ಸುದ್ದಿಮೂಲ ವಾರ್ತೆ ಸಿರವಾರ, ನ.28:
ತಂತ್ರಜ್ಞಾನ ಬಳಕೆ, ಯಾವುದೇ ಪ್ರಕರಣಗಳು ಬಾಕಿ ಉಳಿಸಿಕೊಳ್ಳದೆ, ಸ್ವಚ್ಛ, ಸುಂದರ, ಜನಸ್ನೇಹಿಯಾಗಿ ಕಾರ್ಯವನ್ನು ನಿರ್ವಹಿಸಿದಕ್ಕೆೆ ಭಾರತದಲ್ಲಿ ಅತ್ಯುತ್ತಮ 3ನೇ ಪೋಲಿಸ್ ಠಾಣೆ ಎಂದು ಭಾರತ ಸರ್ಕಾರ ನ.28ರಂದು ಛತ್ತೀಸ್ಗಢ ರಾಯಪುರ, ಐಐಎಂ ಸಭಾಂಗಣದಲ್ಲಿ ನಡೆದ ದೇಶದ ಎಲ್ಲಾ ರಾಜ್ಯಗಳ ಡಿಜಿ ಹಾಗೂ ಐಜಿಪಿ ಅವರುಗಳ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೋಲಿಸ್ ಠಾಣೆಯ ಪಿಎಸ್ಐ ಗುರುಚಂದ್ರ ಯಾದವ್ ಅವರಿಗೆ ಶುಕ್ರವಾರ ವಿತರಣೆ ಮಾಡಿದರು.
ಕರ್ನಾಟಕದಲ್ಲಿ ಕವಿತಾಳ ಪೋಲಿಸ್ ಠಾಣೆ ಮಾತ್ರ ಈ ಟ್ರೋೋಫಿ ಪಡೆದಿದ್ದು ವಿಶೇಷವಾಗಿದೆ ಎಂದು ಸಿಪಿಐ ಶಶಿಕಾಂತ ಸಂತಸ ವ್ಯಕ್ತಪಡಿಸಿದರು.
ಭಾರತದಲ್ಲಿ 3ನೇ ಅತ್ಯುತ್ತಮ ಕವಿತಾಳ ಪೊಲೀಸ್ ಠಾಣೆ, ಗೃಹ ಸಚಿವ ಅಮಿತ್ ಶಾ ರಿಂದ ಟ್ರೋೋಫಿ ವಿತರಣೆ

