ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.13
ಕಳೆದ ವರ್ಷಿಕ್ಕೆೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಅನ್ನದಾತರ ಆತ್ಮಹತ್ಯೆೆ ಪ್ರಕರಣ ಇಳಿಮುಖವಾಗಿದ್ದರೂ ರಾಷ್ಟ್ರದಲ್ಲಿ 2ನೇ ಸ್ಥಾಾನ ಪಡೆದಿದೆ.
ಈ ವರ್ಷ ಜನವರಿಯಿಂದ ನವೆಂಬರ್ ಅಂತ್ಯದವರೆಗೆ 377 ರೈತರು ಆತ್ಮಹತ್ಯೆೆಗೆ ಶರಣಾಗಿದ್ದಾರೆ ಎಂದು ರಾಜ್ಯ ಕೃಷಿ ಇಲಾಖೆ ಮಾಹಿತಿ ನೀಡಿದೆ. ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಮಂದಿ ಅನ್ನದಾತರು ಆತ್ಮಹತ್ಯೆೆಗೆ ಶರಣಾಗಿದ್ದಾರೆ.
ಅಭಿವೃದ್ಧಿಿ ಹೊಂದಿರುವ ರಾಜ್ಯ ಎಂದು ಹೆಸರು ಪಡೆದಿರುವ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆೆ ಅಧಿಕವಾಗಿರುವುದು ಸರ್ಕಾರಕ್ಕೆೆ ದೊಡ್ಡ ಸವಾಲಾಗಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ರೈತರ ಆತ್ಮಹತ್ಯೆೆ ಪ್ರಕರಣಗಳಲ್ಲಿ ಇಳಿಕೆಯಾಗಿದ್ದರೂ 2ನೇ ಸ್ಥಾಾನದಲ್ಲಿರುವುದು ಬೇಸರದ ಸಂಗತಿಯಾಗಿದೆ.
ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಕರ್ನಾಟಕ ಹೆಸರುಗಳಿಸಿದ್ದರೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರ ಸಾವು ಮಾತ್ರ ನಾಚಿಕೆಗೇಡು. ರಾಜ್ಯದ ಜನರಿಗೆ ಅನ್ನ ನೀಡುವ ರೈತರು ಅನೇಕ ಸಮಸ್ಯೆೆಗಳ ಸುಳಿಯಲ್ಲಿ ಸಿಕ್ಕು ನಲುಗಿದ್ದಾರೆ. ಇದರಿಂದ ಹೊರಬರಲಾದೆ ಅಂತಿಮವಾಗಿ ಆತ್ಮಹತ್ಯೆೆ ಶರಣಾಗುತ್ತಿಿದ್ದಾರೆ.
ಒಂದೆಡೆ ಬರ, ಇನ್ನೊೊಂದೆಡೆ ಅತೀವೃಷ್ಟಿಿಗೆ ಬೆಳೆ ನಷ್ಟ, ಬೆಲೆ ಕುಸಿತ, ಕಾಡು ಪ್ರಾಾಣಿಗಳ ಹಾವಳಿ ಹಾಗೂ ಸಾಲದ ಶೂಲಕ್ಕೆೆ ಸಿಲುಕಿ ರೈತರು ಆತ್ಮಹತ್ಯೆೆಯತ್ತ ಹೆಜ್ಜೆೆ ಇಡುತ್ತಿಿದ್ದಾರೆ.
ರೈತರ ಆತ್ಮಹತ್ಯೆೆ : ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 2,809 ರೈತರು ಆತ್ಮಹತ್ಯೆೆಗೆ ಶರಣಾಗಿದ್ದಾರೆ. 2023-24 ರಿಂದ 2025 ರ ನವೆಂಬರ್ವರೆಗೆ 2,809 ರೈತರು ಆತ್ಮಹತ್ಯೆೆಯ ಮೊರೆ ಹೋಗಿದ್ದಾರೆ ಎಂದು ಕೃಷಿ ಇಲಾಖೆ ನೀಡಿದ ಅಂಕಿ ಆಂಶದಲ್ಲಿ ಮಾಹಿತಿ ಲಭ್ಯವಾಗಿದೆ.
2023-2024ರಲ್ಲಿ ರಾಜ್ಯದಲ್ಲಿ 1,254 ರೈತರು ಆತ್ಮಹತ್ಯೆೆ ಮಾಡಿಕೊಂಡಿದ್ದಾರೆ. 2024-25ನೇ ಸಾಲಿನಲ್ಲಿ 1,178 ಹಾಗೂ 2025-26ನೇ ಸಾಲಿನ ನವೆಂಬರ್ವರೆಗೆ 377 ರೈತರ ಆತ್ಮಹತ್ಯೆೆ ಪ್ರಕರಣಗಳು ವರದಿಯಾಗಿವೆ.
2023-24ನೇ ಸಾಲಿನಲ್ಲಿ ವರದಿಯಾಗಿರುವ 1,254 ರೈತರ ಆತ್ಮಹತ್ಯೆೆ ಪ್ರಕರಣಗಳ ಪೈಕಿ ಅಂದಾಜು 164 ಪ್ರಕರಣಗಳು ವೈಯಕ್ತಿಿಕ ಉದ್ದೇಶ ಸೇರಿ ಇತರ ಉದ್ದೇಶದಿಂದ ತಿರಸ್ಕೃತವಾಗಿವೆ. 1,090 ಪ್ರಕರಣಗಳು ಪರಿಹಾರಕ್ಕೆೆ ಅರ್ಹ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಅದೇ 2024-25 ಸಾಲಿನಲ್ಲಿ ವರದಿಯಾಗಿರುವ 1,178 ಪ್ರಕರಣಗಳ ಪೈಕಿ ಅಂದಾಜು 156 ಪ್ರಕರಣಗಳು ತಿರಸ್ಕೃತವಾಗಿದ್ದು, 1,022 ಪ್ರಕರಣಗಳನ್ನು ಪರಿಹಾರ ನೀಡಲು ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದೆ. ಇನ್ನು 2025-26ನೇ ಸಾಲಿನಲ್ಲಿ ನವೆಂಬರ್ 15ರವರೆಗೆ ವರದಿಯಾದ 377 ಪ್ರಕರಣಗಳ ಪೈಕಿ 46 ತಿರಸ್ಕೃತವಾಗಿದೆ. ಇನ್ನು 331 ಪರಿಹಾರ ಯೋಗ್ಯ ಪ್ರಕರಣ ಎಂದು ತೀರ್ಮಾನಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಿಹಾರ ವಿತರಣೆಯಲ್ಲಿ ತಾಂತ್ರಿಿಕ ಸಮಸ್ಯೆೆ :
ಆತ್ಮಹತ್ಯೆೆ ಮಾಡಿಕೊಂಡ ಅರ್ಹ ರೈತರ ಕುಟುಂಬಕ್ಕೆೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿಿದೆ. ಕೆಲವು ತಾಂತ್ರಿಿಕ ಸಮಸ್ಯೆೆ ಇರುವುದರಿಂದ ರೈತರ ಆತ್ಮಹತ್ಯೆೆ ಪ್ರಕರಣಗಳಲ್ಲಿ ಪರಿಹಾರ ಪಾವತಿಗೆ ವಿಳಂಬವಾಗಿರುವುದಾಗಿ ಕೃಷಿ ಇಲಾಖೆ ಮಾಹಿತಿ ನೀಡಿದೆ. ಡಿಬಿಟಿ ಘಟಕದಲ್ಲಿ ವಿವಿಧ ತಾಂತ್ರಿಿಕ ಸಮಸ್ಯೆೆಗಳಿಂದ ಪರಿಹಾರ ಪಾವತಿ ವಿಳಂಬವಾಗುತ್ತಿಿದೆ. ತಾಂತ್ರಿಿಕ ಸಮಸ್ಯೆೆ ಬಗೆಹರಿದ ನಂತರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.
2023-24ನೇ ಸಾಲಿನಲ್ಲಿ ಆತ್ಮಹತ್ಯೆೆ ಮಾಡಿಕೊಂಡ ಅರ್ಹ 1,081 ಪ್ರಕರಣಗಳಿಗೆ ಸುಮಾರು 54 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ 896 ರೈತರ ಕುಟುಂಬಕ್ಕೆೆ ಸುಮಾರು 44.80 ಕೋಟಿ ರೂ. ಪರಿಹಾರ ವಿತರಿಸಲಾಗಿದ್ದು, ಇನ್ನೂ 121 ಪ್ರಕರಣಗಳಿಗೆ ಪರಿಹಾರ ಪಾವತಿಯಾಗಿಲ್ಲ. ಅದೇ ರೀತಿ 2025-26ನೇ ಸಾಲಿನಲ್ಲಿ ಈವರೆಗೆ 193 ಪ್ರಕರಣಗಳಲ್ಲಿ ಲಾನುಭವಿಗಳಿಗೆ 9.65 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಸುಮಾರು 112 ಪ್ರಕರಣಗಳು ಪರಿಶೀಲನಾ ಹಂತದಲ್ಲಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಹಾವೇರಿ ಮುಂಚೂಣಿ
ಕೃಷಿ ಇಲಾಖೆ ಮಾಹಿತಿ ಪ್ರಕಾರ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ರೈತರು ಮೃತಪಟ್ಟಿಿದ್ದಾರೆ. ಇಲ್ಲಿ 297 ರೈತರು ಆತ್ಮಹತ್ಯೆೆ ಮಾಡಿಕೊಂಡಿರುವುದು ವರದಿಯಾಗಿವೆ. ಬೆಳಗಾವಿಯಲ್ಲಿ ಸುಮಾರು 260 ಆತ್ಮಹತ್ಯೆೆ ಪ್ರಕರಣಗಳು, ಕಲಬುರ್ಗಿಯಲ್ಲಿ 234 ಪ್ರಕರಣಗಳು, ಧಾರವಾಡದಲ್ಲಿ 195 ಪ್ರಕರಣಗಳು, ಮೈಸೂರಲ್ಲಿ 190, ಬೀದರ್ನಲ್ಲಿ ಸುಮಾರು 159, ಹಾಸನದಲ್ಲಿ ಸುಮಾರು 118 ಹಾಗೂ ಮಂಡ್ಯದಲ್ಲಿ ಸುಮಾರು 115 ರೈತರ ಆತ್ಮಹತ್ಯೆೆ ಪ್ರಕರಣಗಳು ವರದಿಯಾಗಿವೆ.
ಮೊದಲ ಸ್ಥಾಾನ ಮಹಾರಾಷ್ಟ್ರಕ್ಕೆೆ
ರಾಷ್ಟ್ರದಲ್ಲಿ ರೈತರ ಆತ್ಮಹತ್ಯೆೆ ಪ್ರಕರಣ ಮಹಾರಾಷ್ಟ್ರದಲ್ಲಿ ಅಧಿಕವಾಗಿದೆ. ಹೀಗಾಗಿ ಈ ರಾಜ್ಯ ಮುಂಚೂಣಿಯಲ್ಲಿದೆ. 2ನೇ ರಾಜ್ಯ ಕರ್ನಾಟಕವಾದರೆ ಮೂರನೇ ರಾಜ್ಯ ತೆಲಂಗಾಣ.

