ಸುದ್ದಿಮೂಲವಾರ್ತೆ
ಕೊಪ್ಪಳ ಜೂ 19:ಮಹಿಳಾ ಪ್ರಯಾಣಿಕರು ಆಂಕರ್: ಕಳೆದ ವಾರ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆಯಿಂದಾಗಿ ಈಗ ಮಹಿಳೆಯರು ರಾಜ್ಯದಾದ್ಯಂತ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಈ ಮಧ್ಯೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ. ಈ ಮಧ್ಯೆ ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ ೪೬.೭೩ ರಷ್ಟು ಮಹಿಳಾ ಪ್ರಯಾಣಿಕರ ಪ್ರಯಾಣ ಮಾಡಿರುವುದಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ಸಂಚಾರಿ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ಈ ಮೊದಲು ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ 1.64 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ 65600 ಮಹಿಳೆಯರು ಹಾಗು 98400 ಪುರುಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಈಗ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಬಹುತೇಕ ಅರ್ಧದಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಶಕ್ತಿ ಯೋಜನೆಯು ಜಾರಿಯಾದ ಜೂನ್ ೧೧ ರಿಂದ ೧೬ ರವರೆಗೆ ಒಟ್ಟು ೮.೫೩ ಲಕ್ಷ ಪ್ರಯಾಣಿಕರ ಪ್ರಯಾಣಿಸಿದ್ದಾರೆ. ಅದರಲ್ಲಿ ೩.೮೪ ಮಹಿಳಾ ಪ್ರಯಾಣಿಕರ ಪ್ರಯಾಣಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ೫ ಡಿಪೋಗಳಿಂದ ೪೧೩ ಬಸ್ ಓಡಾಟ ಮಾಡುತ್ತಿವೆ. ಅದರಲ್ಲಿ ಪ್ರತಿದಿನ ೨೨೦೦ ಟ್ರಿಪ್ ನಲ್ಲಿ ಓಡಾಟ ಮಾಡುತ್ತಿವೆ. ಆದರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ೮೦ ರಿಂದ ೯೦ ಟ್ರಿಪ್ ಜಾಸ್ತಿ ಮಾಡಲಾಗಿದೆ. ಜೂನ್ ೧೧ ರಿಂದ ೧೬ ರವೆರೆ ೩.೪೧ ಕೋಟಿ ಆದಾಯ ಸಂಗ್ರಹವಾಗಿದೆ. ಪೈಕಿ ೧.೨೭ ಕೋಟಿ ಮಹಿಳಾ ಪ್ರಯಾಣಿಕರ ಆದಾಯದ ಟಿಕೆಟ್ ನೀಡಲಾಗಿದೆ. ಮಹಿಳೆಯರಿಂದ ಶೇಕಡಾ ೩೭ ರಷ್ಟು ಪ್ರಯಾಣಿಕರ ಕಂದಾಯ ಬಂದಿದೆ ಎಂದು ಕೊಪ್ಪಳ ವಿಭಾಗೀಯ ಕಚೇರಿಯ ಡಿಟಿಓ ರಾಜೇಂದ್ರ ಜಾಧವ ಮಾಹಿತಿ ನೀಡಿದ್ದಾರೆ.
ವಿಶೇಷ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರ ಓಡಾಟ ಹೆಚ್ಚಾಗಿದ್ದು ಇದರಿಂದಾಗಿ ಈಗ ಬಸ್ ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಆದಾಯ ಮಾತ್ರ ಕಡಿಮೆಯಾಗಿದೆ ಎಂಬ ಮಾಹಿತಿ ಇದೆ.