50 ಲಕ್ಷಕ್ಕೂ ಅಧಿಕ ಹಣಪತ್ತೆ
ದಂಡಾಧಿಕಾರಿ ರಾಜೇಶ್ವರಿ ಪಿಎಸ್ ನೇತೃತ್ವದಲ್ಲಿ 50 ಲಕ್ಷ ವಶ
ಜೇವರ್ಗಿ:ತಾಲೂಕಿನ ಚಿಗರಳ್ಳಿ ಕ್ರಾಸ್ ಹೆದ್ದಾರೆ ಮೇಲೆ ತೆಲಂಗಾಣ ರಾಜ್ಯದ ಕಾರಿನಲ್ಲಿ 50 ಲಕ್ಷಕ್ಕೂ ಹೆಚ್ಚು ನಗದು ಹಣ ಪತ್ತೆಯಾಗಿದ್ದು ಕಂಡುಬಂದಿರುತ್ತದೆ.
ಚಿಗರಳ್ಳಿ ಕ್ರಾಸ್ ಹತ್ತಿರದ ಚೆಕ್ ಪೋಸ್ಟ್ ಬಳಿ ತೆಲಂಗಾಣ ಮೂಲದ ವ್ಯಕ್ತಿಯೊಬ್ಬ ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದ 50 ಲಕ್ಷಕ್ಕೂ ಅಧಿಕ ನಗದು ಸಾಗಿಸುತ್ತಿದ್ದ ವೇಳೆ ತಹಶೀಲ್ದಾರ್ ರಾಜೇಶ್ವರಿ ಪಿ.ಎಸ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನೂ ಈ ಹಣ ಯಾರಿಗೆ ಸೇರಿದ್ದು ಅನ್ನುವುದು ನಿಖರವಾದ ಮಾಹಿತಿ ದೊರೆತಿಲ್ಲ. ಮಾಹಿತಿ ದೊರೆತ ತಕ್ಷಣ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.