಹಾಗೂ ರೈತರಿಗೆ ಗೌರವ ಸನ್ಮಾಾನ ಕಾರ್ಯಕ್ರಮ. ನಂತರ 11 ಗಂಟೆಗೆ ಸಿಂಧನೂರು ಶ್ರೀಶಕ್ತಿಿ ರಕ್ತ ಭಂಡಾರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಜರುಗಲಿದೆ.
ಬೆಳಿಗ್ಗೆೆ 11 ಗಂಟೆಗೆ ಉಚ್ಚಾಾಯ ಮಹೋತ್ಸವ, ಸಾಯಂಕಾಲ 6 ಗಂಟೆಗೆ ಮಹಾರಥೋತ್ಸವ ಜರುಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರರಾದ ಹರ್ಲಾಪೂರ ಸದಾನಂದ ಶಾಸ್ತ್ರೀಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರವಚನಕಾರ ಮನೋಹರ ಪಿ.ಹಿರೇಮಠ, ತಬಲಾವಾದಕ ಪ್ರತಾಪಕುಮಾರ ಹಿರೇಮಠ ಗ್ರಾಾಮದ ಮುಖಂಡರು, ಸದ್ಭಕ್ತರು ಸುತ್ತಲಿನ ಗ್ರಾಾಮಗಳ ಸದ್ಭಕ್ತರು ಪಾಲ್ಗೊೊಂಡಿದ್ದರು.

