ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ರಾಜ್ಯದ ವಿವಿಧ ಇಲಾಖೆ, ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಸಂಖ್ಯೆೆ ಹೆಚ್ಚುತ್ತಿಿದ್ದು ಸದ್ಯ 25 ಸಾವಿರ ಅರ್ಜಿಗಳ ವಿಚಾರಣೆ ವಿವಿಧ ಹಂತದಲ್ಲಿ ನಡೆಯುತ್ತಿಿವೆ ಎಂದು ಕರ್ನಾಟಕ ಲೋಕಾಯುಕ್ತ ಕಾರ್ಯದರ್ಶಿ ಕೆ.ಶ್ರೀನಾಥ ತಿಳಿಸಿದರು.
ರಾಯಚೂರಿನ ಜಿಲ್ಲಾಾಡಳಿತದ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು.
ಕರ್ನಾಟಕ ಲೋಕಾಯುಕ್ತದಲ್ಲಿ 2022ರಲ್ಲಿ 8 ಸಾವಿರ ಪ್ರಕರಣಗಳಿದ್ದವು, ನ್ಯಾಾಯಮೂರ್ತಿ ಬಿ.ಎಸ್.ಪಾಟೀಲ ರು ಲೋಕಾಯುಕ್ತರಾದ ನಂತರ ಆ ಪ್ರಮಾಣ 45 ಸಾವಿರಕ್ಕೆೆ ಹೆಚ್ಚಿಿದೆ. ಆ ಪ್ರಕರಣಗಳ ವಿಲೇವಾರಿಗೂ ಕ್ರಮ ವಹಿಸಿದ್ದರ ಪರಿಣಾಮ ಇದುವರೆಗೂ 20 ಸಾವಿರ ಪ್ರಕರಣಗಳ ವಿಲೇವಾರಿ ಮಾಡಿ ವಿವಿಧ ಹಂತದಲ್ಲಿ ಶಿಕ್ಷೆೆ ಪ್ರಮಾಣ, ದಂಡ, ಅವರ ಸೇವಾ ಪುಸ್ತಕದಲ್ಲಿ , ಬಡ್ತಿಿ ಮತ್ತಿಿತರ ಕ್ರಮಗಳಾಗಿವೆ ಎಂದರು.
ಇನ್ನೂ 25 ಸಾವಿರ ಪ್ರಕರಣಗಳಿದ್ದು ಅವುಗಳ ವಿಲೇವಾರಿ ಹಂತಹಂತವಾಗಿ ಮಾಡಲಾಗುವುದು. ಪ್ರಕರಣಗಳು ಹೆಚ್ಚಿಿದ್ದು ಸಿಬ್ಬಂದಿ ಕೊರತೆಯ ಕಾರಣದಿಂದ ನಿಧಾನಗತಿಯಲ್ಲಿ ಪ್ರಕರಣಗಳ ವಿಲೇವಾರಿ ಆಗುತ್ತಿಿರುವುದಾಗಿ ಪ್ರಶ್ನೆೆಯೊಂದಕ್ಕೆೆ ಉತ್ತರಿಸಿದರು.
ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಣದ ಆಸೆಗಾಗಿ ಲೋಪ ಎಸಗುತ್ತಿಿರುವುದು ಕಂಡು ಬರುತ್ತಿಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಪವೆಸಗಿ ವಾರೆಂಟ್ ಸ್ವೀಕರಿಸುವ ಹಂತಕ್ಕೆೆ ತಲುಪಿದ್ದು ನೋವಿನ ಸಂಗತಿ ಎಂದು ತಿಳಿಸಿದರು.
ಎಲ್ಲಾಾ ಜಿಲ್ಲೆೆಯಲ್ಲೂ ಲೋಕಾಯುಕ್ತ ಎಸ್ಪಿ, ಡಿಎಸ್ಪಿ ಇದ್ದು ಪ್ರಕರಣ ವಿಚಾರಿಸಿ ವರದಿ ಸಲ್ಲಿಸುತ್ತಾಾರೆ ಲೋಕಾಯುಕ್ತರ ಕಾರ್ಯಾಚರಣೆ, ಭೇಟಿ ತಾತ್ಕಾಾಲಿಕವಲ್ಲ ಅಕ್ರಮ ಆಸ್ತಿಿ ಗಳಿಕೆ ಪ್ರಕರಣಗಳನ್ನು ಲೋಕಾಯುಕ್ತ ಪತ್ತೆೆ ಮಾಡುತ್ತದೆ. ಆದರೆ ಶಿಕ್ಷೆೆ ನೀಡುವ ಅಧಿಕಾರವಿಲ್ಲ ವಿಶೇಷ ನ್ಯಾಾಯಾಲಯಕ್ಕೆೆ ವರದಿ ಸಲ್ಲಿಸುತ್ತೇವೆ ಅಲ್ಲಿ ಆರೋಪಿಗಳಿಗೆ ಶಿಕ್ಷೆೆ ಆಗಲಿದೆ ಎಂದರು.
ಕೆರೆ ಒತ್ತುವರಿ ಹಿನ್ನೆೆಲೆಯಲ್ಲಿ 2018ರಲ್ಲೇ ಲೋಕಾಯುಕ್ತದಿಂದ ರಾಜ್ಯದ ಎಲ್ಲಾಾ ಕಡೆಗೆ ಪ್ರಕರಣಗಳ ದಾಖಲಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 587 ಕೆರೆಗಳಿದ್ದು, 46 ಕೆರೆಗಳ ಒತ್ತುವರಿ ತಡೆದಿರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ. 319 ಕೆರೆಗಳ ಸರ್ವೆ ನಡೆಸಿದ ಬಗ್ಗೆೆ ನಕ್ಷೆ ನೀಡಬೇಕು ಎಂದು ಎಡಿಎಲ್ಆರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 716 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 561 ಘಟಕಗಳು ಮಾತ್ರ ಸುಸ್ಥಿಿತಿಯಲ್ಲಿದ್ದು 155 ಘಟಕಗಳು ನಿಷ್ಕ್ರಿಿಯವಾಗಿದ್ದು ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಿಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿಿನ ಸೂಚನೆ ನೀಡಿದಾಗ್ಯೂ ರಾಯಚೂರು ನಗರ ಸೇರಿದಂತೆ ಎಲ್ಲಾಾ ಕಡೆಗೂ ಏನೂ ಕ್ರಮಗಳಾಗಿಲ್ಲ ಈ ಬಗ್ಗೆೆ ಕೂಡಲೇ ಕ್ರಮ ಜರುಗಿಸಿ ವಿವರವಾದ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಅಕ್ರಮಗಳ ಬಗ್ಗೆೆ ಯಾರೇ ದೂರು ಸಲ್ಲಿಸಿದರೂ ವಿಚಾರಣೆ ಆಗಲಿದೆ. ಒಂದೊಮ್ಮೆೆ ತಮ್ಮ ಜಿಲ್ಲಾಾ ಲೋಕಾಯುಕ್ತ ಗಮನಕ್ಕೆೆ ಬಂದರೂ ಸ್ವಯಂ ಪ್ರೇರಣೆಯ ದೂರು ದಾಖಲಿಸಿಕೊಳ್ಳಲು ಅವಕಾಶವಿದೆ ಎಂದ ಅವರು ಅಕ್ರಮ ಮರಳಿನ ಬಗ್ಗೆೆ ಇದುವರೆಗೆ ಯಾವುದೆ ದೂರು ದಾಖಲಾಗಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಅಪರ ನಿಬಂಧಕರಾದ ನ್ಯಾಾಘಿ ಎ.ವಿ.ಪಾಟೀಲ, ಜಿಲ್ಲಾಧಿಕಾರಿ ನಿತೀಶ್ ಕೆ., ಲೋಕಾಯುಕ್ತದ ಅಧೀಕ್ಷಕ ಸತೀಶ್ ಎಸ್ ಚಿಟಗುಪ್ಪಿಿ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಕ್ಷ ಗಿರಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಇತರರಿದ್ದರು.
45 ಸಾವಿರ ದೂರು, 20 ಸಾವಿರ ಅರ್ಜಿ ವಿಲೇವಾರಿ- ಶ್ರೀನಾಥ

